Sandalwood Leading OnlineMedia

ಉಪೇಂದ್ರ ನಿರ್ದೇಶನದ `ಎ’ ಚಿತ್ರದ ಕುತೂಹಲಕಾರಿ ಸಂಗತಿಗಳು ಯಾವುವು ಗೊತ್ತಾ?

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ಹೀರೊ ಆಗಿ ನಟಿಸಿದ ಚೊಚ್ಚಲ ಸಿನಿಮಾ೨೫ ವರ್ಷ ಪೂರೈಸಿದೆ. ಸಿದ್ಧ ಸೂತ್ರಗಳನ್ನು ಬದಿಗಿಟ್ಟು ಒಂದರ್ಥದಲ್ಲಿ ತಮ್ಮದೇ ನಿಜಜೀವನದ ಕಥೆಯನ್ನು ತೆರೆಗೆ ತಂದು ಉಪೇಂದ್ರ ಸಕ್ಸಸ್ ಕಂಡಿದ್ದರು. “ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರಎಂದು ಹೇಳಿ ಪ್ರೇಕ್ಷಕರನ್ನು ಕೆಣಕಿ ರಿಯಲ್ ಸ್ಟಾರ್ ಜಾದೂ ಮಾಡಿದ್ದರು. ಅವತ್ತಿನ ಕಾಲಕ್ಕೆಸಿನಿಮಾ ತೆಲುಗಿಗೂ ಡಬ್ ಆಗಿ ಸೂಪರ್ ಹಿಟ್ ಆಗಿತ್ತು. ‘ತರ್ಲೆ ನನ್ಮಗಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಉಪೇಂದ್ರ ಮುಂದೆಶ್‘, ‘ಓಂರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟು ಸಕ್ಸಸ್ ಕಂಡಿದ್ದರು. ‘ಆಪರೇಷನ್ ಅಂತ‘, ‘ಸ್ವಸ್ತಿಕ್ರೀತಿಯ ವಿಭಿನ್ನ ಕಾನ್ಸೆಪ್ಟ್ ಸಿನಿಮಾಗಳಿಂದ ಗಮನ ಸೆಳೆದಿದ್ದರು. ನಿರ್ದೇಶಕನಾಗಿ ಒಳ್ಳೆ ಸ್ಟಾರ್‌ಡಮ್ ಸಂಪಾದಿಸಿದ್ದ ಉಪೇಂದ್ರ ಹೀರೊ ಆಗಲುಸಿನಿಮಾ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಬಹುತೇಕ ಹೊಸಬರೇ ಚಿತ್ರಕ್ಕಾಗಿ ಕೆಲಸ ಮಾಡಿದ್ದರು. ಉಪೇಂದ್ರ ತಮ್ಮ ವಿಭಿನ್ನ ಕಥೆ ಹಾಗೂ ಸ್ಕ್ರೀನ್‌ಪ್ಲೇ ಇಂದ ಸಕ್ಸಸ್ ಕಂಡಿದ್ದರು. ನಿರ್ದೇಶಕರಾಗಿದ್ದ ಉಪೇಂದ್ರ ಹೀರೊ ಆಗಬೇಕು ಎಂದುಕೊAಡಾಗ ಚಿತ್ರದಲ್ಲೂ ಒಬ್ಬ ಸಿನಿಮಾ ನಿರ್ದೇಶಕನ ಕಥೆ ಹೇಳಿದ್ದರು. ಸಿನಿಮಾದೊಳಗೊಂದು ಸಿನಿಮಾ ಕಥೆ ಹೇಳಿದ್ದರು. ಜೀವನದಲ್ಲಿ ಏಳುಬೀಳು ಕಂಡ ಸೂರ್ಯ ಪ್ರೀತಿ ಎನ್ನುವುದು ಸುಳ್ಳು ಎಂದರೆ, ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಹುಡುಗಿ ಪ್ರೀತಿಯ ಬಗ್ಗೆ ಸೂರ್ಯನಿಗೆ ಪಾಠ ಮಾಡಲು ಬರ್ತಾಳೆ. ಇವರಿಬ್ಬರ ಸಂಘರ್ಷದ ಕಥೆಗೆ ಉಪ್ಪಿ ಇಟ್ಟ ಹೆಸರ‘.

 

 

ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ

 `ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ ಎಂದರೂ ತಪ್ಪಾಗಲ್ಲ. ಶಿವಣ್ಣ ಅಥವಾ ಬೇರೆ ಯಾರಿಗಾದರೂ ಮಾಡಬೇಕು ಎಂದು ಉಪೇಂದ್ರ ಕಥೆ ಮಾಡಿಕೊಂಡಿದ್ದರು. ಆದರೆ ಚಿತ್ರದ ನಿರ್ಮಾಪಕರು ನೀವೇ ಹೀರೊ ಆಗಿ ಎಂದಾಗ ಉಪೇಂದ್ರ ಧೈರ್ಯ ಮಾಡಿದ್ದರು. ಹೀರೊ ಇಮೇಜ್ ಬಿಟ್ಟು ಸ್ಕ್ರೀನ್‌ಪ್ಲೇ ಮೂಲಕ ಗೆಲ್ಲುವ ಪ್ರಯತ್ನ ಮಾಡಿದ್ದರು. ‘ಐಯಾಮ್ ಗಾಡ್ ಗಾಡ್ ಈಸ್ ಗ್ರೇಟ್ಎನ್ನುತ್ತಾ ನಾಯಕ ಸೂರ್ಯ ಆರಂಭದಲ್ಲೇ ಗನ್ ಹಿಡ್ದು ಎಲ್ಲರನ್ನು ಹೆದರಿಸುವುದು, ದೇವಸ್ಥಾನದಲ್ಲಿ ದೇವರಿಗೆ ಎದುರು ಗನ್ ಹಿಡ್ದು ವಾದಕ್ಕೆ ಇಳಿಯುವುದು, ಗಣೇಶನನ್ನು ಬಾವಿಗೆ ಎತ್ತಿ ಹಾಕುವುದು, ಸಿನಿಮಾ ಆರಂಭದಲ್ಲೇ ಇಟಿಜ ಕಾರ್ಡ್ ಹಾಕಿದ್ದು, ಹೀಗೆ ಎಲ್ಲವೂ ವಿಭಿನ್ನ ಎನ್ನಿಸಿತ್ತು. ಸಿನಿಮಾ ಪೋಸ್ಟರ್‌ಗಳನ್ನು ಕೂಡ ವಿಭಿನ್ನವಾಗಿ ಡಿಸೈನ್ ಮಾಡಲಾಗಿತ್ತು.

 

 

 ಪುತ್ತೂರು ಕಂಬಳದ ಘಟನೆ ಬಗ್ಗೆ ಸಾನ್ಯಾ ಅಯ್ಯರ್ ಪ್ರತಿಕ್ರಿಯೆ  

ವಿಭಿನ್ನ ಜಾನರ್ ಸಿನಿಮಾ

 ರಿವರ್ಸ್ ಸ್ಕ್ರೀನ್‌ಪ್ಲೇ ಕಾನ್ಸೆಪ್ಟ್ನಲ್ಲಿ ಉಪೇಂದ್ರಸಿನಿಮಾ ಕತೆ ಹೇಳಿದ್ದರು. ಹಲವು ಫ್ಲಾಶ್‌ಬ್ಯಾಕ್‌ಗಳಲ್ಲಿ ಸಿನಿಮಾ ಕಥೆಯನ್ನು ನಿರೂಪಿಸಿದ್ದರು. ಕನ್ನಡದ ಮಟ್ಟಿಗೆ ರೊಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ಎನ್ನುವ ವಿಭಿನ್ನ ಜಾನರ್ ಸಿನಿಮಾ ಅದಾಗಿತ್ತು. ಇನ್ನು ಬಣ್ಣದಲೋಕದ ಕಾಸ್ಟಿಂಗ್ ಕೌಚ್ ಕರಾಳ ಮುಖದ ಬಗ್ಗೆಯೂ ಚಿತ್ರದಲ್ಲಿ ಚರ್ಚಿಸಲಾಗಿತ್ತು. ಬಹಳ ರಿಯಲಿಸ್ಟಿಕ್ ಆಗಿ ಚಿತ್ರವನ್ನು ಉಪೇಂದ್ರ ಹೇಳುವ ಪ್ರಯತ್ನ ಮಾಡಿದ್ದರು. ರಿವರ್ಸ್ ಸ್ಕ್ರೀನ್‌ಪ್ಲೇ ಕಾರಣಕ್ಕೆ ಕಥೆ ಅರ್ಥವಾಗದೇ ಕೆಲವರು ಪದೇ ಪದೇ ಸಿನಿಮಾ ನೋಡಿದ್ದರು. 2007ರಲ್ಲಿ ಸಿನಿಮಾ ತಮಿಳಿಗೂ ರೀಮೆಕ್ ಆಗಿತ್ತು.

 

 

 ಸಿದ್​ ಶ್ರೀರಾಮ್​ ಹಾಡಿರುವ ‘ಮಂಚ’ ಚಿತ್ರದ ‘ದೇಗುಲದಿ …’ ಲಿರಿಕಲ್​ ಹಾಡು ಬಿಡುಗಡೆ

ಊಹೆಗೂ ಮೀರಿದ ಟೈಟಲ್‌

ಸೆನ್ಸಾರ್ ಮಂಡಳಿ ವಯಸ್ಕರು ಮಾತ್ರ ನೋಡಬಹುದಾದ ಸಿನಿಮಾಗಳಿಗೆ ಸರ್ಟಿಫಿಕೇಟ್ ಕೊಡುತ್ತದೆ. ಆದರೆ ಉಪೇಂದ್ರ ತಮ್ಮ ಚಿತ್ರಕ್ಕೆಎನ್ನುವ ಟೈಟಲ್ ಫಿಕ್ಸ್ ಮಾಡಿದ್ದರು. ಜೊತೆಗೆಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರಎಂದು ಟ್ಯಾಗ್ ಲೈನ್ ಕೊಟ್ಟಿದ್ದರು. ಪ್ರೇಕ್ಷಕರು ಬೈಯ್ಕೊಂಡ್ರು ಪರವಾಗಿಲ್ಲ, ನಮ್ಮ ಸಿನಿಮಾ ನೋಡಬೇಕು ಎನ್ನುವುದು ಉಪೇಂದ್ರ ಲೆಕ್ಕಾಚಾರ ಆಗಿತ್ತು. ಅದಾಗಲೇಶ್‘, ‘ಓಂಎನ್ನುವ ಒಂದಕ್ಷರದ ಟೈಟಲ್‌ಗಳನ್ನು ಇಟ್ಟು ಸಿನಿಮಾ ಮಾಡಿ ಗೆದ್ದಿದ್ದ ಉಪ್ಪಿ, ‘ಎನ್ನುವ ಟೈಟಲ್ ಕೂಡ ಇಟ್ಟು ಗಮನ ಸೆಳೆದಿದ್ದರು. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದರು.

 ನ್ಯಾಚುರಲ್ ಸ್ಟಾರ್ ನಾನಿ ಮೂವತ್ತನೇ ಚಿತ್ರಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಸಾಥ್

ಭರ್ಜರಿ ಕಲೆಕ್ಷನ್

ಬಿ. ಜಗನ್ನಾಥ, ಬಿ. ಜಿ ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಚಾಂದಿನಿ ನಾಯಕಿಯಾಗಿ ಉಪೇಂದ್ರಗೆ ಸಾಥ್ ಕೊಟ್ಟಿದ್ದರು. ೨೫ ವರ್ಷಗಳ ಹಿಂದೆ .೨೫ ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದಚಿತ್ರ ಬರೋಬ್ಬರಿ ೨೦ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ತೆಲುಗಿಗೂ ಡಬ್ ಆಗಿ ೧೦೦ ದಿನ ಪ್ರದರ್ಶನ ಕಂಡು ಸಿನಿಮಾ ಎಲ್ಲರ ಹುಬ್ಬೇರಿಸಿತ್ತು. ಕರ್ನಾಟಕದಲ್ಲಿ ೨೫ ವಾರಗಳ ಕಾಲಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ನಿರ್ದೇಶಕರಾಗಿ ಮಾತ್ರವಲ್ಲದೇ ಹೀರೊ ಆಗಿಯೂ ಉಪೇಂದ್ರ ಸಕ್ಸಸ್ ಕಂಡಿದ್ದರು.

 

 

ಸಿದ್​ ಶ್ರೀರಾಮ್​ ಹಾಡಿರುವ ‘ಮಂಚ’ ಚಿತ್ರದ ‘ದೇಗುಲದಿ …’ ಲಿರಿಕಲ್​ ಹಾಡು ಬಿಡುಗಡೆ

 

ಹಾಡಿನಲ್ಲೇ ಕೋಟಿ ಬಾಚಿತ್ತು!

ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಉಪೇಂದ್ರ ಅವಕಾಶ ಕೊಟ್ಟಿದ್ದರು. ಇದೇ ಸಿನಿಮಾ ಮೂಲಕ ಗುರುಕಿರಣ್ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದರು. ಅಂದಾಜು ಎರಡ್ಮೂರು ಲಕ್ಷ ವೆಚ್ಚದಲ್ಲಿ ಸಿನಿಮಾ ಸಾಂಗ್ಸ್ ಸಿದ್ಧವಾಗಿತ್ತು. ಆದರೆ ಆಡಿಯೋ ಕ್ಯಾಸೆಟ್ ಬರೋಬ್ಬರಿ 2 ಕೋಟಿ ಹಣ ತಂದು ಕೊಟ್ಟಿತ್ತು. ‘ಮಾರಿ ಕಣ್ಣು ಹೋರಿಮ್ಯಾಗೆ‘, ‘ಸುಮ್ ಸುಮ್ನೆ‘, ‘ಹೇಳ್ಕೊಳ್ಳೊಕ್ ಒಂದೂರುಹೀಗೆ ಎಲ್ಲಾ ಸಾಂಗ್ಸ್ ಸಿನಿರಸಿಕರ ಬಾಯಲ್ಲಿ ನಲಿದಾಡಿತ್ತು.

 

 

 

Share this post:

Related Posts

To Subscribe to our News Letter.

Translate »