Sandalwood Leading OnlineMedia

ಉಪೇಂದ್ರ ನಿರ್ದೇಶನದ ಚಿತ್ರಕ್ಕೆ ಮುಹೂರ್ತ ಫಿಕ್ಸ್

ಉಪೇಂದ್ರ ನಿರ್ದೇಶನದ ಚಿತ್ರಕ್ಕೆ ಮುಹೂರ್ತ ಫಿಕ್ಸ್

ಟಾಪ್ ಮೋಸ್ಟ್ ಡೈರೆಕ್ಷರ್ ಗಳಲ್ಲಿ ಒಬ್ಬರಾದ ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಸೆಟ್ಟೇರಲು ಸಿದ್ದವಾಗಿದೆ. ಪ್ರತಿ ಬಾರಿ ಟೈಟಲ್ ನಿಂದಲೇ ಕುತೂಹಲ ಹುಟ್ಟಿಸೋ ಉಪ್ಪಿ ಈ ಭಾರಿಯೂ ಅದೇ ಟ್ರಿಕ್ಸ್ ಪ್ಲೇ ಮಾಡಿದ್ದಾರೆ. ಸದ್ಯ ಉಪ್ಪಿ ರಿವಿಲ್ ಮಾಡಿರೋ ಟೈಟಲ್ ನೋಡಿ ಎಲ್ಲರೂ ಯಾರು? ಯಾರಿಗೆ? ಪಂಗನಾಮ ಹಾಕ್ತಾರೆ ಅಂತಿದ್ದಾರೆ.

ಜೂನ್ 3 ರಂದು ಅದ್ಧೂರಿ ಮುಹೂರ್ತದೊಂದಿಗೆ ಉಪ್ಪಿ ನಿರ್ದೇಶನದ ಪ್ರಾಜೆಕ್ಟ್ ಕಿಕ್‌ಸ್ಟಾರ್ಟ್ ಆಗಲಿದೆ. ಉಪ್ಪಿ ಡೈರೆಕ್ಟರ್ ಕ್ಯಾಪ್ ಯಾವಾಗ ಹಾಕೋತಾರೆ ಅಂತ ಕಾದಿದ್ದವ್ರಿಗೆ ಇದೊಂದು ಗುಡ್ ನ್ಯೂಸ್ ಆಗಿದ್ದು ಸದ್ಯ ಉಪ್ಪಿ ಯಾವ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿರ್ತಾರೆ ಅನ್ನೋದೇ ಕುತೂಹಲ.

ಬಹುಭಾಷಾ ಪ್ರಾಜೆಕ್ಟ್ ಆಗಿರುವ ಈ ಸಿನಿಮಾ ಟೈಟಲ್ ಸಂಚಲನ ಮೂಡಿಸಿದೆ. ಕೆ ಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ಸಹಯೋಗದೊಂದಿಗೆ ಜಿ ಮನೋಹರನ್ ಅವರ ಲಹರಿ ಫಿಲ್ಮ್ಸ್ ಬ್ಯಾಂಕ್ರೋಲ್ ಮಾಡಿದೆ.

ಉಪ್ಪಿ ನಿರ್ದೇಶನ ಮಾಡ್ತಿರೋ ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣ ಆಗಲಿದೆ. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಟಾಲಿವುಡ್, ಕಾಲಿವುಡ್ ನಲ್ಲಿಯೂ ಹೆಚ್ಚೆಚ್ಚು ಅಭಿಮಾನಿಗಳನ್ನ ಹೊಂದಿದ್ದಾರೆ ಉಪ್ಪಿ…ಇನ್ನು ಸಿನಿಮಾವನ್ನ . ಕೆ ಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ಸಹಯೋಗದೊಂದಿಗೆ ಜಿ ಮನೋಹರನ್ ಅವರ ಲಹರಿ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವ್ರ ಪಾಲಿನ ಲಕ್ಕಿ ದೇವಸ್ಥಾನವಾದ ಬಂಡಿ ಮಹಾಕಾಳಿ ದೇವಾಲಯದಲ್ಲಿಯೇ ಈ ಚಿತ್ರದ ಮಹೂರ್ತವೂ ನಡೆಯಲಿದೆ.

 

Share this post:

Translate »