Sandalwood Leading OnlineMedia

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳೆದುರು ಸ್ತೋತ್ರ ಹಾಡಿ ಮನಗೆದ್ದ ವಂಶಿಕ

ತನ್ನ ಮುಗ್ಧ ನಟನೆಯಿಂದ ಹಾಗೂ ನೃತ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಗಳ ಮೂಲಕ ಮೆಚ್ಚುಗೆಯನ್ನು ಗಳಿಸಿದ್ದ ಈ ಹುಡುಗಿ ವಂಶಿಕ  ಇದೀಗ ಕಿರುತೆರೆ ಕಾರ್ಯಕ್ರಮಗಳಲ್ಲಿ ಜನರನ್ನು ರಂಜಿಸುತ್ತಿದ್ದಾಳೆ. ಹೌದು ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ಗಿಲಿ ಶೋಗಳ ಮೂಲಕ ತನ್ನ ಅಭಿನಯ ಚಾತುರ್ಯದಿಂದ ಪ್ರೇಕ್ಷಕರನ್ನು ರಂಜಿಸಿ ಮೆಚ್ಚುಗೆಗಳನ್ನು ಗಿಟ್ಟಿಸಿಕೊಂಡಿದ್ದು, ವಯಸ್ಸಿಗೆ ಮೀರಿದ ಆಕೆಯ ನಟನೆಗೆ ಮರುಳಾಗದ ಪ್ರೇಕ್ಷಕರಿಲ್ಲ.

ಹೌದು ಆದರೂ ಕೂಡ ಕೆಲವರು ದೊಡ್ಡವರ ಶೋನಲ್ಲಿ ಚಿಕ್ಕ ಹುಡುಗಿಯನ್ನು ಹಾಕಿಕೊಂಡಿರುವುದಕ್ಕೆ ಅಪಸ್ವರ ಎತ್ತಿದ್ದು ಮಾಸ್ಟರ್ ಆನಂದ್ ಪುತ್ರಿ ವಂಶಿಕ ಅಂಜನಿ ಕಶ್ಯಪ ತಂದೆಯಂತೆಯೇ ಬಾಲನಟಿಯಾಗಿ ಚತುರತೆಯಿಂದ ನಟಿಸುತ್ತಿದ್ದಾಳೆ.

 ಇತ್ತೀಚಿಗೆ ಮಾಸ್ಟರ್ ಆನಂದರವರು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಹಾಗೆ ತಮ್ಮ ಗ್ರೀನ್ ಗೆಳೆಯರು ತಂಡದ ಮೂಲಕ ಸ್ವಚ್ಚತಾ ಕಾರ್ಯವನ್ನು ಧರ್ಮಸ್ಥಳದಲ್ಲಿ ಹಮ್ಮಿಕೊಂಡಿದ್ದರು. ಅಲ್ಲದೇ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಕೂಡ ಭೇಟಿ ಮಾಡಿ ಅವರಿಂದ ಆಶೀರ್ವಚನವನ್ನು ಪಡೆಯುವ ವೇಳೆ ವಂಶಿಕಾಳಿಂದ ಸ್ತೋತ್ರವನ್ನು ಹೇಳಿಸಿದರು.

ಇನ್ನು ವಂಶಿಕ ತನ್ನ ಮುಗ್ಧ ಮಾತುಗಳಿಂದ ಪಟಾಕಿಯಂತೆ ಡೈಲಾಗ್ ಹೇಳುವುದು ಡ್ಯಾನ್ಸ್ ಮಾಡುವುದಲ್ಲದೇ ತಾನು ದೇವರನಾಮಗಳನ್ನು ಶ್ಲೋಕಗಳನ್ನು ಹೇಳುವುದರಲ್ಲೂ ಮುಂದಿರುವೆ ಎಂದು ಸಾಬೀತುಪಡಿಸಿದ್ದಾರೆ.

ಹೌದು ಇವಳ ಈ ಶ್ಲೋಕಗಳನ್ನು ಮೌನದಿಂದ ಆಲಿಸಿದ ಡಾಕ್ಟರ್ ವೀರೇಂದ್ರ ಹೆಗ್ಗಡೆಯವರು ಉಡುಗೊರೆಯನ್ನು ಸಹ ನೀಡಿದ್ದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮಾಸ್ಟರ್ ಆನಂದ್ ರವರು ಹೀಗೆಂದು ಹೇಳಿಕೊಂಡಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ವಂಶಿಕ ಹೇಳಿದ ಶ್ಲೋಕವನ್ನು ತಂದೆಯಂತೆ ಆಲಿಸಿ ತಾಯಿಯಂತೆ ಅವಳಿಗೆ ಉಡುಗೊರೆಯನ್ನು ನೀಡಿದ ಧರ್ಮದೇವತೆಯ ಪ್ರೀತಿಯ ಪುತ್ರ ಶ್ರೀ ವೀರೇಂದ್ರ ಹೆಗ್ಗಡೆ ಅಪ್ಪಾಜಿಯವರಿಗೆ ಧನ್ಯವಾದಗಳು ಎಂದಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಇಂತಹ ಸುಪುತ್ರಿಯನ್ನು ಪಡೆದ ನೀವೇ ಧನ್ಯರು ಎಂದು ಹೊಗಳುತ್ತಿದ್ದಾರೆ.

 

 

Share this post:

Related Posts

To Subscribe to our News Letter.

Translate »