ವಿಜಯ್ ಸೇತುಪತಿ ತಮಿಳಿನ ಸ್ಟಾರ್ ನಟ. ಇವರ ಸಿನಿಮಾಗಳಿಗೆ ಸಾಕಷ್ಟು ದೊಡ್ಡ ಅಭಿಮಾನಿ ಬಳಗವೇ ಇದೆ. ಯಾವುದೇ ಸಿನಿಮಾದಲ್ಲಿ ಅಭಿನಯ ಮಾಡಿದರು ಅದರಲ್ಲೂ ಹೊಸತನ ಇರುತ್ತದೆ.
ಸದ್ಯ ಇವರ ಹೊಸ ಸಿನಿಮಾ ಮಹಾರಾಜ ಇನ್ನೇನು ರಿಲೀಸ್ ಆಗಲಿದೆ. ಪ್ರಚಾರದ ಕಾರ್ಯವೂ ಭರ್ಜರಿಯಾಗಿ ನಡೆಯುತ್ತಿದೆ. ಈ ವೇಳೆ ಕೃತಿ ಶೆಟ್ಟಿ ಬಗ್ಗೆ ಮಾಹಿತಿಯೊಂದನ್ನು ನೀಡಿದ್ದಾರೆ. ತಾವೂ ಯಾಕೆ ಕೃತಿ ಶೆಟ್ಟಿ ಜೊತೆಗೆ ನಟಿಸಲ್ಲ ಎಂಬುದನ್ನು ತಿಳಿಸಿದ್ದಾರೆ.
ತಮ್ಮ ಹಳೆಯ ಸಿನಿಮಾ ಡಿಎಸ್ಪಿಯಲ್ಲಿ ಕೃತಿ ಶೆಟ್ಟಿ ಅವರು ಹೀರೋಯಿನ್ ಆಗಿ ಆಯ್ಕೆ ಆಗಿದ್ದರೂ ಯಾಕೆ ಅಭಿನಯ ಮಾಡಲಿಲ್ಲ ಎಂಬುದನ್ನು ಹೇಳಿದ್ದಾರೆ. ಡಿಎಸ್ಪಿ ಸಿನಿಮಾದಲ್ಲಿ ಕೃತಿ ಶೆಟ್ಟಿ ಜೊತೆ ರೋಮ್ಯಾನ್ಸ್ ಮಾಡಲು ವಯಸ್ಸಿನ ಅಂತರವಿದೆ.ಇದನ್ನೂ ಓದಿ:ಪುಷ್ಪ 2 ಸಿನಿಮಾದ ಎರಡನೇ ಹಾಡು ರಿಲೀಸ್..ದಿ ಕಪಲ್ ಸಾಂಗ್ ಗೆ ಹೆಜ್ಜೆ ಹಾಕಿದ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ
ಮಗಳ ವಯಸ್ಸಿನವರ ಜೊತೆ ಹೇಗೆ ರೋಮ್ಯಾಂಟಿಕ್ ಆಗಿ ಮಾಡುವುದು. ಹೀಗಾಗಿ ಡಿಎಸ್ಪಿ ಚಿತ್ರದಲ್ಲಿ ಕೃತಿಗೆ ಜೋಡಿಯಾಗಿ ನಟಿಸುವುದನ್ನು ನಾನು ನಿರಾಕರಿಸಿದೆ. ತೆಲುಗಿನ ಉಪ್ಪೇನಾ ಮೂವಿಯಲ್ಲಿ ನಾನು ಅವಳ ತಂದೆಯಾಗಿ ನಟಿಸಿದ್ದೆ ಇದು ಡೈರೆಕ್ಟರ್ ಪೊನ್ರಾಮ್ ಅವರಿಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಉಪ್ಪೇನಾದಲ್ಲಿ ನನ್ನ ಜೊತೆ ಅಭಿನಯ ಮಾಡುವಾಗ ಕೃತಿ ಸಖತ್ ನರ್ವಸ್ ಆಗಿದ್ದರು. ಈ ವೇಳೆ ಅವರನ್ನು ಬಳಿಗೆ ಕರೆದು ಇದು ಸಿನಿಮಾ ನರ್ವಸ್ ಆಗಬೇಡ. ಜಸ್ಟ್ ಆ್ಯಕ್ಟ್ ಮಾಡು. ನನ್ನನ್ನು ಸ್ವಂತ ನಿಮ್ಮ ತಂದೆ ಎಂದು ತಿಳಿದುಕೊಂಡು ನಟಿಸು ಎಂದು ಧೈರ್ಯ ಹೇಳಿದ್ದೆ.ಇದನ್ನೂ ಓದಿ:KRG ಸಾರಥ್ಯದಲ್ಲಿ ‘ಕೋಟಿ’ ರಿಲೀಸ್; ಬಹುನಿರೀಕ್ಷಿತ ಚಿತ್ರ ಜೂನ್ 14ಕ್ಕೆ ಬಿಡುಗಡೆ
ಕೃತಿ ನನ್ನ ಮಗನಿಗಿಂತ ಸ್ವಲ್ಪ ದೊಡ್ಡವಳಷ್ಟೇ. ಡಿಎಸ್ಪಿ ಸಿನಿಮಾದಲ್ಲಿ ಕೃತಿ ಇದ್ದರೇ ಅವಳ ಜೊತೆ ರೋಮ್ಯಾನ್ಸ್ ಮಾಡಬೇಕಿತ್ತು. ಇದರಿಂದ ಸಿನಿಮಾದಲ್ಲಿ ಕೃತಿ ಜೊತೆ ಅಭಿನಯ ಮಾಡಲ್ಲ ಎಂದು ನಿರ್ದೇಶಕರಿಗೆ ಹೇಳಿದ್ದೆ ಎಂದಿದ್ದಾರೆ.ಇದನ್ನೂ ಓದಿ:ವಿಚ್ಛೇದನ ಪಡೆದ ಚಂದನ್-ನಿವೇದಿತಾ : ನಾಲ್ಕು ವರ್ಷದ ದಾಂಪತ್ಯಕ್ಕೆ ಕೊನೆ!