Sandalwood Leading OnlineMedia

ʻರಿಪ್ಪನ್ ಸ್ವಾಮಿʼ ಆಗಿ ಬಂದ್ರು ವಿಜಯ ರಾಘವೇಂದ್ರ

ವಿಜಯ ರಾಘವೇಂದ್ರ ಅವರು ಇತ್ತಿಚಿಗೆ ಸಾಕಷ್ಟು ವಿಭಿನ್ನತೆ ಇರುವಂತ ಸಿನಿಮಾದಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಪಾತ್ರಗಳು, ಕಥೆ ಎಲ್ಲದರಲ್ಲೂಹೊಸತನವಿರುತ್ತದೆ. ಇದೀಗ ಹೊಸ ವರ್ಷದ ದಿನ ಅಂದರೆ ಯುಗಾದಿ ಹಬ್ಬಕ್ಕೆ ಹೊಸ ಸಿನಿಮಾವೊಂದರ ಫಸ್ಟ್ ಲುಕ್ ರಿಲೀಸ್ ಆಗಿದೆ.

 

 

 

 

ಪಂಚಾಂನನ ಫಿಲಂಸ್ ನಿರ್ಮಾಣದ ,ಕಿಶೋರ್ ಮೂಡುಬಿದ್ರೆ ನಿರ್ದೇಶನದ ರಿಪ್ಪನ್ ಸ್ವಾಮಿ ಕನ್ನಡ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ . ವಿಜಯ ರಾಘವೇಂದ್ರರವರು ಮುಖ್ಯ ತಾರಾಗಣದಲ್ಲಿ ಇರುವ ಈ ಸಿನಿಮಾ ಈ ಹಿಂದೆ ಮಾಲ್ಗುಡಿ ಡೇಸ್ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದ ಕಿಶೋರ್ ಮೂಡಬಿದ್ರೆ ರಚಿಸಿ ನಿರ್ದೇಶನ ಮಾಡಿದ್ದಾರೆ . ಇನ್ನು ಫಸ್ಟ್ ಲುಕ್ ನೋಡಿದಾಕ್ಷಣ ಕುತೂಹಲ ಹೆಚ್ಚಿಸಿದೆ. ವಿಜಯ್ ರಾಘವೇಂದ್ರ ಅವರು ಮಚ್ಚು ಹಿಡಿದು, ಮಟನ್ ಕಟ್ ಮಾಡುತ್ತಿದ್ದಾರೆ. ಹೀಗಾಗಿ ಕಥೆಯ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ.

 

 

 

 

ಇದನ್ನೂ ಓದಿ :ಟ್ಯಾಕ್ಸಿಕ್ʼ ನಡುವೆ ʻರಾಮಯಾಣʼ : ರಾವಣ ಮಾತ್ರವಲ್ಲ ಯಶ್ ನಿರ್ಮಾಪಕ ಕೂಡ ..!?

 

 

ಇನ್ನು ತಾರಾ ಗಣದಲ್ಲಿ ಅಶ್ವಿನಿ ಚಂದ್ರಶೇಖರ್, ಪ್ರಕಾಶ್ ತುಮ್ಮಿ ನಾಡು ,ವಜ್ರದೀರ್ ಜೈನ್ ,ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್ ಮುಂತಾದವರು ಇದ್ದಾರೆ. ಇನ್ನು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು 48 ದಿನಗಳ ಚಿತ್ರೀಕರಣವನ್ನು ಕೊಪ್ಪ ಕಳಸ ಬಾಳೆಹೊನ್ನೂರು ಸುತ್ತಮುತ್ತ ನಡೆಸಲಾಗಿದೆ.

 

 

Kannada Cinema; 'ರಿಪ್ಪನ್ ಸ್ವಾಮಿ'ಯಾದ ವಿಜಯ ರಾಘವೇಂದ್ರ | udayavani

 

 

ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತವನ್ನು ನೀಡುತ್ತಿದ್ದಾರೆ. ರಂಗನಾಥ್ ಸಿ ಎಂ ರವರು ಕ್ಯಾಮರಾ ಹಿಡಿದಿದ್ದಾರೆ. ಇನ್ನು ಈ ಸಿನಿಮಾ ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಸೇರಿಕೊಂಡು ನಿರ್ಮಾಣ ಮಾಡುತ್ತಿದ್ದಾರೆ. ಪಂಚಾನನ ಫಿಲಂಸ್ ನ ಮೊದಲನೇ ಸಿನಿಮಾ ಇದಾಗಿದೆ .ತನ್ನ ಎಲ್ಲಾ ಕೆಲಸವನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಚಿತ್ರ ಇದ್ದು ಮುಂದಿನ ಜೂನ್ ಜುಲೈ ಹೊತ್ತಿಗೆ ತೆರೆಗೆ ಬರಲು ಸಿದ್ಧವಾಗಿದೆ.

Share this post:

Related Posts

To Subscribe to our News Letter.

Translate »