ಸ್ಯಾಂಡಲ್ವುಡ್ನ ಡಿಬಾಸ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಆಗಾಗ ಪ್ರವಾಸ ಮಾಡುತ್ತಲೇ ಇರುತ್ತಾರೆ. ಆ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾ ಇರುತ್ತಾರೆ.
ಇದೀಗ ಮಗ ಹಾಗೂ ದಿನಕರ್ ಮಕ್ಕಳ ಜೊತೆಗೆ ಟ್ರಿಪ್ ಹೋಗಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇದನ್ನೂ ಓದಿ :“ನನ್ನ ದೇಶವನ್ನು ದ್ವೇಷಿಸುವವರನ್ನು ನಾನು ದ್ವೇಷಿಸುತ್ತೇನೆ”-ಎಮ್.ಕೆ.ಮಠ ; Chittara Exclusive
ಇತ್ತೀಚೆಗಷ್ಟೇ ವಿದೇಶಿ ರೆಸ್ಟೋರೆಂಟ್ನಲ್ಲಿ ಬೃಹತ್ ಮಗ್ನಲ್ಲಿ ಕಾಫಿ ಕುಡಿದು, ಗಜಗಾತ್ರದ ಕ್ರೊಸೆಂಟ್ ಸವಿದಿದ್ದ ವಿಜಯಲಕ್ಷ್ಮೀ ಇದೀಗ ಲಕ್ಷುರಿ ಬೋಟ್ ಟೂರ್ ಮಾಡಿದ್ದಾರೆ. ಮಗ ವಿನೀಶ್ ಜೊತೆಗೆ ಲಕ್ಷುರಿ ಬೋಟ್ನಲ್ಲಿ ವಿಜಯಲಕ್ಷ್ಮೀ ಪ್ರವಾಸ ಕೈಗೊಂಡಿದ್ದಾರೆ. ಲಕ್ಷುರಿ ಬೋಟ್ನಲ್ಲಿ ತಾವು ಕ್ಲಿಕ್ಕಿಸಿಕೊಂಡ ಸುಂದರ ಫೋಟೋಗಳನ್ನ ವಿಜಯಲಕ್ಷ್ಮೀ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ :ತಂದೆ-ಮಗಳ ಬಾಂಧವ್ಯಕ್ಕೆ ಮನಸ್ಸು ಕರಗೋದು ಗ್ಯಾರಂಟಿ: `ಸಿ’ ಸಿನಿಮಾದಲ್ಲಿದೆ ಗಟ್ಟಿ ಕಥೆ
ಫ್ಯಾನ್ಸ್ಗೆ ಮೊದಲೇ ದರ್ಶನ್ ಹಾಗೂ ವಿಜಯಲಕ್ಷ್ಮೀ ಜೊತೆಗೆ ಇರಬೇಕೆಂಬ ಬಯಕೆ. ಇದೀಗ ಈ ಫೋಟೋಗಳನ್ನು ನೋಡಿ, ಕಮೆಂಟ್ ಹಾಕುತ್ತಿದ್ದಾರೆ. ಹಾರ್ಟ್ ಸಿಂಬಲ್ ಹಾಕಿದ್ದಾರೆ. ಇನ್ನು ಕೆಲವರು ಅಣ್ಣನ ಫೋಟೋಗಳನ್ನು ಹಾಕಿ ಎನ್ನುತ್ತಿದ್ದಾರೆ.