ಸೌತ್ ಸ್ಟಾರ್ಗಳು ಹಾಗೂ ಬಾಲಿವುಡ್ ಸ್ಟಾರ್ಗಳ ಕಾಂಬಿನೇಷನ್ನಲ್ಲಿ ಸಿನಿಮಾ ಒಂದು ಬರುತ್ತಿದೆ. ಜವಾನ್ ಸಿನಿಮಾ ಮೂಲಕ ಕಿಂಗ್ ಖಾನ್ ಬಂಡವಾಳದಲ್ಲಿ ಸೌತ್ ಡೈರೆಕ್ಟರ್ ಆಕ್ಷನ್ ಕಟ್ ಹೇಳಿದ್ದಾರೆ. ಇದರಲ್ಲಿ ನಯನತಾರಾ, ದೀಪಿಕಾ ಪಡುಕೋಣೆ, ಶಾರುಖ್ ಖಾನ್, ವಿಜಯ್ ಸೇತುಪತಿ ನಟಿಸಿದ್ದಾರೆ.
ಶಾರುಖ್ ಖಾನ್ ಅವರ ಜವಾನ್ ಪ್ರಿವ್ಯೂ ರಿಲೀಸ್ ಆದ ನಂತರ ಅವರು ಅಭಿಮಾನಿಗಳೊಂದಿಗೆ ಆಸ್ಕ್ ಶಾರುಖ್ ಸೆಷನ್ ನಡೆಸಿದ್ದಾರೆ. ಈ ಸಂದರ್ಭ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಕೊಟ್ಟಿದ್ದಾರೆ.ಜವಾನ್ ಸಿನಿಮಾದ ಮ್ಯೂಸಿಕ್ ಹಕ್ಕುಗಳನ್ನು ಟಿ ಸಿರೀಸ್ ಸುಮಾರು 36 ಕೋಟಿ ಕೊಟ್ಟು ಖರೀದಿಸಿದೆ. ಈ ಸುದ್ದಿ ಈಗಾಗಲೇ ವೈರಲ್ ಆಗಿದೆ. ಇದೀಗ ಶಾರುಖ್ ಸಿನಿಮಾದ ಮತ್ತೊಂದು ಬ್ಯುಸಿನೆಸ್ ನ್ಯೂಸ್ ವೈರಲ್ ಆಗಿದೆ.
ಲಸ್ಟ್ ಸ್ಟೋರಿ ಬಿಟ್ಟಿ ಪಬ್ಲಿಸಿಟಿಗೆ ತಮನ್ನಾ, ವಿಜಯ್ ವರ್ಮಾ ಲವ್ ಸ್ಟೋರಿ ಗಿಮಿಕ್.!
ಶಾರುಖ್ ಖಾನ್ ಅವರು ವಿಜಯ್ ಸೇತುಪತಿಯ ಬಗ್ಗೆಯೂ ಮಾತನಾಡಿದ್ದಾರೆ. ನೆಟ್ಟಿಗರೊಬ್ಬರು ನಟನಿಗೆ ಪ್ರಶ್ನೆ ಕೇಳಿ ನಯನತಾರಾ ಹಾಗೂ ವಿಜಯ್ ಸೇತುಪತಿ ಜೊತೆ ನಟಿಸಿದ ಅನುಭವ ಹೇಗಿತ್ತು ಎಂದು ಪ್ರಶ್ನಿಸಿದ್ದಾರೆ.
ಅಟ್ಲಿ ಎಂಬ ಸಿನಿಮಾ ಮಾಂತ್ರಿಕ, ಸಿನಿಮಾ ತಾಂತ್ರಿಕ, ಒಟ್ಟಾರೆ ಚಿತ್ರಗಳ ಒಂದು ನೋಟ, ಹಿಟ್ ಎಷ್ಟು, ಫ್ಲಾಪ್ ಎಷ್ಟು.!?
ನಯನ್ ತುಂಬಾ ಪ್ರೀತಿಯುಳ್ಳುವರು. ಅವರ ಬಗ್ಗೆ ತುಂಬಾ ಪ್ರೀತಿ ಹಾಗೂ ಗೌರವವಿದೆ. ವಿಜಯ್ ಸರ್ ಅದ್ಭುತವಾದ ರೀತಿಯಲ್ಲಿರೋ ಮ್ಯಾಡ್ ಆಕ್ಟರ್ ಎಂದು ಕರೆದಿದ್ದಾರೆ. ನಿಜಕ್ಕೂ ಅವರಿಬ್ಬರಿಂದ ಕಲಿಯುವುದು ತುಂಬಾ ಇದೆ ಎಂದಿದ್ದಾರೆ.ಆದರೆ ಅಸಲಿಗೆ ನಟ ವಿಜಯ್ ಸೇತುಪತಿ ಅವರ ನಟನೆಯನ್ನು ಹೊಗಳಿದ್ದಾರೆ. ನಟನೆಯಲ್ಲಿ ಅವರು ಹುಚ್ಚ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಈ ಮೂಲಕ ಸೌತ್ ನಟರನ್ನು ಮುಕ್ತವಾಗಿ ಹೊಗಳಿದ್ದಾರೆ.ಶಾರುಖ್ ಅವರು ಆಯಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಅಟ್ಲೀ ನಿರ್ದೇಶಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ 7ರಂದು ರಿಲೀಸ್ ಆಗಲಿದೆ.