ವಿಜಯ್ ದೇವರಕೊಂಡ ದೇಶದ ಚಿತ್ರರಂಗ ಕಂಡ ಖ್ಯಾತ ನಟರಲ್ಲಿ ಒಬ್ಬರು. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟ ವಿಜಯ್ ದೇವರಕೊಂಡ ಸದ್ಯ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದ್ದಾರೆ. ಹೌದು ನಟ ವಿಜಯ್ ದೇವರಕೊಂಡ ಅವರ ಲಿಗರ್ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದ್ದು ಚಿತ್ರದ ಪ್ರೊಮೋಷನ್ ಬಹಳ ಚುರುಕಾಗಿ ಸಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಲಿಗರ್ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಅವರ ಜೊತೆ ನಟಿ ಅನನ್ಯ ಪಾಂಡೆ ಅವರು ನಾಯಕಿಯಾಗಿ ನಟನೆಯನ್ನ ಮಾಡಿದ್ದು ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಅವರು ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ಲಿಗರ್ ಚಿತ್ರದ ನಡುವೆ ನಟ ವಿಜಯ್ ದೇವರಕೊಂಡ ಅವರು ಕಾಫಿ ವಿಥ್ ಕರಣ್ ನಲ್ಲಿ ಕಾಣಿಸಿಕೊಂಡಿದು ಮತ್ತೆ ಚರ್ಚೆಗೆ ಕಾರಣರಾಗಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ವಿಜಯ್ ದೇವರಕೊಂಡ ಭಾಗವಹಿಸಿ, ಸಾಕಷ್ಟು ವಿಚಾರಗಳ ಬಗ್ಗೆ ವಿಜಯ್ ಮನಬಿಚ್ಚಿ ಮಾತನಾಡಿದ್ದಾರೆ. ಇನ್ನು ವೇಳೆ ರಶ್ಮಿಕಾ ಜತೆಗಿನ ರಿಲೇಶನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ.
https://www.instagram.com/p/Cgdrb9DIoVU/
ಟಾಲಿವುಡ್‌ನ ಸಿನಿಮಾಗಳಲ್ಲಿ ಸ್ಟಾರ್ ಜೋಡಿಗಳಾಗಿ ಗುರುತಿಸಿಕೊಂಡಿರುವ ವಿಜಯ್ ಮತ್ತು ರಶ್ಮಿಕಾ ಮಧ್ಯೆ ಎನೋ ಸಂಥಿಂಗ್ ಸಂಥಿಂಗ್ ಇದೆ ಅಂತಾ ಗುಸು ಗುಸು ಸುದ್ದಿಯಾಗುತ್ತಿದೆ. ಇದೇ ಪ್ರಶ್ನೆಯನ್ನ ಕರಣ್ ಜೋಹರ್ ಕೂಡ ವಿಚಾರಿಸಿದ್ದಾರೆ. ಅದಕ್ಕೆ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದು, `ರಶ್ಮಿಕಾ ನನ್ನ ಡಾರ್ಲಿಂಗ್’ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.
‘ನನ್ನ ವೃತ್ತಿ ಜೀವನದ ಆರಂಭದ ವರ್ಷಗಳಲ್ಲಿ ನಾವು ಒಟ್ಟಿಗೆ ಎರಡು ಸಿನಿಮಾ ಮಾಡಿದ್ದೇವೆ. ರಶ್ಮಿಕಾ ಅವರು ಡಾರ್ಲಿಂಗ್. ಅವರೆಂದರೆ ಇಷ್ಟ. ನನಗೆ ರಶ್ಮಿಕಾ ನಿಜಕ್ಕೂ ಒಳ್ಳೆಯ ಫ್ರೆಂಡ್. ನೀವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತೀರಿ. ಸಾಕಷ್ಟು ಏರಿಳಿತಗಳು ಸೃಷ್ಟಿಯಾಗುತ್ತವೆ. ನೀವು ಬಹುಬೇಗ ಕ್ಲೋಸ್ ಆಗುತ್ತೀರಿ’ ಎಂದು ತಮ್ಮ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದಾರೆ.
‘ನನಗೆ ನನ್ನ ರಿಲೇಶನ್ಶಿಪ್ ಸ್ಟೇಟಸ್ ತಿಳಿಸಲು ಇಷ್ಟವಿಲ್ಲ. ನನಗೆ ಮದುವೆ ಆಗಬೇಕು, ಮಕ್ಕಳನ್ನು ಮಾಡಿಕೊಳ್ಳಬೇಕು ಎಂಬ ಆಸೆ ಇದೆ. ನಾನು ಮದುವೆ ಆಗುವಾಗ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ. ಅಲ್ಲಿಯವರೆಗೆ ನನ್ನನ್ನು ಇಷ್ಟಪಡುವವರ ಮನಸ್ಸನ್ನು ನೋಯಿಸಲು ಇಷ್ಟಪಡುವುದಿಲ್ಲ’ ಎಂದಿದ್ದಾರೆ ಅವರು.