Sandalwood Leading OnlineMedia

‘ನನ್ನ ಜೀವನದಲ್ಲಿ ಸರಿಪಡಿಸಲಾಗದ ಡ್ಯಾಮೇಜ್ ಆಗುತ್ತೆ’ ಎಂದ ಜ್ಯೋತಿ ರೈ

ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಖಾಸಗಿ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ನಟಿ ಜ್ಯೋತಿ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದು, ದೂರಿನ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜ್ಯೋತಿ ರೈ ಅವರದ್ದು ಎನ್ನಲಾಗುತ್ತಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಿದಾಡುತ್ತಿವೆ. ಇದೀಗ ನಟಿ ಜ್ಯೋತಿ ರೈ ಈ ಬಗ್ಗೆ ಮೌನ ಮುರಿದಿದ್ದು, ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಅಸಮಾಧಾನ ಹೊರಹಾಕಿದ್ದಾರೆ.

Jyothi Rai:ಪ್ರಜ್ವಲ್ ಪ್ರಕರಣದ ನಡುವೆ ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಖಾಸಗಿ  ವಿಡಿಯೋಗಳು,ನಟಿ ಜ್ಯೋತಿ ರೈ ಹೇಳಿದ್ದೇನು? | TV actress Jyothi Rai reacts to the  obscene video and ...

 

ಇದನ್ನೂ ಓದಿ :ಕಮಲ್-ಮಣಿರತ್ನಂ ‘ಥಗ್ ಲೈಫ್’ನಲ್ಲಿ ಸಿಲಂಬರಸನ್ ಕಮಾಲ್!

ಕನ್ನಡದ ನಟಿ ಜ್ಯೋತಿ ರೈ ತೆಲುಗು, ತಮಿಳು ಚಿತ್ರರಂಗ ಹಾಗೂ ಟಿವಿ ಲೋಕದಲ್ಲಿ ಜನಪ್ರಿಯರು. ಇನ್​ಸ್ಟಾಗ್ರಾಂನಲ್ಲಿ ಸಹ ತಮ್ಮ ಮಾದಕ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈಗ ಅವರದ್ದೆನ್ನಲಾದ ಕೆಲವು ಅಶ್ಲೀಲ ವಿಡಿಯೋ ಹಾಗೂ ಚಿತ್ರಗಳು ವೈರಲ್ ಆಗಿವೆ. ಈ ಬಗ್ಗೆ ಮಾತನಾಡಿರುವ ಜ್ಯೋತಿ ರೈ, ತಮ್ಮ ನಕಲಿ ವಿಡಿಯೋ ಹಾಗೂ ಚಿತ್ರಗಳನ್ನು ಹರಿಬಿಡುವ ಮೂಲಕ ತಮ್ಮ ಮಾನಹಾನಿಗೆ ಯತ್ನಿಸಲಾಗುತ್ತಿದೆ ಎಂದಿದ್ದಾರೆ.

ಟ್ವಿಟ್ಟರ್​ನಲ್ಲಿ ಎಡಿಟ್ ಬೈ ಅಭಿ ಹೆಸರಿನ ಖಾತೆಯಲ್ಲಿ ಜ್ಯೋತಿ ರೈ ಅವರದ್ದು ಎನ್ನಲಾದ ಕೆಲವು ಚಿತ್ರಗಳು ಹಾಗೂ ವಿಡಿಯೋ ಅಪ್​ಲೋಡ್ ಆಗಿತ್ತು. ತಮ್ಮ ಯೂಟ್ಯೂಬ್ ಚಾನೆಲ್ ಸಬ್​ಸ್ಕ್ರೈಬ್ ಮಾಡಿದರೆ ಪೂರ್ಣ ವಿಡಿಯೋ ಬಿಡುಗಡೆ ಮಾಡುವುದಾಗಿಯೂ ಆ ಖಾತೆಯಿಂದ ಸಂದೇಶ ಹಂಚಿಕೊಳ್ಳಲಾಗಿತ್ತು.

 

फेमस हीरोइन का इंटीमेट वीडियो लीक, इंटरनेट पर मचा हंगामा

ಇದನ್ನೂ ಓದಿ :PHOTOS :ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್ ವುಡ್ ಲವ್ ಬರ್ಡ್ಸ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಥೈಲ್ಯಾಂಡಲ್ಲಿ ಬೇಬಿ ಮೂನ್ ಎಂಜಾಯ್ ಮಾಡ್ತಿದ್ದಾರೆ.

ಆದರೆ ಆ ಬಳಿಕ ವಿಡಿಯೋ ಹಾಗೂ ಚಿತ್ರಗಳನ್ನು ಡಿಲೀಟ್ ಮಾಡಲಾಗಿದೆ. ಆದರೆ ಅಷ್ಟರಲ್ಲಾಗಲೆ ಹಲವರು ವಿಡಿಯೋ, ಚಿತ್ರಗಳನ್ನು ಡೌನ್​ಲೋಡ್ ಮಾಡಿ ವೈರಲ್ ಮಾಡಿಬಿಟ್ಟಿದ್ದಾರೆ.

ಘಟನೆ ಬಗ್ಗೆ ದೂರು ನೀಡಿರುವ ನಟಿ ಜ್ಯೋತಿ ರೈ, ‘ಸತತವಾಗಿ ಸಂದೇಶಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ದಯವಿಟ್ಟು ಇಂಥಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ನನ್ನ ಹಾಗೂ ನನ್ನ ಕುಟುಂಬದ ಘನತೆಗೆ ಧಕ್ಕೆಯಾಗುತ್ತಿದೆ.

ಒಂದೊಮ್ಮೆ ನೀವು ಶೀಘ್ರವೇ ಕ್ರಮ ಜರುಗಿಸದಿದ್ದರೆ ಇದು ಇನ್ನೂ ಮುಂದುವರೆಯುವ ಸಾಧ್ಯತೆ ಇದ್ದು, ಸರಿಪಡಿಸಲಾಗದಷ್ಟು ಸಮಸ್ಯೆಯನ್ನು ತಂದೊಡ್ಡಬಹುದಾಗಿದೆ’ ಎಂದಿದ್ದಾರೆ.

ನಟಿ ಜ್ಯೋತಿ ರೈ ಇನ್​ಸ್ಟಾಗ್ರಾಂನಲ್ಲಿ ತಮ್ಮ ಹಾಟ್ ಚಿತ್ರಗಳನ್ನು ಆಗಾಗ್ಗೆ ಅಪ್​ಲೋಡ್ ಮಾಡುತ್ತಿರುತ್ತಾರೆ. ಜೊತೆಗೆ ನಿರ್ದೇಶಕ ಸುಕುಪುವರಾಜ್ ಅವರೊಟ್ಟಿಗೆ ಆಪ್ತವಾಗಿರುವ ಚಿತ್ರಗಳನ್ನು ಸಹ ಅಪ್​ಲೋಡ್ ಮಾಡುತ್ತಿರುತ್ತಾರೆ.

ಟ್ವಿಟ್ಟರ್​ನ ಎಡಿಟ್ ಬೈ ಅಭಿ ಹೆಸರಿನ ಖಾತೆಯ ಬಳಕೆದಾರ, ತಾನು ಜ್ಯೋತಿ ಹಾಗೂ ಸುಕುಪುವರಾಜ್​ ಖಾಸಗಿ ವಿಡಿಯೋ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ. ಆದರೆ ಜ್ಯೋತಿ ರೈ ಅವರದ್ದೆನ್ನಲಾದ ಖಾಸಗಿ ವಿಡಿಯೋ, ಚಿತ್ರಗಳ ಬಗ್ಗೆ ಆಕ್ಷೇಪಗಳು ಕೇಳಿ ಬರುತ್ತಿದ್ದಂತೆ ಆ ಚಿತ್ರಗಳು ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ.

 

Share this post:

Related Posts

To Subscribe to our News Letter.

Translate »