Left Ad
ವಸಿಷ್ಠ ಸಿಂಹ ಹುಟ್ಟುಹಬ್ಬಕ್ಕೆ ಕಲಾ ಸೃಷ್ಠಿ ಪ್ರೊಡಕ್ಷನ್ಸ್ ನಿಂದ ಹೊಸ ಸಿನಿಮಾ ಘೋಷಣೆ . - Chittara news
# Tags

ವಸಿಷ್ಠ ಸಿಂಹ ಹುಟ್ಟುಹಬ್ಬಕ್ಕೆ ಕಲಾ ಸೃಷ್ಠಿ ಪ್ರೊಡಕ್ಷನ್ಸ್ ನಿಂದ ಹೊಸ ಸಿನಿಮಾ ಘೋಷಣೆ .

ಬ್ರಹ್ಮ ನಿರ್ದೇಶನದಲ್ಲಿ ಮೂಡಿಬರಲಿದೆ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರತಮ್ಮ ಅಮೋಘ ಅಭಿನಯ ಹಾಗೂ ಕಂಠದ ಮೂಲಕ ಕನ್ನಡಿಗರ ಮನ ಗೆದ್ದಿರುವ ವಸಿಷ್ಠ ಸಿಂಹ ಅವರಿಗೆ ಈಗ(ಅಕ್ಟೋಬರ್ 19) ಹುಟ್ಟುಹಬ್ಬದ ಸಂಭ್ರಮ.

ಇದನ್ನೂ ಓದಿ  ‘ಗರಡಿ’ಯಿಂದ ಬಂತು ಮೂರನೇ ಹಾಡು .

ವಸಿಷ್ಠ ಸಿಂಹ ಹುಟ್ಟುಹಬ್ಬದ ಸಲುವಾಗಿ ಕಲಾ ಸೃಷ್ಠಿ ಪ್ರೊಡಕ್ಷನ್ಸ್ ನಿಂದ ಹೊಸ ಚಿತ್ರದ ಘೋಷಣೆಯಾಗಿದೆ ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಅಫ್ಜಲ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಈ ಹಿಂದೆ “ಸಿದ್ದಿ ಸೀರೆ” ಹಾಗೂ ರಾಗಿಣಿ ಅಭಿನಯದ “ಸಾರಿ” ಕರ್ಮ ರಿಟರ್ನ್ಸ್ ಚಿತ್ರದ ನಿರ್ದೇಶಕ ಬ್ರಹ್ಮ ಈ ನೂತನ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಇದನ್ನೂ ಓದಿ  ಮೈಸೂರು ದಸರಾದಲ್ಲಿ ಬಿಡುಗಡೆಯಾಯಿತು “F0R REGN” ಚಿತ್ರದ ಪೋಸ್ಟರ್ ಹಾಗೂ ಹಾಡು…

ಕ್ರೈಮ್ ಥ್ರಿಲ್ಲರ್ ಹಾಗೂ ರಿವೆಂಜ್ ಕಥಾಹಂದರ ಹೊಂದಿರುವ ಈ ಚಿತ್ರ ಹಾಲಿವುಡ್ ಸ್ಟೈಲ್ ನಲ್ಲಿ (ನಾನ್ ಲೀನಿಯರ್ ಸ್ಕ್ರೀನ್ ಪ್ಲೇ) ಮೇಕಿಂಗ್ ಇರಲಿದೆ. ಬೆಂಗಳೂರು, ಕೊಡಗು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ದೀಪಾವಳಿ ಹಬ್ಬದ ನಂತರ ಚಿತ್ರೀಕರಣ ಆರಂಭವಾಗಲಿದೆ.

ಇದನ್ನೂ ಓದಿ  ‘ಚಿಕ್ಕಿಯ ಮೂಗುತಿ’ ಚಿತ್ರದ ಪವರ್ ಫುಲ್ ಟೀಸರ್ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್

ರಾಜೀವ್ ಗಣೇಶನ್ ಛಾಯಾಗ್ರಹಣ ಹಾಗೂ ರಾಘವನ್ ಕಾರ್ತಿಕ್ ಸಂಗೀತ ನಿರ್ದೇಶನ “ಪ್ರೊಡಕ್ಷನ್ ನಂ ೧” ಚಿತ್ರಕ್ಕಿರಲಿದೆ. ಅನೇಕ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

Spread the love
Translate »
Right Ad