ವಿಕ್ಟರಿ ವೆಂಕಟೇಶ್, ಶೈಲೇಶ್ ಕೊಲನು ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ ಬಹು ನಿರೀಕ್ಷಿತ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಆಗಿದೆ. ಚಿತ್ರಕ್ಕೆ ‘ಸೈಂದವ್’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರ ವಿಕ್ಟರಿ ವೆಂಕಟೇಶ್ ವೃತ್ತಿ ಬದುಕಿನ 75ನೇ ಸಿನಿಮಾವಾಗಿರೋದು ಮತ್ತೊಂದು ವಿಶೇಷ. ‘ಸೈಂದವ್’ ಲುಕ್ ನಲ್ಲಿ ಸಖತ್ ವೈಲೆಂಟ್ ಆಗಿ ವೆಂಕಟೇಶ್ ಕಾಣಿಸಿಕೊಂಡಿದ್ದು, ಫಸ್ಟ್ ಲುಕ್ ಸಖತ್ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ.
‘ಎಫ್ 3’ ಸೂಪರ್ ಸಕ್ಸಸ್ ನಲ್ಲಿರುವ ವೆಂಕಟೇಶ್ ಮುಂದಿನ ಸಿನಿಮಾ ಯಾರ ಜೊತೆ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲಕ್ಕೆ ತೆರೆ ಬಿದ್ದಿದ್ದು ಯಂಗ್ ಅಂಡ್ ಟ್ಯಾಲೆಂಟೆಡ್ ನಿರ್ದೇಶಕ ಶೈಲೇಶ್ ಕೊಲನು ವೆಂಕಟೇಶ್ 75ನೇ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಹಿಟ್’, ‘ಹಿಟ್ 2’ ಮೂಲಕ ಖ್ಯಾತಿ ಗಳಿಸಿರುವ ಶೈಲೇಶ್ ಕೊಲನು ವೆಂಕಟೇಶ್ ಗಾಗಿ ಸಖತ್ ಇಂಟ್ರಸ್ಟಿಂಗ್ ಸಬ್ಜೆಕ್ಟ್ ರೆಡಿ ಮಾಡಿಕೊಂಡಿದ್ದಾರೆ. ‘ಸೈಂದವ್’ ಸಿನಿಮಾದಲ್ಲಿ ಸಖತ್ ಡಿಫ್ರೆಂಟ್ ಆಗಿ ವಿಕ್ಟರಿ ವೆಂಕಟೇಶ್ ರನ್ನು ತೆರೆ ಮೇಲೆ ತರ್ತಿದ್ದಾರೆ ಅನ್ನೋದಕ್ಕೆ ಫಸ್ಟ್ ಲುಕ್ ಸಾಕ್ಷಿಯಾಗಿದೆ.
ವೆಂಕಟ್ ಬೋಯನಪಲ್ಲಿ ನಿಹಾರಿಕ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಈ ಚಿತ್ರವನ್ನು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ‘ಶ್ಯಾಮ್ ಸಿಂಗ ರಾಯ್’ ಸಿನಿಮಾ ಸೂಪರ್ ಸಕ್ಸಸ್ ಕಂಡ ಬೆನ್ನಲ್ಲೇ ಮತ್ತೊಂದು ಬಿಗ್ ಬಜೆಟ್ ಸಿನಿಮಾವನ್ನು ವಿಕ್ಟರಿ ವೆಂಕಟೇಶ್ ಗೆ ನಿರ್ಮಾಣ ಮಾಡುತ್ತಿದೆ ನಿಹಾರಿಕ ಎಂಟರ್ಟೈನ್ಮೆಂಟ್. ಸದ್ಯದಲ್ಲೇ ಚಿತ್ರದ ತಾರಾಬಳಗ, ತಂತ್ರಜ್ಞರ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ.