ಮೋಜೋ, ನಾನು ನನ್ ಜಾನು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಮನು ಯು.ಬಿ ನಿರ್ದೇಶನದ ಅಖಾಡಕ್ಕೆ ಇಳಿದಿದ್ದಾರೆ. ತಾವೇ ಕಥೆ ಚಿತ್ರಕಥೆ ಸಂಭಾಷಣೆ ಬರೆದು ‘ಯೂಸ್ ಲೆಸ್ ಫೆಲೋ’ ಎಂಬ ಸಿನಿಮಾ ನಿರ್ದೇಶಿಸಿ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಕಾಣದ ಕಡಲಿಗೆ, ಬ್ರೋಕನ್, ನೆನಪಿದೆಯಾ ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಅವರೀಗ ಆ ಅನುಭವ ಇಟ್ಟುಕೊಂಡು ಯೂಸ್ ಲೆಸ್ ಫೆಲೋ ಚಿತ್ರ ಕಥೆ ಎಣೆದು ಆಕ್ಷನ್ ಕಟ್ ಹೇಳಿದ್ದಾರೆ.
ಬಾಲ್ಯದಿಂದಲೇ ಸಿನಿಮಾ ಕನಸು ಇಟ್ಟುಕೊಂಡಿದ್ದ ಮನು ಯು.ಬಿ ಒಂದಷ್ಟು ವರ್ಷಗಳ ಕಾಲ ಐಟಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸಿದ್ದರು. ಆದರೆ ಸಿನಿಮಾ ಮೇಲಿನ ಸೆಳೆತ ಅವರನ್ನು ಚಿತ್ರರಂಗಕ್ಕೆ ಕರೆತಂದು ನಿಲ್ಲಿಸಿದೆ. ನಾಯಕನಾಗಿ ಗಮನಸೆಳೆದಿರುವ ಅವರೀಗ ನಿರ್ದೇಶನದಲ್ಲಿ ಛಾಪೂ ಮೂಡಿಸುವ ಎಲ್ಲಾ ಸೂಚನೆ ಸಿಕ್ಕಿದೆ. ಈಗಾಗಲೇ ಯೂಸ್ ಲೆಸ್ ಫೆಲೋ ಸಿನಿಮಾದ ಮೆರವಣಿಗೆ ಹಾಡಿಗೆ ಭಾರೀ ಮೆಚ್ಚುಗೆ ಸಿಕ್ಕಿದ್ದು, ಇದೀಗ ಎರಡನೇ ಸಾಂಗ್ ಬಿಡುಗಡೆಯಾಗಿದೆ.
ಇದನ್ನೂ ಓದಿ: Garadi Movie Review : ಮೋಡಿ ಮಾಡದ ಗರಡಿ : ಭಟ್ರು ಎಡವಿದ್ದೆಲ್ಲಿ?
ಯೂಸ್ ಲೆಸ್ ಫೆಲೋ ಅಂಗಳದಿಂದ ಡೋಂಟ್ ಕೇರ್ ಎಂಬ ಮಾಸ್ ನಂಬರ್ ಅನಾವರಣಗೊಂಡಿದೆ. ನಾಯಕನ ಗುಣವನ್ನು ವರ್ಣಿಸುವ ಈ ಸಿಂಗಿಂಗ್ ಮಸ್ತಿಗೆ ಸ್ವತಃ ನಿರ್ದೇಶಕ ಮನು ಯುಬಿ ಸಾಹಿತ್ಯ ಬರೆದಿದ್ದು, ಕಂಬ್ಳಿಹುಳ ಖ್ಯಾತಿಯ ಶಿವ ಪ್ರಸಾದ್ ಟ್ಯೂನ್ ಹಾಕಿದ್ದು, ಅರ್ಫಾಜ್ ಉಳ್ಳಾಲ್ ಧ್ವನಿಯಾಗಿದ್ದಾರೆ. ಐ ಡೋಂಟ್ ಕೇರ್ ಎನ್ನುತ್ತಾ ನಾಯಕ ಮನು ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ: ಟೀಸರ್ ನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ, ಕರಾವಳಿಯ ದೈವಾರಾಧನೆಯ ಕಥೆ ಹೊತ್ತ ‘ಸತ್ಯಂ’
ಲವ್ ಕಂ ಆಕ್ಷನ್ ಕಥಾಹಂದರ ಹೊಂದಿರುವ ಯೂಸ್ ಲೆಸ್ ಫೆಲೋ ಸಿನಿಮಾದಲ್ಲಿ ಮನುಗೆ ಜೋಡಿಯಾಗಿ ದಿವ್ಯಾ ಗೌಡ ನಟಿಸಿದ್ದು, ವಿನೋದ್ ಗೊಬ್ಬರಗಾಲ, ಜೆಕೆ ಮೈಸೂರು, ಸುರೇಶ್ ತಾರಾಬಳಗದಲ್ಲಿದ್ದಾರೆ. ರಾಜರತ್ನ ಎಂಬ ಪ್ರೊಡಕ್ಷನ್ ಹೌಸ್ ನಡಿ ಮನು ತಾಯಿ ರತ್ನ ಬಸವರಾಜು ಚಿತ್ರ ನಿರ್ಮಾಣ ಮಾಡುತ್ತಿದ್ದು, ಹರಿವು, ಪಿಂಗಾರ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಿರ್ಮಾಪಕ ಅವಿನಾಶ್ ಶೆಟ್ಟಿ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ವಿಜಯ್ ಸಿಂದಿಗಿ ಸಂಕಲನ, ಶಿವಪ್ರಸಾದ್ ಸಂಗೀತ ಚಿತ್ರಕ್ಕಿದೆ. ಹಾಸನ, ಸಕಲೇಶಪುರ, ಹುಬ್ಬಳ್ಳಿ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್ ಪಾಸ್ ಆಗಿರುವ ಯೂಸ್ ಲೆಸ್ ಫೆಲೋ ಸಿನಿಮಾ ಆದಷ್ಟು ಬೇಗ ನಿಮ್ಮ ಮುಂದೆ ಹಾಜರಾಗಲಿದೆ.