ಉರ್ಫಿ ಜಾವೇದ್ ಈಗ ಟಾಪ್ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ಕಾರಣ ಅವರು ತೊಡುವ ಚಿತ್ರ ವಿಚಿತ್ರದ ಬಟ್ಟೆಗಳು. ತನ್ನ ಅತಿರೇಕದ ಫ್ಯಾಷನ್ ಸೆನ್ಸ್ ಮತ್ತು ತರಹೇವಾರಿ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದವರು. ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್ ಸಕ್ರಿಯವಾಗಿದ್ದಾರೆ. ಪ್ರತಿ ದಿನ ಅವರು ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡು ಅಚ್ಚರಿ ಮೂಡಿಸುತ್ತಿದ್ದಾರೆ. ಒಂದಿಲ್ಲೊಂದು ಅವತಾರದಲ್ಲಿ ಕ್ಯಾಮರಾ ಕಣ್ಣಿಗೆ ಕಣ್ಣಿಗೆ ಬೀಳುವ ಈ ನಟಿಯು ಸದ್ಯ ಪಡ್ಡೆ ಹುಡುಗರ ಕನಸಿನ ರಾಣಿ. ಹೇರ್ ಸ್ಟೈಲ್ ಮತ್ತು ಅಂಗಾಂಗ ಪ್ರದರ್ಶನಲ್ಲಿ ಎಲ್ಲ ನಟಿಯರಿಗಿಂತ ವಿಭಿನ್ನ. ಇದರಿಂದ ಟ್ರೋಲ್ಗೂ ಒಳಗಾಗಿದ್ದು ಉಂಟು. ಆದರೂ, ಇದನ್ನೆಲ್ಲ ತಲೆಗೆ ಹಚ್ಚಿಕೊಳ್ಳದ ಉರ್ಫಿ ಬಗೆ ಬಗೆಯ ಅವತಾರದಲ್ಲಿ ಕಾಣಿಸಿಕೊಳ್ಳುವುದನ್ನು ಮಾತ್ರ ಬಿಟ್ಟಿಲ್ಲ.ಬಟ್ಟೆಯಲ್ಲಿ ಎಲ್ಲ ಬಗೆಯ ಪ್ರಯೋಗಗಳನ್ನೂ ಅವರು ಮಾಡಿದ್ದಾರೆ. ಈಗ ಹೊಸ ವೇಷದಲ್ಲಿ ಉರ್ಫಿ ಫೋಟೋಶೂಟ್ ಮಾಡಿದ್ದಾರೆ. ಆ ಮೂಲಕ ಅವರು ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ.ಹಾಟ್ ಅವತಾರ ತಾಳುವಲ್ಲಿ ನಟಿ ಉರ್ಫಿ ಜಾವೇದ್ ಅವರಿಗೆ ಯಾರೂ ಸರಿಸಾಟಿ ಇಲ್ಲ. ದಿನದಿನವೂ ಅವರ ಮಾದಕತೆ ಹೆಚ್ಚುತ್ತಲೇ ಇದೆ. ಅದಕ್ಕೆ ಈ ಫೋಟೋಗಳೇ ಸಾಕ್ಷಿ.
–