ಏಳು ವರ್ಷಗಳ ನಂತರ ಮತ್ತೆ ಹೊಸ ಹುರುಪಿನಲ್ಲಿ ಹಳೇ ಡೈರೆಕ್ಟರ್ ಉಪ್ಪಿ ಡೈರೆಕ್ಷನ್ ಮೂಡ್ ಗೆ ಮರಳಿದ್ದಾರೆ. ಇದು ನಟ ಉಪೇಂದ್ರ ಅವರ ಪ್ಯಾನ್ಇಂಡಿಯಾ ಸಿನಿಮಾ. ಹಾಗಾಗಿ ಎಲ್ಲವೂ ದೊಡ್ಡ ಮಟ್ಟದಲ್ಲೇ ಇರಲಿದೆ. ಇನ್ನು ಇತ್ತೀಚೆಗೆ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಿದ ಉಪೇಂದ್ರ ಮತ್ತು ತಂಡ ಕನಿಷ್ಠ ಮಾಹಿತಿಯನ್ನು ಬಿಟ್ಟು ಕೊಡುವ ಮೂಲಕ ಮತ್ತಷ್ಟು ಕುತೂಹಲವನ್ನು ಹೆಚ್ಚು ಮಾಡಿದೆ.
ಮೊದಲ ಹಂತದ ಶೂಟಿಂಗ್ ಶುರುವಾಗಿದ್ದು ಆದಷ್ಟು ಬೇಗ ಚಿತ್ರೀಕರಣ ಮುಗಿಸುವ ಯೋಜನೆಯಲ್ಲಿದೆ ಚಿತ್ರತಂಡ. ಇದರ ನಡುವೆ ಉಪ್ಪಿ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎನ್ನುವ ಕುತೂಹಲ ಹುಟ್ಟಿಕೊಂಡಿದೆ.
‘ಕೆಜಿಎಫ್’ ತಾತ ಈಗ ‘ನ್ಯಾನೋ ನಾರಾಯಣಪ್ಪ’
ಇನ್ನು ಈ ಚಿತ್ರಕ್ಕೆ ಯಾರು ನಾಯಕಿ ಎನ್ನುವ ಕುತೂಹಲವೂ ಮೂಡಿದೆ. ಅಲ್ಲದೇ ಈಗಾಗಲೇ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಸೌಂಡ್ ಮಾಡಿರುವ ಇಬ್ಬರು ನಾಯಕಿಯರ ಮೇಲೆ ಉಪ್ಪಿ ಕಣ್ಣಿಟ್ಟಿದ್ದಾರಂತೆ. ಉಪ್ಪಿ ತಮ್ಮ ಚಿತ್ರಕ್ಕೆ ‘ಕೆಜಿಎಫ್’ ನಟಿ ಶ್ರೀನಿಧಿ ಶೆಟ್ಟಿಯನ್ನು ಕರೆತರುತ್ತಾರೆ ಎನ್ನಲಾಗಿದೆ. ‘ಕೆಜಿಎಫ್’ ಚಿತ್ರದಲ್ಲಿ ರೀನಾ ಪಾತ್ರದಲ್ಲಿ ಕಾಣಿಸಿದ್ದ ಶ್ರೀನಿಧಿ ಶೆಟ್ಟಿ ಉಪ್ಪಿಯ ‘ಯು ಐ’ ಚಿತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗುತ್ತಿದೆ.
ಶ್ರೀನಿಧಿ ಶೆಟ್ಟಿ ಜೊತೆಗೆ, ‘ಕೆಜಿಎಫ್ ಚಾಪ್ಟರ್ 1′ ನಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಎಂದು ಸೊಂಟ ಬಳುಕಿಸಿ ಮಿಂಚಿದ್ದ ತಮನ್ನಾ ಹೆಸರು ಕೂಡ ಕೇಳಿ ಬರ್ತಿದೆ. ಮಿಲ್ಕಿ ಬ್ಯೂಟಿ ಕಡೆಗೆ ಚಿತ್ರತಂಡದ ಒಲವಿದೆ ಎನ್ನುವುದು ತಿಳಿದು ಬಂದಿದೆ. ಇನ್ನೂ ಶ್ರೀನಿಧಿ ಶೆಟ್ಟಿ ಮತ್ತು ತಮನ್ನಾ ಇಬ್ಬರಲ್ಲಿ ಒಬ್ಬರು ಉಪೇಂದ್ರ ಅವರ ಈ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ. ಒಟ್ಟಿನಲ್ಲಿ, ಉಪ್ಪಿ ಹುರುಪಿನಿಂದ `ನಾನು ನೀನು’ ಅಂತ ಹೊರಟಿರುವಾಗ, ಶ್ರೀನಿಧಿ-ತಮನ್ನಾ `ನಾನಾ? ನೀನಾ?” ಅಂತ ಕುತೂಹಲದಿಂದ ಕಾಯ್ತಾ ಇರೋದಂತೂ ನಿಜ.