Sandalwood Leading OnlineMedia

ಟೈಟಲ್ ಆಗಿ ಬದಲಾದ ಉಪೇಂದ್ರರ `ಕರಿಮಣಿ ಮಾಲೀಕ ‘!

ಯು ಟರ್ನ್ 2 ಖ್ಯಾತಿಯ ಚಂದ್ರು ಓಬಯ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಂಥ ಜನಪ್ರಿಯ ಹಾಡಿನ ಟೈಟಲ್ ಇಟ್ಟುಕೊಂಡು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ತಮ್ಮ ಹೊಸ ಸಿನಿಮಾದ ಶೀರ್ಷಿಕೆಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿಸಿದ್ದಾರೆ. ಅದರ ಹೆಸರು “ಕರಿಮಣಿ ಮಾಲೀಕ ನೀನಲ್ಲ”. ಮ್ಯೂಸಿಕ್ ಅಡ್ಡಾದ ಲೋಕೇಶ್ ಅವರು ಟೈಟಲ್ ಲಾಂಚ್ ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರು ಓಬಯ್ಯ ‘ ಯುಟರ್ನ್ 2 ಆದ ನಂತರ ರಾಮು ಅಂಡ್ ರಾಮು ಚಿತ್ರ ಮಾಡಿದ್ದೆ. ಅದು ಸೆನ್ಸಾರ್ ಹಂತದಲ್ಲಿದೆ. ಅಲ್ಲದೆ ಪ್ಯಾಟಿ ಹುಡ್ಗಿ ಹಳ್ಳಿ ಲೈಫು ಇನ್ನೂ ಚಿತ್ರೀಕರಣ ಹಂತದಲ್ಲಿದೆ.

ಇನ್ನಷ್ಟು ಓದಿಗಾಗಿ:-   “My Favorite Possession – a CD gifted by Chiru’’ – Meghana Raj Sarja : chittara exclusive

ಈಗ ಕರಿಮಣಿ ಮಾಲೀಕ ನೀನಲ್ಲ ಟೈಟಲ್ ಇಟ್ಟುಕೊಂಡು ಈ ಚಿತ್ರವನ್ನು ಮುಂದಿನ ತಿಂಗಳು ಪ್ರಾರಂಭಿಸುತ್ತಿದ್ದೇನೆ. ಎಳನೀರು ಮಾರೋ ಹುಡುಗ, ಹೂ ಮಾರೋ ಹುಡುಗಿಯ ನಡುವೆ ನಡೆಯೋ ವಿಭಿನ್ನ ಪ್ರೇಮಕಥೆ ಈ ಚಿತ್ರದಲ್ಲಿದೆ. ನಾನು ರೆಡಿ ಮಾಡಿಕೊಂಡಿದ್ದ ಕಥೆಗೆ ಈ ಟೈಟಲ್ ಸೂಕ್ತ ಎನಿಸಿ ಇಟ್ಟಿದ್ದೇನೆ. ಮೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸಿ, 40 ದಿನಗಳ‌ ಕಾಲ‌ ಬೆಂಗಳೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಶೂಟಿಂಗ್ ಮಾಡೋ ಪ್ಲಾನಿದೆ. ಚಿತ್ರದಲ್ಲಿ 4 ಹಾಡುಗಳಿದ್ದು, ಮ್ಯೂಸಿಕ್ ಕೂಡ ನಾನೇ ಮಾಡುತ್ತಿದ್ದೇನೆ. ನಾಯಕಿಯಾಗಿ ರಮಿಕಾ ಸುತಾರ ಅಭಿನಯಿಸುತ್ತಿದ್ದು, ನಾಯಕನ ಪಾತ್ರಕ್ಕೆ ಹುಡುಕಾಟ ನಡೆಸಿದ್ದೇವೆ, ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರ ತಿಳಿಸುತ್ತೇನೆ ಎಂದು ಹೇಳಿದರು. ನಂತರ ನಾಯಕಿ ಪಾತ್ರ ಮಾಡುತ್ತಿರುವ ರಮಿಕಾ ಸುತಾರ ಮಾತನಾಡುತ್ತ ನಾನು ಮೂಲತ: ಗುಲ್ಬರ್ಗದವಳು. ಸಿನಿಮಾ ಬಗ್ಗೆ ಮೊದಲಿಂದಲೂ ಆಸಕ್ತಿಯಿತ್ತು. ಅವಕಾಶ ಸಿಕ್ಕಿರಲಿಲ್ಲ. ಆಕ್ಟಿಂಗ್ ಕ್ಲಾಸ್ ಹೋಗಿದ್ದೇನೆ. ಈ ಚಿತ್ರದಲ್ಲಿ ಹೂ ಮಾರುವ ಹುಡುಗಿಯಾಗಿ ನಟಿಸುತ್ತಿದ್ದೇನೆ ಎಂದು ಹೇಳಿದರು.

 

ಇನ್ನಷ್ಟು ಓದಿಗಾಗಿ:-  “My biggest fear is – being loved by someone ‘’ – Tanisha Kuppanda : chittara exclusive

ಮತ್ತೊಬ್ಬ ನಟಿ ಮೀನಾ ಕಿರಣ್ ಮಾತನಾಡಿ ನಾನು ಈಗಾಗಲೇ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹಿಂದೆ ಚಂದ್ರು ಅವರ ಜೊತೆ ಒಂದು ಚಿತ್ರ ಮಾಡಿದ್ದೆ. ಇದರಲ್ಲಿ ನಾನು ನಾಯಕಿಯ ತಾಯಿ ಪಾತ್ರ ಮಾಡುತ್ತಿದ್ದೇನೆ ಎಂದರು. ವೀನಸ್ ನಾಗರಾಜಮೂರ್ತಿ ಅವರು ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸುತ್ತಿದ್ದಾರೆ.

Share this post:

Related Posts

To Subscribe to our News Letter.

Translate »