ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ 75ನೇ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’ ಭಾರೀ ನಿರೀಕ್ಷೆ ಹೆಚ್ಚಿಸಿದೆ. ಶೈಲೇಶ್ ಕೋಲನು ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಇತ್ತೀಚೆಗೆಷ್ಟೇ ಮುಕ್ತಾಯಗೊಂಡಿತ್ತು. 18 ದಿನದ ಕಾಲ ನಡೆದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ 8 ಪ್ರಮುಖ ಸ್ಟಾರ್ ಭಾಗಿಯಾಗಿದ್ದು, ದಕ್ಷಿಣ ಚಿತ್ರರಂಗದ ಖ್ಯಾತ ಸ್ಟಂಟ್ ಮಾಸ್ಟರ್ಸ್ ರಾಮ ಲಕ್ಷ್ಮಣ ಸಾಹಸ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: `ಜೋಗ’ದ `ಸಿನಿ’ ಬೆಳಕಿನಲ್ಲಿ ಚಿನ್ನಾರಿ ಮುತ್ತ!
ಸ್ವಾತಂತ್ರ್ಯ ದಿನದ ಅಂಗವಾಗಿ 8 ಸ್ಟಾರ್ಸ್ ಒಳಗೊಂಡ ಸಣ್ಣ ವಿಡಿಯೋ ಝಲಕ್ ನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಇದೀಗ ಸೈಂಧವ್ ಚಿತ್ರತಂಡದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಮತ್ತೊಬ್ಬ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಸಿನಿಮಾ ಬಳಗ ಸೇರಿಕೊಂಡಿದ್ದಾರೆ. ತಮಿಳುನಟ ಆರ್ಯ ಸೈಂಧವ್ ಭಾಗವಾಗಿದ್ದಾರೆ. ಅವ್ರ ಫಸ್ಟ್ ಲುಕ್ ಅನಾವರಣಗೊಂಡಿದ್ದು, ಉದ್ದವಾದ ಕೂಲು ಬಿಟ್ಟು ಸ್ಟೈಲೀಶ್ ಲುಕ್ ನಲ್ಲಿ ಮಿಂಚಿರುವ ಆರ್ಯ ಕೈಯಲ್ಲಿ ಗನ್ ಹಿಡಿದು ಹೆಜ್ಜೆ ಹಾಕ್ತಿರುವ ಪೋಸ್ಟರ್ ನೋಡುಗರನ್ನು ಇಂಪ್ರೆಸ್ ಮಾಡುತ್ತಿದೆ.
ಇದನ್ನೂ ಓದಿ: ಅಭಿದಾಸ್- ಶರಣ್ಯಾ ಶೆಟ್ಟಿ ಅಭಿನಯದ ’ನಗುವಿನ ಹೂಗಳ ಮೇಲೆ’ ಸಿನಿಮಾದ ಪ್ರೇಮಗೀತೆ ರಿಲೀಸ್
ನಿಹಾರಿಕಾ ಎಂಟರ್ ಟೈನ್ಮೆಂಟ್ ನಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಸೈಂಧವ್ ಸಿನಿಮಾದಲ್ಲಿ ಶ್ರದ್ದಾ ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಡಾ ರೇಣು ಪಾತ್ರದಲ್ಲಿ ರುಹಾನಿ ಶರ್ಮಾ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದ ಮೂಲಕ ಸೌತ್ ಸಿನಿರಂಗ ಪ್ರವೇಶಿಸಿದ್ದಾರೆ.ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರುವ ಸೈಂಧವ್ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸ ಮಾಡಿದ್ದು, ಕಿಶೋರ್ ತಲ್ಲೂರ್ ಸಹ ನಿರ್ಮಾಪಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸೈಂಧವ್ ಸಿನಿಮಾವನ್ನು ಡಿಸೆಂಬರ್ 22 ರಂದು ಕ್ರಿಸ್ಮಸ್ ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.