ಹಿರಿಯ ನಟಿ ಹೇಮಾ ಚೌಧರಿ ಅವರು ಬ್ರೈನ್ ಹ್ಯಾಮರೇಜ್ನಿಂದ ಬಳಲುತ್ತಿದ್ದು,ಅವರ ಸ್ಥಿತಿ ಗಂಭೀರವಾಘಿದೆ ಎನ್ನಲಾಗುತ್ತಿದೆ. ಸದ್ಯ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಹೇಮಾ ಚೌಧರಿ ಅವರಿಗೆ ಬ್ರೈನ್ ಹ್ಯಾಮರೇಜ್ ಇರುವುದು ತಿಳಿದು ಬಂದಿದ್ದು, ಸದ್ಯ ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
ಇದನ್ನೂ ಓದಿ ಹೃದಯಾಘಾತದಿಂದ ರೂಪಿಕಾ ತಂದೆ ನಿಧನ : ತಂದೆಯನ್ನು ನೆನೆದು ನಟಿ ಕಣ್ಣೀರು..!
ಅವರ ಮಗ ಐರ್ಲ್ಯಾಂಡ್ನಲ್ಲಿದ್ದು , ಕುಟುಂಬಸ್ಥರು ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇನ್ನು ಹಿರಿಯ ನಟಿಯ ಆರೋಗ್ಯದ ಬಗ್ಗೆ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆ ವೈದ್ಯರು ಅಧಿಕೃತವಾಗಿ ಮಾಹಿತಿ ನೀಡಬೇಕಾಗಿದೆ. ಹೀಗಾಗಿ ಹೇಮಾ ಚೌಧರಿ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿ ಹೃದಯಾಘಾತದಿಂದ ರೂಪಿಕಾ ತಂದೆ ನಿಧನ : ತಂದೆಯನ್ನು ನೆನೆದು ನಟಿ ಕಣ್ಣೀರು..!
ಹೇಮಾ ಚೌಧರಿ ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅವರು ಹೆಸರಾಂತ ಕೂಚಿಪುಡಿ ಕಲಾವಿದೆಯೂ ಆಗಿದ್ದಾರೆ. ಕನ್ನಡ ಸಿನಿಮಾಗಳು ಮಾತ್ರವಲ್ಲದೇ ಧಾರವಾಹಿಗಳಲ್ಲೂ ಅವರು ನಟಿಸಿದ್ದಾರೆ. ಅದರಲ್ಲೂ ಸ್ಟಾರ್ ಸುವರ್ಣದ ಅಮೃತಧಾರೆ ಧಾರಾವಾಹಿಯ ಶಕುಂತಲಾ ದೇವಿ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದರು.