Sandalwood Leading OnlineMedia

‘ಯುಐ’ ಚಿತ್ರಕ್ಕೆ  ಡಬಲ್ ಕ್ಲೈಮ್ಯಾಕ್ಸ್! ಏನಂದ್ರು ಬುದ್ದಿವಂತ?

 

ಉಪೇಂದ್ರ ಅವರ ನಟನೆಯ ‘ಯುಐ’ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಯಿತು. ಈ ಟ್ರೇಲರ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಉಪೇಂದ್ರ ಅವರ ಸಿನಿಮಾದಲ್ಲಿ ಏನೆಲ್ಲ ಇರಬಹುದು ಎಂದು ಊಹಿಸಿಕೊಂಡು ತಲೆಕೆರೆದುಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಚಿತ್ರದ ಬಗ್ಗೆ ವದಂತಿ ಹಬ್ಬಿಸಿದ್ದರು.

                          ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ ತೆರೆಗೆ ಬರಲು ರೆಡಿ ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ

ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಈ ವಾರವರೇ ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಭಿನ್ನವಾಗಿ ಬರಲಿದೆ ಎಂಬ ಸ್ಪಷ್ಟ ಚಿತ್ರಣ ಅಭಿಮಾನಿಗಳಿಗೆ ಸಿಕ್ಕಿದೆ. ಹೀಗಿರುವಾಗಲೇ ‘ಯುಐ’ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಸಾಕಷ್ಟು ವದಂತಿ ಹಬ್ಬಿತ್ತು. ಇದಕ್ಕೆ ಉಪೇಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ.  ಉಪೇಂದ್ರ ಅವರ ನಟನೆಯ ‘ಯುಐ’ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಯಿತು. ಈ ಟ್ರೇಲರ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಉಪೇಂದ್ರ ಅವರ ಸಿನಿಮಾದಲ್ಲಿ ಏನೆಲ್ಲ ಇರಬಹುದು ಎಂದು ಊಹಿಸಿಕೊಂಡು ತಲೆಕೆರೆದುಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಚಿತ್ರದ ಬಗ್ಗೆ ವದಂತಿ ಹಬ್ಬಿಸಿದ್ದರು.

‘ಯಐ ಚಿತ್ರಕ್ಕೆ ಎರಡು ಕ್ಲೈಮ್ಯಾಕ್ಸ್ ಇರಲಿದ್ದು, ಒಂದೊಂದು ಥಿಯೇಟರ್​ನಲ್ಲಿ ಒಂದೊಂದು ಕ್ಲೈಮ್ಯಾಕ್ಸ್ ಬಿತ್ತರ ಆಗಲಿದೆ. ಪ್ರೇಕ್ಷಕರಿಗೆ ಬೇರೆ ಬೇರೆಯದೇ ಆದ ಕ್ಲೈಮ್ಯಾಕ್ಸ್ ನೋಡ ಸಿಗಲಿದೆ’ ಎನ್ನುವ ವದಂತಿ ಇತ್ತು. ಇದು ಅಸಾಧ್ಯ ಎಂಬ ಮಾತನ್ನು ಉಪೇಂದ್ರ ಹೇಳಿದ್ದಾರೆ. ‘ಎರಡು ಕ್ಲೈಮ್ಯಾಕ್ಸ್ ಎಂಬ ವಿಚಾರದಲ್ಲಿ ಯಾವುದೇ ಸತ್ಯ ಇಲ್ಲ. ಸಿನಿಮಾಗೆ ಒಂದೇ ಕ್ಲೈಮ್ಯಾಕ್ಸ್ ಇದೆ. ಕಂಟೆಂಟ್ ಉತ್ತಮವಾಗಿದೆ. ಹೀಗಾಗಿ, ನೀವು ಸಿನಿಮಾನ ಎರಡು ಬಾರಿ ನೋಡಬೇಕು ಎಂದನಿಸುತ್ತದೆ’ ಎಂದು ಉಪೇಂದ್ರ ಹೇಳಿದ್ದಾರೆ. ಉಪ್ಪಿ ಯಾವಾಗಲೂ ಭಿನ್ನ ಸಿನಿಮಾಗಳನ್ನು ಮಾಡುತ್ತಾರೆ. ಈ ಕಾರಣಕ್ಕೆ ಇದು ನಿಜ ಇದ್ದರೂ ಇರಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಓಪನಿಂಗ್ ದೃಶ್ಯ ಹೇಗಿರುತ್ತದೆ ಎಂಬ ಬಗ್ಗೆಯೂ ಅವರು ಹಿಂಟ್ ಕೊಟ್ಟಿದ್ದಾರೆ. ‘ಓಪನಿಂಗ್ ದೃಶ್ಯವೇ ಪ್ರೇಕ್ಷಕರಿಗೆ ಶಾಕಿಂಗ್ ಆಗಿರಲಿದೆ’ ಎಂದು ಉಪೇಂದ್ರ ಭವಿಷ್ಯ ನುಡಿದಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಓಪನಿಂಗ್ ಯಾವ ರೀತಿಯಲ್ಲಿ ಇರಬಹುದು ಎಂಬ ಕುತೂಹಲ ಜೋರಾಗಿದೆ. ಯುಐ’ ಸಿನಿಮಾ ಪ್ರಚಾರಕ್ಕಾಗಿ ಉಪೇಂದ್ರ ಅವರು ನಾನಾ ಕಡೆಗಳಿಗೆ ತೆರಳುತ್ತಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಪರಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲಿನವರಿಗೂ ಸಿನಿಮಾ ಬಗ್ಗೆ ನಿರೀಕ್ಷೆ ಇದೆ.

 

Share this post:

Related Posts

To Subscribe to our News Letter.

Translate »