Sandalwood Leading OnlineMedia

ಕೊನೆಯ ಹಂತದದತ್ತ ‘ಅನ್‌ ಲಾಕ್‌ ರಾಘವ’

ವಿಭಿನ್ನವಾದ ಟೈಟಲ್‌ನಿಂದ ಗಮನ ಸೆಳೆದಿರುವ  ‘ಅನ್‌ ಲಾಕ್‌ ರಾಘವ ಸಿನಿಮಾ ಈಗಾಗಲೇ 50ಕ್ಕೂ ಹೆಚ್ಚಿನ ದಿನಗಳ ಕಾಲ ಚಿತ್ರೀಕರಣ ಕಂಪ್ಲೀಟ್‌ ಮಾಡಿದೆ. ಕೋಟೆ ನಾಡು ಚಿತ್ರದುರ್ಗದ ವಿಭಿನ್ನ ಪ್ರದೇಶಗಳಲ್ಲಿಹಾಗೂ ಬೆಂಗಳೂರಿನ ವಿವಿಧೆಡೆ ಇಷ್ಟು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಕ್ಲೈಮ್ಯಾಕ್ಸ್‌ ಮತ್ತು ಹಾಡಿನ ಭಾಗದ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಅದನ್ನು ಸದ್ಯದಲ್ಲೇ ಚಿತ್ರತಂಡ ಆರಂಭಿಸಲಿದೆ.  

 

 

 ನಾಳೆ ಬಹುನಿರೀಕ್ಷಿತ, ನಿರ್ದೇಶಕ ನಾಗ್ ಶೇಖರ್ ಸಾರಥ್ಯದ “ಗುರುತುಂದ ಸೀತಾಕಾಲಂ” ಚಿತ್ರಬಿಡುಗಡೆ   

 

‘ಅನ್‌ ಲಾಕ್‌ ರಾಘವ ಚಿತ್ರದ ನಾಯಕನಾಗಿ ‘ವೀಕೆಂಡ್‌ ಚಿತ್ರದಲ್ಲಿನಟಿಸಿದ್ದ ಮಿಲಿಂದ್‌, ನಾಯಕಿಯಾಗಿ ‘ಲವ್‌ ಮಾಕ್ಟೇಲ್‌ 2’ ಖ್ಯಾತಿಯ ರೇಚಲ್‌ ಡೇವಿಡ್‌ ನಟಿಸುತ್ತಿದ್ದಾರೆ. ಸಾಧುಕೋಕಿಲ, ಅವಿನಾಶ್‌, ರಮೇಶ್‌ ಭಟ್‌, ವೀಣಾ ಸುಂದರ್‌, ಸುಂದರ್‌, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಮೂಗು ಸುರೇಶ್‌, ಭೂಮಿ ಶೆಟ್ಟಿ ಅವರು ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

 

 

 ನವರಸ ನಾಯಕ ಜಗ್ಗೇಶ್ ಅವರಿಂದ ಬಿಡುಗಡೆಯಾಯಿತು “ಪದವಿಪೂರ್ವ” ಚಿತ್ರದ ಟೀಸರ್

 

ಹಾಸ್ಯಪ್ರಧಾನವಾದ ನವಿರಾದ ಪ್ರೇಮಕತೆಯುಳ್ಳ ‘ಅನ್‌ ಲಾಕ್‌ ರಾಘವ ಚಿತ್ರವನ್ನು ದೀಪಕ್‌ ಮಧುವನಹಳ್ಳಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಿ ಸತ್ಯಪ್ರಕಾಶ್‌ ರಾಘವನ ಕಥೆ-ಚಿತ್ರಕಥೆ-ಸಂಭಾಷಣೆಯನ್ನು ಬರೆದಿದ್ದಾರೆ.  ಸತ್ಯ – ಮಯೂರ ಪಿಕ್ಚರ್ಸ್‌ ಬ್ಯಾನರ್‌ನಡಿ ಮಂಜುನಾಥ್‌ ಡಿ ಮತ್ತು ಸತ್ಯಪ್ರಕಾಶ್‌ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಲವಿತ್‌ ಛಾಯಾಗ್ರಹಕರಾಗಿದ್ದು, ರಾಗನಿಧಿ ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದಾರೆ. ಬಾಕಿ ಉಳಿದಿರುವ ಚಿತ್ರೀಕರಣವನ್ನು ಮುಗಿಸಿಕೊಂಡು 2023ರಲ್ಲಿಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

 

 

 

 

 

 

Share this post:

Translate »