ವಾಸುಕಿ ವೈಭವ್ ರವರ ಇಂಪಾದ ಕಂಠದಲ್ಲಿ ಮೂಡಿಬಂದಿರುವ ನಿನದೇ ನೆನಪು ಯಂಬ ಗೀತೆ, ಎಲ್ಲೆಡೆ ಮೆಚ್ಚುಗೆ ಗಳಿಸಿದ್ದು, ಕಳೆದುಕೊಂಡಿರುವ ಹಳೇ ಪ್ರೀತಿಯನ್ನು ನೆನಪು ಮಾಡುವುದರಲ್ಲಿ ಯಶಸ್ವಿಯಾಗಿದೆ. ವೈಶಾಕ್ ವರ್ಮಾ ಸಾಹಿತ್ಯ ಹಾಗೂ ಸಂಗೀತದ ಹೊಸ ದಿನಚರಿಯನ್ನು ಕೀರ್ತಿ ಶೇಖರ್ ಮತ್ತು ವೈಷಾಕ್ ಪುಷ್ಪಲತ ನಿರ್ದೇಶಿಸಿದ್ದಾರೆ. ಮೃತ್ಯುಂಜಯ ಶುಕ್ಲ, ಅಲೋಕ್ ಚೌರಾಸಿಯಾ ಹಾಗೂ ಗಂಗಾಧರ್ ಸಾಲಿಮಠ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರ ಇದೇ ಡಿಸೆಂಬರ್ 9ಕ್ಕೆ ತೆರೆಗೆ ಬರುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.