Sandalwood Leading OnlineMedia

“ವರ್ಣಂ”ಗೆ ವರ್ಣಮಯ ಮುಹೂರ್ತ

ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗು ನೋಡುತ್ತಿರುವ ಈ  ಸಮಯದಲ್ಲಿ ವಿಭಿನ್ನ ಕಥೆಯುಳ್ಳ ಅನೇಕ ನೂತನ ಚಿತ್ರಗಳು ಆರಂಭವಾಗುತ್ತಿದೆ..ಅಂತಹುದೇ ಒಂದು ವಿಭಿನ್ನ ಕಥಾಹಂದರ ಹೊಂದಿರುವ “ವರ್ಣಂ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ತುಮಕೂರಿನ ಶೆಟ್ಟಿಹಳ್ಳಿ ಶ್ತೀಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆರಂಭವಾಯಿತು. ಶ್ರೀಮತಿ ಸೌಭಾಗ್ಯಮ್ಮ(ನಿರ್ಮಾಪಕರ ತಾಯಿ) ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

 

 

 “ಹೇ ಬ್ರೋ”:  ಸೂರಜ್ ಮುಖೇಶ್ ಅಭಿನಯಕ್ಕೆ ಭರಪೂರ ಮೆಚ್ಚುಗೆ

ಏಂಜಲ್ ಫಿಲಂಸ್ ಲಾಂಛನದಲ್ಲಿ ಆರ್ ಜಗದೀಶ್ ಬಾಬು ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಅರುಣ್ ರಾಜ ನಿರ್ದೇಶಿಸುತ್ತಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಕಥೆ ಚೈತ್ರಾ ಅನಂತಾಡಿ ಅವರದು. ಚಿತ್ರಕಥೆಯನ್ನು ಮಂಜುನಥ್ ಕೋಟೆಕೆರೆ ಬರೆದಿದ್ದಾರೆ.ಪ್ರದೀಪ್ ವಿ ಬಂಗಾರಪೇಟೆ ಛಾಯಾಗ್ರಹಣ,  ಕೀರ್ತಿರಾಜ್ ಹಿನ್ನೆಲೆ ಸಂಗೀತ ಹಾಗೂ ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ‌. ಪವನ್ ಎನ್ ಈ ಚಿತ್ರದ ಸಹ ನಿರ್ಮಾಪಕರು.

 

 

 

‘ಕಬ್ಜ’ಚಿತ್ರದ ಹಿಂದಿ ಅವತರಣಿಕೆ ಹಕ್ಕುಗಳು ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯ ತೆಕ್ಕೆಗೆ: ಹಿಂದಿ ಟೀಸರ್ಗೆ ಬಾಲಿವುಡ್ ಫಿದಾ

 

 

ಮನು ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮೇಘನ “ವರ್ಣಂ” ಚಿತ್ರದ ನಾಯಕಿ. ಎಂ.ಕೆ.ಮಠ, ರಿತಿಕ್ ಮುಂತಾದವರು ತಾರಾಬಳಗದಲ್ಲಿದ್ದಾರೆ.ಎರಡು ಮೈನವಿರೇಳಿಸುವ ಸಾಹಸ ಸನ್ನಿವೇಶಗಳು ಹಾಗೂ ಎರಡು ಇಂಪಾದ ಹಾಡುಗಳು “ವರ್ಣಂ” ಚಿತ್ರದಲ್ಲಿದೆ. ಡಿಸೆಂಬರ್ 8 ರಿಂದ ತುಮಕೂರು, ಹೊನ್ನಾವರ ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

 

 

 

Share this post:

Related Posts

To Subscribe to our News Letter.

Translate »