ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ವಿಡಮುಯಾರ್ಚಿ’. ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ತುಣುಕುಗಳ ಮೂಲಕವೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಕೂಲಿಂಗ್ ಕ್ಲಾಸ್ ತೊಟ್ಟು ಕೈಯಲ್ಲಿ ಬ್ಯಾಗ್ ಹಿಡಿದು ಅಜಿತ್ ಕೂಲ್ ಆಗಿ ರಸ್ತೆ ಮೇಲೆ ಹೆಜ್ಜೆ ಹಾಕುತ್ತಿರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ವರಮಹಾಲಕ್ಷ್ಮೀ ಹಬ್ಬಕ್ಕೆ “ಗೌರಿ” ಆಗಮನ; ನನಸಾಗಲಿದೆ ಇಂದ್ರಜಿತ್ ಲಂಕೇಶ್ ಪುತ್ರನ ಬಹುಕಾಲದ ಕನಸು
ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ನಡಿ ಸುಭಾಸ್ಕರನ್ ‘ವಿಡಮುಯಾರ್ಚಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ‘ಕಲಗ ತಲೈವನ್’ ಸಿನಿಮಾ ಖ್ಯಾತಿಯ ನಿರ್ದೇಶಕ ಮಗಿಳ್ ತಿರುಮೇನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಜಿತ್ ಕುಮಾರ್ ಜೋಡಿಯಾಗಿ ತ್ರಿಶಾ ಬಣ್ಣ ಹಚ್ಚಿದ್ದು, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಆರವ್, ರೆಜಿನಾ ಕಸ್ಸಂದ್ರ, ನಿಖಿಲ್ ಮತ್ತು ಅನೇಕರು ತಾರಾಬಳಗದಲ್ಲಿದ್ದಾರೆ.
ಸೆನ್ಸಾರ್ ಅಂಗಳದಲ್ಲಿ, ಟೀಸರ್ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದದಿದ್ದ “ಬ್ಯಾಕ್ ಬೆಂಚರ್ಸ್” ಚಿತ್ರ
‘ವಿಡಮುಯಾರ್ಚಿ’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಆಗಸ್ಟ್ ಮಧ್ಯದ ವೇಳೆಗೆ ಚಿತ್ರೀಕರಣವನ್ನು ಪೂರ್ಣಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಚಿತ್ರೀಕರಣ ಮುಗಿದ ನಂತರ ಅಧಿಕೃತವಾಗಿ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಿದೆ. ಅನಿರುದ್ಧ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಓಂ ಪ್ರಕಾಶ್ ಛಾಯಾಗ್ರಹಣ, ಎನ್ ಬಿ ಶ್ರೀಕಾಂತ್ ಸಂಕಲನ, ಮಿಲನ್ ಕಲಾ ನಿರ್ದೇಶನ ‘ವಿಡಮುಯಾರ್ಚಿ’ ಸಿನಿಮಾಕ್ಕಿದೆ. ಸನ್ ಟಿವಿ ಸ್ಯಾಟಲೈಟ್ ಹಕ್ಕು ಖರೀದಿ ಮಾಡಿದ್ದು, ನೆಟ್ ಫ್ಲಿಕ್ಸ್ ಒಟಿಟಿ ರೈಟ್ಸ್ ತನ್ನದಾಗಿಸಿಕೊಂಡಿದೆ.