“ಹೇ ಪ್ರಭು “, ಈ ಹೆಸರು ಕೇಳಿದ ತಕ್ಷಣ ನೀವು ದೇವರು ಇರಬಹುದ ಅಧವಾ “ಪ್ರಭು” ಅಂದರೇ ನಮ್ಮ ನಾಡ ಪ್ರಭು ಕೆಂಪೇಗೌಡರಿರಬಹುದಾ ಎಂಬ ಕುತೂಹಲ ಮೂಡಿಸುತ್ತದೆ . ಸದ್ಯಕ್ಕೆ ಚಿತ್ರ ತಂಡ ಶೀರ್ಷಿಕೆ ವಿನ್ಯಾಸ (ಟೈಟಲ್ ಲೋಗೋ) ಅನಾವರಣ ಗೊಳಿಸಿದೆ, ಇದರಲ್ಲಿ ಕೆಂಪೇಗೌಡರ ಚಿತ್ರವಿರುವುದು ಸ್ವಲ್ಪ ಕುತೂಹಲ .. ! “ಹೇ ಪ್ರಭು”, ಇನ್ನು 5 ದಿನಗಳ ಶೂಟಿಂಗ್ ಮುಗಿದರೆ ಚಿತ್ರಕರಣ ಮುಕ್ತಾಯವಾಗುತ್ತದೆ ಎಂದು ತಂಡ ಹೇಳಿಕೊಂಡಿದೆ , ಜೊತೆಜೊತೆಯಾಗಿ ಸಂಕಲನ ಕಾರ್ಯಕೂಡ ಪ್ರಗತಿಯಲ್ಲಿದ್ದು ನಿರ್ದೇಶಕರು ಮೊದಲ ಪ್ರತಿಯನ್ನು ಶೀಘ್ರದಲ್ಲಿ ತರುವುದಕ್ಕೆ ಮುಂದಾಗಿದ್ದಾರೆ .ಪ್ರಮೋದ್ ಭಾರತೀಯ ಛಾಯಾಗ್ರಹಣ , ಡ್ಯಾನ್ನಿ ಆಂಡರ್ಸನ್ , ಸಂಗೀತ , ಚಂದನ್ p , ಶಮೀಕ್ ಭಾರದ್ವಾಜ್ ಮತ್ತು ಲಾರೆನ್ಸ್ ಪ್ರೀತಮ್ ತಾಂತ್ರಿಕ ಕೆಲಸದಲ್ಲಿ ಕಾರ್ಯವಹಿಸುತ್ತಿದ್ದಾರೆ .
READ MORE: ‘ಟಾಕ್ಸಿಕ್’ ಚಿತ್ರದ ಬಗ್ಗೆ Latest Talks: ಯಾರಾಗ್ತಾರೆ ಯಶ್ ಹಿರೋಯಿನ್!
ಮಹೇಶ್ ಮತ್ತು ಪ್ರವೀಣ್ ರವರ ಸಂಭಾಷಣೆ , ಅರಸು ಅಂತಾರೆ ಮತ್ತ್ತು ಮನೋಜ್ ರಾವ್ ರವರ ಸಾಹಿತ್ಯ ಚಿತ್ರಕ್ಕಿದೆ 24 Reels ಮತ್ತು Amrutha Film Center ನಿರ್ಮಾಣ , ಕಥೆ ಚಿತ್ರಕಥೆ ವೆಂಕಟ್ ಭಾರದ್ವಾಜ್ .ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಸನ್ ಜೈಪಾಲ್ ರವರ ಪುತ್ರ ಡ್ಯಾನ್ನಿ ಆಂಡರ್ಸನ್ ರವರನ್ನು ಚಿತ್ರ ರಂಗಕ್ಕೆ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ವೆಂಕಟ್ ಭಾರಾದ್ವಾಜ್ ಪರಿಚಯಿಸುತ್ತಿದ್ದಾರೆ .ತಾರಾಬಳಗದಲ್ಲಿ ಜಯ್ , ಸೂರ್ಯ ರಾಜ್ , ಲಕ್ಷ್ಮಣ್ ಶಿವಶಂಕರ್ (ಕೆಂಪಿರ್ವೇ ಖ್ಯಾತಿ), ಸಂಹಿತ ವಿನ್ಯಾಸ , ಗಜಾನನ ಹೆಗಡೆ , ನಿರಂಜನ್ ಪ್ರಸಾದ್ , ಹರಿ ಧನಂಜಯ , ಪ್ರಮೋದ್ ರಾಜ್ , ದಿಲೀಪ್ ದೇವ್ , ನೇತ್ರ ಗೋಪಾಲ್, ಸುಚಿತ್ರ ದಿನೇಶ್, ಸಾಧನ ಭಟ್ , ಮನೋಹರ್ , ಶಶಿರ್ ರಾಜು , ಹಾಗು ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ .ಶೀಘ್ರದಲ್ಲಿ ತಂಡ “ಹೇ ಪ್ರಭು ” ಮೊದಲ ನೋಟ (first look ) ಬಿಡುಗಡೆ ಮಾಡಲಿದೆಸದ್ಯಕ್ಕೆ ವೆಂಕಟ್ ಭಾರದ್ವಾಜ್ ರವರ ಹೈನ ಮತ್ತು ಆಹತ ಎರಡು ಚಿತ್ರ ಆಗಸ್ಟ್ ಮತ್ತ್ತು ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆ ಯಾಗಲಿದೆ.