ಚಂದನವನದ ಸದ್ಯ ಹಾಟ್ ಟಾಪಿಕ್ ಅಂದ್ರೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ. ಸ್ಯಾಂಡಲ್ವುಡ್‌ನ ಮತ್ತೊಂದು ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ವಸಿಷ್ಠ ಸಿಂಹ, ಹರಿಪ್ರಿಯಾ ಒಬ್ಬರಿಗೆ ಒಬ್ಬರು ಅರ್ಥ ಮಾಡಿಕೊಂಡು ಈಗ ಮದುವೆ ಎಂಬ ಬಂಧನಕ್ಕೆ ಒಳಗಾಗಲು ರೆಡಿಯಾಗಿದ್ದಾರೆ. ಅಲ್ಲದೆ ಇತ್ತೀಚಿಗಷ್ಟೇ ಈ ಜೋಡಿ ಮನೆಯವರ ಸಮ್ಮುಖದಲ್ಲಿ ಕಲರ್ ಪುಲ್ ಆಗಿ ಉಂಗುರ ಬದಲಿಸಿ ಕೊಳ್ಳುವ ಮೂಲಕ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ. ಸದ್ಯ ಈಗ ಸಿಂಹ ಪ್ರಿಯ ಜೋಡಿಯ ನಿಶ್ಚಿತಾರ್ಥದ ಸುಂದರವಾದ ಪೋಟೋಗಳು ಹಾಗೂ ವಿಡಿಯೋ ಅವರ ಅಭಿಮಾನಿಗಳನ್ನು ಮನಸೂರೆಗೊಳ್ಳುತ್ತಿವೆ. ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಹರಿಪ್ರಿಯಾ ಹಾಗೂ ವಶಿಷ್ಠ ಸಿಂಹ, ನಮ್ಮಿಬ್ಬರ ನಿಶ್ಚಿತಾರ್ಥವಾಗಿದೆ. ನಮಗೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.