Sandalwood Leading OnlineMedia

VEERAM Kannada Movie Review: ಕೌಟುಂಬಿಕ ಕಥನದೊಳಗೆ ಭೂಗತ ಲೋಕದ ಕರಿನೆರಳು

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ನಟಿಸಿರುವ ‘ವೀರಂ’ ಚಿತ್ರ ಬಿಡುಗಡೆಗೂ ಮುನ್ನ ಹಾಡುಗಳು ಮತ್ತು ಟ್ರೆöÊಲರ್‌ನಿಂದ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದರಿಂದ ಸಹಜವಾಗಿಯೇ ಚಿತ್ರಕ್ಕಾಗಿ ಸಿನಿಪ್ರಿಯರು ಕಾದಿದ್ದರು. ಈಗ,  ಈ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಯಾಗಿ ಪ್ರಜ್ವಲ್ ಅವರ ಅಭಿನಯಕ್ಕೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಅದರಲ್ಲೂ ‘ಸಾಹಸ ಸಿಂಹ’ ವಿಷ್ಣುವರ್ಧನ್ ಅಭಿಮಾನಿಗಳು ‘ವೀರಂ’ ನಿರೀಕ್ಷೆ ಇಟ್ಟುಕೊಂಡಿದ್ದು ಹುಸಿಯಾಗದೆ, ವಿಷ್ಣು ಅಭಿಮಾನಿಗಳು ಅದ್ಭುತವಾಗಿ ಸಿನಿಮಾವನ್ನು ಸ್ವೀಕರಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರು ವಿಷ್ಣುವರ್ಧನ್ ಫ್ಯಾನ್ ಆಗಿ ಕಾಣಿಸಿಕೊಂಡಿದ್ದು ವಿಷ್ಣು ಅಭಿಮಾನಿಗಳಿಗೆ ಸಂಭ್ರಮವನ್ನು ತಂದುಕೊಟ್ಟಿದ್ದಾರೆ. ಅವರ ಕೈ ಮೇಲೆ ಇರುವ ವಿಷ್ಣು ದಾದಾ ಟ್ಯಾಟೂ ಕೂಡ ಗಮನ ಸೆಳೆಯುತ್ತಿದೆ.

Pentagon’ Kannada Movie Review : ಪಂಚ ಕಥೆಗಳ ಪವರ್‌ಫುಲ್ ಪಂಚ್!`

`ವೀರಂ’ಗೆ ಎಲ್ಲೆಡೆ ಅದ್ಧೂರಿ ಸ್ವಾಗತ ಸಿಕ್ಕಿದೆ . ಚಿತ್ರವನ್ನು ನೋಡಿರುವ ಪ್ರೇಕ್ಷಕ ಇದು ಮನಮುಟ್ಟುವ ಸಂಪೂರ್ಣ ಕೌಟುಂಬಿಕ ಮಾಸ್ ಸಿನಿಮಾ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ. ಅಣ್ಣ-ಅಕ್ಕನ ಪ್ರೀತಿಯ ತಮ್ಮನಾಗಿ `ವೀರು’ ಎಂಬ ಪಾತ್ರದಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ತನ್ನ ಪೊಲಿಟಿಕಲ್ ಆಕಾಂಕ್ಷೆಗಾಗಿ ದೇವಿ ಎಂಬ ವ್ಯಕ್ತಿ ಸಮಾನ್ಯ ಜನರಿಗೆ ದೆವ್ವವಾಗಿ ಕಾಡುತ್ತಾ, ವೀರು ಮತ್ತು ಅವನ ಕುಟುಂಬದ ಮಧ್ಯೆ ಕಂಟಕಪ್ರಾಯವಾಗಿ ನಿಲ್ಲುತ್ತಾನೆ. ಸಂಬAಧಗಳ ನಡುವಿನ ಜಿದ್ಮಾ ಜಿದ್ದಿ ಶುರುವಾಗುತ್ತದೆ. ಇದರ ಮಧ್ಯೆ ವೀರುವಿನ ಪ್ರೇಮ ಕಥೆಯೂ ಸಾಗುತ್ತದೆ. ತನ್ನ ತಂದೆ ಸಾವಿಗೆ ಜೇಡ (ಶಿಷ್ಯ ದೀಪಕ್) ವೀರುವಿನ ಅಣ್ಣನನ್ನು  ಸಾಯಿಸಿ, ವೀರುವಿನ ಸಾವಿಗಾಗಿ ಹೊಂಚು ಹಾಕುತ್ತಾನೆ. ಮುಂದೆ ಅವರಿಬ್ಬರಲ್ಲಿ ಯಾರು ಗೆಲ್ಲುತ್ತಾರೆ? ವೀರುವಿನ ಪ್ರೇಯಸಿಯ ಬದುಕು ಎನಾಗುತ್ತದೆ? ಅಸಲಿಗೆ ವೀರು ಯಾರು? ಎಂಬ ಸಂಗತಿಗಾಗಿ ಸಿನಿಮಾ ನೋಡಬೇಕು.

ನೆತ್ತರ ಕಡಲಲ್ಲಿ ಅರಕೇಶ್ವರನ ದುನಿಯಾ!

ಈ ಕಥೆಯಲ್ಲಿ ಬರುವ ಪ್ರತಿಯೊಬ್ಬರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಚಿತಾರಾಮ್ ಕಾಲೇಜ್ ಹುಡುಗಿಯಾಗಿ ಪಡ್ಡೆ ಹುಡುಗರ ಹೃದಯ ಕದ್ದರೆ, ನಟಿ ಶೃತಿ ಅಲಲ್ಲಿ ಹೃದಯ ಕಲಕುತ್ತಾರೆ. ಇನ್ನು ಅಚ್ಯುತ್ ಕುಮಾರ್, ಶ್ರೀನಗರ ಕಿಟ್ಟಿ ಅಭಿನಯ ಇಡೀ ಚಿತ್ರದ ಹೈಲೈಟ್. ಫೈಟ್ ವಿಚಾರಕ್ಕೆ ಬಂದರೆ ಪ್ರಜ್ವಲ್ ಇಮೇಜಿಗೆ ತಕ್ಕಂತೆ ಮಾಸ್ ಪ್ರೇಕ್ಷಕರನ್ನು ತಲೆಯಲ್ಲಿಟ್ಟುಕೊಂಡು ಚಿತ್ರಿಸಲಾಗಿದ್ದು , ಅಭಿಮಾನಿಗಳನ್ನು ರಂಜಿಸುತ್ತವೆ . ಇನ್ನು ಮೊದಲ ಬಾರಿಗೆ ನಿರ್ದೇಶನದ ಕ್ಯಾಪ್ ಧರಿಸಿರುವ ಖದರ್ ಕುಮಾರ್ ಮೊದಲ ಪ್ರಯತ್ನದಲ್ಲಿಯೇ ಗೆದ್ದಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅನೂಪ್ ಸಿಳೀನ್ ಸಂಗೀತ ಮತ್ತು ಬ್ಯಾಗೌಂಡ್ ಸ್ಕೋರ್ ಅದ್ಭುತವಾಗಿ ನಿಭಾಯಿಸಿದ್ದಾರೆ.

`Vijayanand’ Movie Review : A story worth telling, a movie worth watching

ಲವಿತ್ ಛಾಯಾಗ್ರಹಣ ಉತ್ತವಾಗಿದ್ದು, ರವಿಚಂದ್ರನ್ ಸಂಕಲನ ಚಿತ್ರವನ್ನು ಹೆಚ್ಚು ನೋಡೆಬಲ್ ಮಾಡಿದೆ. ಡಿಫರೆಂಡ್ ಡ್ಯಾನಿ ಸಾಹಸ ದೃಶ್ಯಗಳು ಕಥೆಗೆ ಪೂರಕವಾಗಿದೆ.  ‘ವೀರಂ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರ ಗೆಟಪ್ ಸಂಪೂರ್ಣ ಬದಲಾಯಿಸಿಕೊಂಡು, ಸಿಕ್ಕಾಪಟ್ಟೆ ಮಾಸ್ ಅವತಾರದಲ್ಲಿ ಅವರು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಭರ್ಜರಿ ಆ್ಯಕ್ಷನ್ ದೃಶ್ಯಗಳು ಪ್ರಜ್ವಲ್ ಸಿನಿಪಯಣಕ್ಕೆ ಪ್ಲಸ್ ಆಗಲಿದೆ.

 

Share this post:

Related Posts

To Subscribe to our News Letter.

Translate »