Sandalwood Leading OnlineMedia

“ನನ್ನ ಎಲ್ಲವನ್ನೂ ತೆಗೆದುಕೊಂಡ ಚಿತ್ರ”: ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಅವರ ಮುಂಬರುವ ಪ್ಯಾನ್ ಇಂಡಿಯಾ ಚಿತ್ರ ಲೈಗರ್‌ನಿಂದ ಸೆಕ್ಸಿಯೆಸ್ಟ್ ಪೋಸ್ಟರ್ ವಿಜಯ್ ದೇವರಕೊಂಡ ಶೇರ್ ಮಾಡಿದ್ದಾರೆ ಮತ್ತು ಇದು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ.

ಸದ್ಯ ವಿಜಯ್ ದೇವರಕೊಂಡ ಶೇರ್ ಮಾಡಿರುವ ಫೋಟೋದಲ್ಲಿ ಮೈ ಮೇಲೆ ಬಟ್ಟೆ ಇಲ್ಲದೆ ಕಾಣಿಸಿಕೊಂಡಿದ್ದಾರೆ. ತನ್ನ ಖಾಸಗಿ ಜಾಗಕ್ಕೆ ಹೂಗುಚ್ಛ ಹಿಡಿದುಕೊಂಡಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ವಿಜಯ್ ದೇವರಕೊಂಡ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

“ನನ್ನ ಎಲ್ಲವನ್ನೂ ತೆಗೆದುಕೊಂಡ ಚಲನಚಿತ್ರ. ಅಭಿನಯವಾಗಿ, ಮಾನಸಿಕವಾಗಿ, ದೈಹಿಕವಾಗಿ ನನ್ನದು ಅತ್ಯಂತ ಸವಾಲಿನ ಪಾತ್ರ. ನಾನು ನಿಮಗೆ ಎಲ್ಲವನ್ನೂ ನೀಡುತ್ತೇನೆ! ಶೀಘ್ರದಲ್ಲೇ ಬರಲಿದೆ #LIGER” ಎಂದು ಹೇಳಿದ್ದಾರೆ. ವಿಜಯ್ ದೇವರಕೊಂಡ ಈ ಫೋಟೋ ಶೇರ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದೀಗ ಟ್ರೆಂಡಿಂಗ್ ನಲ್ಲಿದೆ.

ಈ ಪೋಸ್ಟರ್ ವೈರಲ್ ಆದ ತಕ್ಷಣ, #SexiestPosterEver ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿತು. ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ವಿಜಯ್, ಅನನ್ಯಾ ಪಾಂಡೆ ಮತ್ತು ಮಾಜಿ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಪುರಿ ಜಗನ್ನಾಥ್ ಅವರ ಚಿತ್ರದಲ್ಲಿ ನಟಿಸಿದ್ದಾರೆ, ಇದರಲ್ಲಿ ಅನನ್ಯ ಪಾಂಡೆ ಕೂಡ ನಟಿಸಿದ್ದಾರೆ. ಆಗಸ್ಟ್ 25, 2022 ರಂದು, ಚಲನಚಿತ್ರವು ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ದೊಡ್ಡ ಪರದೆಗಳಲ್ಲಿ ಬಿಡುಗಡೆಯಾಗಲಿದೆ.

ಲಿಗರ್ ಪ್ರಾರಂಭದಿಂದಲೂ ಗಮನ ಸೆಳೆಯುತ್ತಿದೆ, ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಚಿತ್ರದ ನಿರ್ಮಾಣವನ್ನು ನಿಲ್ಲಿಸಲಾಯಿತು. ಚಲನಚಿತ್ರವು ಸೆಪ್ಟೆಂಬರ್ 9 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಬೇಕಿತ್ತು, ಆದರೆ ಆ ಸಮಯದಲ್ಲಿ ಹೆಚ್ಚುತ್ತಿರುವ COVID-19 ಪ್ರಕರಣಗಳ ಕಾರಣ ಅದನ್ನು ಮುಂದೂಡಲಾಯಿತು. . ಲೈಗರ್ ಸಿನಿಮಾಗೆ ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಧರ್ಮ ಪ್ರೊಡಕ್ಷನ್ ಮತ್ತು ಪುರಿ ಕನೆಕ್ಟ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ವಿಜಯ್ ದೇವರಕೊಂಡಗೆ ನಾಯಕಿಯಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಮೊದಲ ಬಾರಿಗೆ ಅನನ್ಯಾ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿದ್ದು ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.

ಲೈಗರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ತೆಲುಗು ಮತ್ತು ಹಿಂದಿ ಜೊತೆಗೆ ಕನ್ನಡ, ತಮಿಳು ಹಾಗುು ಮಲಯಾಳಂನಲ್ಲಿ ರಿಲೀಸ್ ಆಗುತ್ತಿದೆ. ಬಹುನಿರೀಕ್ಷೆಯ ಸಿನಿಮಾ ಇದೇ ವರ್ಷ ಆಗಸ್ಟ್ 25ಕ್ಕೆ ತೆರೆಗೆ ಬರುತ್ತಿದೆಸಿನಿಮಾದಲ್ಲಿ ದಿಗ್ಗಜ ಬಾಕ್ಸರ್ ಮೈಕ್ ಟೈಸನ್ ನಟಿಸಿದ್ದಾರೆ. ಮೊದಲ ಬಾರಿಗೆ ಭಾರತದ ಸಿನಿಮಾದಲ್ಲಿ ಮೈಕ್ ಟೈಸನ್ ಅಭಿನಯಿಸಿದ್ದಾರೆ..

Share this post:

Related Posts

To Subscribe to our News Letter.

Translate »