Left Ad
ಮದುವೆ ಬಗ್ಗೆ ನೇರವಾಗಿ ಮಾತನಾಡಿದ ರಶ್ಮಿಕಾ ಮಂದಣ್ಣ - Chittara news
# Tags

ಮದುವೆ ಬಗ್ಗೆ ನೇರವಾಗಿ ಮಾತನಾಡಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಚೆನ್ನೈನಲ್ಲಿ ಭಾನುವಾರ (ನವೆಂಬರ್ 24) ರಾತ್ರಿ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರಿಗೆ ವೈಯಕ್ತಿಕ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಈ ವೇದಿಕೆ ಮೇಲೆ ಹೋಸ್ಟ್ ಅವರು ರಶ್ಮಿಕಾ ಮಂದಣ್ಣ ಬಳಿ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಶ್ಮಿಕಾ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅವರು ತಮ್ಮ ಡೇಟಿಂಗ್ ವಿಚಾರ ಸೈಲೆಂಟ್ ಆಗಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. ಇವರು ಪ್ರೀತಿ ಮಾಡುತ್ತಿದ್ದಾರೆ ಎನ್ನುವ ವಿಚಾರ ಈಗ ರಹಸ್ಯವಾಗಿ ಉಳಿದಿಲ್ಲ. ಇವರು ಶೀಘ್ರವೇ ವಿವಾಹ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ಅವರು ಮದುವೆ ವಿಚಾರ ಮಾತನಾಡಿದ್ದಾರೆ. ವಿಜಯ್​ನ ಮದುವೆ ಆಗುತ್ತಿರುವ ವಿಚಾರನ ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಚೆನ್ನೈನಲ್ಲಿ ಭಾನುವಾರ (ನವೆಂಬರ್ 24) ರಾತ್ರಿ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರಿಗೆ ವೈಯಕ್ತಿಕ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಈ ವೇದಿಕೆ ಮೇಲೆ ಹೋಸ್ಟ್ ಅವರು ರಶ್ಮಿಕಾ ಮಂದಣ್ಣ ಬಳಿ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಶ್ಮಿಕಾ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

‘ನೀವು ಸಿನಿಮಾ ಇಂಡಸ್ಟ್ರಿಯವರನ್ನು ಮದುವೆ ಆಗ್ತೀರಾ ಅಥವಾ ಹೊರಗಿನವರನ್ನು ಮದುವೆ ಆಗ್ತೀರಾ? ನೀವು ಕ್ಲ್ಯಾರಿಟಿ ಕೊಟ್ಟರೆ ನಾವು ಹುಡುಗನ ಹುಡುಕುತ್ತೀರಿ’ ಎಂದು ಹೋಸ್ಟ್ ಹೇಳಿದರು. ‘ಎಲ್ಲರಿಗೂ ಆ ಬಗ್ಗೆ ಗೊತ್ತು’ ಎಂದು ರಶ್ಮಿಕಾ ಹೇಳಿದ್ದಾರೆ. ಈ ಮಾತನ್ನು ಕೇಳಿ ಎಲ್ಲರೂ ಚಿಯರ್ ಮಾಡಿದರು. ‘ನಿಮಗೆ ಯಾವ ಉತ್ತರ ಬೇಕು ಎಂಬುದು ನಂಗೆ ಗೊತ್ತು. ನನಗೆ ಚೆನ್ನಾಗಿ ಗೊತ್ತು’ ಎಂದು ರಶ್ಮಿಕಾ ಹೇಳಿದರು.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ. ‘ನಾನು ನನ್ನ ಕೋಸ್ಟಾರ್ ಜೊತೆ ಡೇಟಿಂಗ್ ಮಾಡಿದ್ದೇನೆ. ನಾವು ಒಂದಲ್ಲಾ ಒಂದು ಸಂರ‍್ಭದಲ್ಲಿ ಮದುವೆ ಆಗೇ ಆಗುತ್ತೇವೆ’ ಎಂದು ವಿಜಯ್ ಹೇಳಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ‘ಗೀತ ಗೋವಿಂದಂ’ ಸಿನಿಮಾ ಹಾಗೂ ‘ಡಿಯರ್ ಕಾಮ್ರೇಡ್​’ ಸಿನಿಮಾದಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದರು.

Spread the love
Translate »
Right Ad