Sandalwood Leading OnlineMedia

`love..ಲಿ’ ಮೂಲಕ ಬೆಳ್ಳಿತೆರೆಗೆ ವಂಶಿಕಾ

 ಮಾಸ್ಟರ್ ಆನಂದ್ ಪರಿಚಯ ಕರ್ನಾಟಕದಲ್ಲಿ ಯಾರಿಗಿಲ್ಲ ಹೇಳಿ? ಚಿತ್ರರಂಗದಲ್ಲಿ ಹೆಸರು ಮಾಡಿರುವ ಆನಂದ್ ಮಗಳು ಕಿರುತೆರೆ ಲೋಕದಲ್ಲಿ ಹವಾ ಸೃಷ್ಟಿಸಿದ್ದಾಳೆ.  ಪಟ ಪಟ‌ ಮಾತು ತನ್ನ ಅಮೋಘ ನಟನೆಯಿಂದ ಸಣ್ಣಪರದೆ ಪ್ರೇಕ್ಷಕರನ್ನು ಈ ಬಿಜಲಿ ಪಟಾಕಿ ಆವರಿಸಿಕೊಂಡಿದ್ದಾಳೆ. ಕಿರುತೆರೆ ರಿಯಾಲಿಟಿ ಶೋ ಮೂಲಕ ಜನ ಮನ ಗೆದ್ದಿರುವ ವಂಶಿಕಾ ಈಗ ಬೆಳ್ಳಿತೆರೆಗೂ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾಳೆ.

ಗಣೇಶ ಹಬ್ಬಕ್ಕೆ ‘ಹಿರಣ್ಯ’ ಸಿನಿಮಾದ ನಯಾ ಪೋಸ್ಟರ್ ರಿಲೀಸ್…ಮಾಸ್ ಲುಕ್ ನಲ್ಲಿ ಮಿಂಚಿದ ಮ್ಯಾಸೀವ್ ಸ್ಟಾರ್ ರಾಜವರ್ಧನ್

ಪ್ರತಿಭಾನ್ವಿತ ನಾಯಕ ಕಂ ಗಾಯಕ ವಸಿಷ್ಠ ಸಿಂಹ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ love..ಲಿ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರಕ್ಕೆ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪ ಎಂಟ್ರಿ ಕೊಟ್ಟಿದ್ದಾಳೆ. ವಂಶಿಕಾ ತನು ಎಂಬ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದು, ಬರುವ ಸೆಪ್ಟೆಂಬರ್ 6ರಿಂದ ವಂಶಿಕಾ ಭಾಗದ ಶೂಟಿಂಗ್ ಶುರುವಾಗಲಿದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಪಾತ್ರ ಸೃಷ್ಟಿಸಿದ್ದು ಖಂಡಿತ ನೋಡುಗರನ್ನು ವಂಶಿಕಾ ಮನರಂಜನೆ ನೀಡುತ್ತಾಳೆ ಎನ್ನುತ್ತಾರೆ ನಿರ್ದೇಶಕ ಚೇತನ್ ಕೇಶವ್.ಈಗಾಗಲೇ ಸಿನಿಮಾದ 50% ಶೂಟಿಂಗ್ ಕಂಪ್ಲೀಟ್ ಆಗಿದ್ದು, ಆ್ಯಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹನಿಗೆ ಜೋಡಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ನಾಯಕಿಯಾಗಿ ನಟಿಸುತ್ತಿದ್ದಾರೆ.

 

ಸಮಂತಾ ಅಭಿನಯದ ಬಹುನಿರೀಕ್ಷೆಯ ಸೆ. 09ಕ್ಕೆ ‘ಯಶೋದಾ’ ಟೀಸರ್ ಬಿಡುಗಡೆ

 

ಮಫ್ತಿ ನಿರ್ದೇಶಕ ನರ್ತನ್‌ ಜೊತೆಗೆ ಕೆಲಸ ಮಾಡಿರುವ ಅನುಭವ ಇರುವ ಚೇತನ್‌ ಕೇಶವ್‌ ಈಗ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲು ಹೊರಟಿದ್ದಾರೆ. ರೌಡಿಸಂ ಕಥೆ ಜೊತೆಗೆ ಆ್ಯಕ್ಷನ್‌  ರೋಮ್ಯಾಂಟಿಕ್‌ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರವೀಂದ್ರ ಕುಮಾರ್‌  ನಿರ್ಮಿಸುತ್ತಿದ್ದು, ಹರೀಶ್‌ ಕೊಮ್ಮೆ ಸಂಕಲನ, ಅಶ್ವಿನ್ ಕೆನಡಿ ಕ್ಯಾಮೆರಾ ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ.

 

Share this post:

Related Posts

To Subscribe to our News Letter.

Translate »