ಹಂಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ರಾಘವೇಂದ್ರ ಡಿ.ಜಿ ನಿರ್ಮಿಸಿ ನಾಯಕನಟನಾಗಿ ಅಭಿನಯಿಸಿದ ಕ್ರಷ್ಣ ನಾಡ್ಪಾಲ್ ನಿರ್ದೇಶನದ ವೇಷ ಚಿತ್ರದ ಟೀಸರ್ A2 ಮ್ಯೂಸಿಕ್ ಚಾನೆಲ್ ನಲ್ಲಿ ಮರಿಟೈಗರ್ ವಿನೋದ್ ಪ್ರಭಾಕರ್ ಹಾಗೂ ನಿಶಾ ವಿನೋದ್ ಪ್ರಭಾಕರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ.
ಜಯ್ ಶೆಟ್ಟಿ ಖಳನಾಯಕನಾಗಿ ಅಭಿನಯಿಸಿರುವ ಚಿತ್ರದಲ್ಲಿ ಕಿರಿಕ್ ಹುಡ್ಗ ಕಿರ್ತನ್ ಶೆಟ್ಟಿ ಕ್ರಿಯೇಟಿವ್ ಹೆಡ್ ಆಗಿ ಮಂಜುಪಾವಗಢ ಒಂದು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಸೌಖ್ಯ ಗೌಡ ನಿಧಿ ಮಾರೊಲಿ ನಾಯಕಿಯಾಗಿ ನಟಿಸಿದ್ದಾರೆ.
Sudha Murthy: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸರಳತೆಯ ಶ್ರೀಮಂತೆ, ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ
ಉತ್ತಮ್ ಸಾರಂಗ್ ಸಂಗೀತ ನಿರ್ದೇಶನ, ಸುರೇಂದ್ರ ಪಣಿಯೂರ್ ಛಾಯಾಗ್ರಹಣದಲ್ಲಿ ವಾಣಿಶ್ರೀ, ಪ್ರಿಯಾಂಕ ಕಾಮತ್ ಹಾಗೂ ಶಿಲ್ಪಾ ಕುಮಟಾ ಮುಖ್ಯ ಭೂಮಿಕೆಯಲ್ಲಿದ್ದು ಜಾಗ್ವಾರ್ ಸಣ್ಣಪ್ಪ ಸಾಹಸ ನಿರ್ದೇಶನ ವೇಷ ಚಿತ್ರಕ್ಕಿದೆ ಈಗಾಗಲೇ ಚಿತ್ರತಂಡ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿದ್ದು ಸಂಪೂರ್ಣ ಚಿತ್ರೀಕರಣವನ್ನ ಶಿವಮೊಗ್ಗ,ಆಗುಂಬೆ,ಚಿಕ್ಕ ಮಂಗಳೂರು ಸುತ್ತಾಮುತ್ತಾ ಮಲೆನಾಡಿನಲ್ಲಿ ಮಾಡಿದ್ದಾರೆ.ಎಲ್ಲವೂ ಅಂದು ಕೊಂಡಂತೆ ಆದಲ್ಲಿ ಡಿಸೆಂಬರ್ ನಲ್ಲಿ ಚಿತ್ರವನ್ನ ಬಿಡುಗಡೆಗೊಳಿಸುವ ಯೋಜನೆ ಚಿತ್ರತಂಡಕ್ಕಿದೆ.