ಭಾಗ್ಯಾ ಕೆಲಸ ಕೇಳಿಕೊಂಡು ಹೋದಲ್ಲಿ ಅವಮಾನ ಆಗುತ್ತದೆ. ಅದೇ ಹೊಟೇಲ್ ಯಜಮಾನ ನೀನು ಕೆಲಸಕ್ಕೆ ಬಾ ಎಂದಿರುತ್ತಾನೆ. ಆದರೆ ಅವರ ಮಗಳು ಮಾತ್ರ ಭಾಗ್ಯಾಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಒಪ್ಪಿಕೊಳ್ಳೋದಿಲ್ಲಾ. ಹೀಗಿರುವಾವ ಭಾಗ್ಯಾ ತುಂಬಾ ಕೇಳಿಕೊಳ್ಳುತ್ತಾಳೆ. ನನಗೆ ಕಷ್ಟ ಇದೆ ದಯವಿಟ್ಟು ಕೆಲಸ ಕೊಡಿ ಎಂದು ಆದರೂ ಅವಳು ಒಪ್ಪೋದಿಲ್ಲಾ.
ಅವಳು ಹೇಳಿದ ಮಾತನ್ನು ಕೇಳಿ ಭಾಗ್ಯಾಳಿಗೆ ಅವಮಾನ ಆಗಿರುತ್ತದೆ. ಆದರೂ ಅವಳು ಮತ್ತೆ ಬೇಡಿಕೊಳ್ಳುತ್ತಾಳೆ. ಅಲ್ಲಿ ಇದ್ದ ಇನ್ನಷ್ಟು ಕೆಲಸದವರಿಗೆ ಭಾಗ್ಯಾಳ ಪರಿಸ್ಥಿತಿಯನ್ನು ನೋಡಿ ಕನಿಕರ ಹುಟ್ಟುತ್ತದೆ ಆದರೆ ಇವಳಿಗೆ ಮಾತ್ರ ಹುಟ್ಟುವುದೇ ಇಲ್ಲಾ. ನೀನು ಇಲ್ಲಿ ಕೆಲಸ ಮಾಡುವುದು ಬೇಡ ಎಂಬುದನ್ನು ಮಾತ್ರ ಅವಳು ಹೇಳುತ್ತಾ ಇದ್ದಾಳೆ.
ಇಲ್ಲಾ ನಾನು ನಿನ್ನೆ ಬಂದು ಮಾತನಾಡಿಕೊಂಡು ಹೋಗಿದ್ದೇನೆ ಯಜಮಾನರು ಒಪ್ಪಿಕೊಂಡಿದ್ದಾರೆ. ನಾನು ಕೆಲಸ ಮಾಡುತ್ತೀನಿ ಎಂದು ಭಾಗ್ಯಾ ಹೇಳುತ್ತಲೇ ಇರುತ್ತಾಳೆ ಹೊರತಾಗಿ ಅಲ್ಲಿಂದ ಜಾಗ ಖಾಲಿ ಮಾಡಿರುವುದಿಲ್ಲ. ಹೀಗಿದ್ದಾಗ ಅವಳು ಮುಂದೇನು ಮಾಡಿದ್ದಾಳೆ ಅನ್ನೋದನ್ನು ನೋಡಿದ್ರೆ ನಿಮಗೂ ಬೇಸರವಾಗುತ್ತದೆ.
ಭಾಗ್ಯಾಳನ್ನು ಸಿರಿವಂತರ ಮನೆಗೆ ಮದುವೆ ಮಾಡಿ ಕೊಟ್ಟರೂ ಸಹ ಅವಳ ಪರಿಸ್ಥಿತಿ ಈಗ ಹೀಗಾಗಿದೆ ಎನ್ನುವುದನ್ನು ನೆನೆಸಿಕೊಂಡರೆ ಅವಳ ತಾಯಿಗೆ ತುಂಬಾ ದುಃಖವಾಗುತ್ತದೆ. ಆದರೆ ಇದ್ಯಾವ ಘಟನೆಯನ್ನೂ ಅವಳು ಮಾತ್ರ ನೋಡಿಲ್ಲಾ. ಆದರೂ ಇಷ್ಟೊಂದು ಆತಂಕ ಅವಳಿಗೆ ಆಗುತ್ತಿದೆ. ಇನ್ನೇನಾದರು ಇದನ್ನು ನೋಡಿದ್ದರೆ ಇನ್ನೆಷ್ಟು ನೋವು ಮಾಡಿಕೊಳ್ಳುತ್ತಿದ್ದರೋ ಏನೋ,
ನಂತರ ಭಾಗ್ಯಾ ಎಷ್ಟು ಹೇಳಿದರೂ ಹೊಟೇಲ್ನಿಂದ ಹೊರಗಡೆ ಬರದೇ ಇರುವುದಕ್ಕೆ ಇವಳೇ ಅವಳನ್ನು ತನ್ನ ಕೈಯ್ಯಾರ ಎಳೆದುಕೊಂಡು ಬಂದು ಬಾಗಿಲಿನಿಂದ ಹೊರಗಡೆ ನೂಕುತ್ತಾಳೆ. ಭಾಗ್ಯಾ ಬಿದ್ದು ಹೋಗುತ್ತಾಳೆ. ಆಗ ಅದನ್ನು ನೋಡಿ ಉಳಿದ ಕೆಲಸಗಾರರೂ ಸಹ ಇವರಿಗೆ ಒಂದೇ ಒಂದು ಅವಕಾಶ ಮಾಡಿಕೊಡಿ ಎಂದು ಹೇಳುತ್ತಾರೆ. ಆದರೆ ಅವಳು ಒಪ್ಪೋದಿಲ್ಲ.
ನನ್ನ ತಂದೆಗೆ ಅರಳು ಮರಳು ಅವರು ಹೇಳಿದ್ದನ್ನು ನಂಬಿಕೊಂಡು ನೀನು ಇಲ್ಲಿಗೆ ಕೆಲಸಕ್ಕೆ ಬರೋದು ಬೇಡ ಎಂದು ನೇರವಾಗಿ ಹೇಳುತ್ತಾಳೆ. ಇನ್ನು ತಾಂಡವ್ ಇತ್ತ ತುಂಬಾ ಸಂತೋಷದಲ್ಲಿದ್ಧಾನೆ. ಅವನಿಗೆ ಎಷ್ಟು ಖುಷಿಆಗಿದೆ ಎಂದರೆ ಅದನ್ನು ತೋರಿಸಿಕೊಳ್ಳಲು ಸಾಧ್ಯವಾಗದಷ್ಟು ಸಂತೋಷ ಆಗಿದೆ.
ಅವನು ಶ್ರೇಷ್ಠಾ ಜೊತೆ ಪಾರ್ಕ್ಗೆ ಬಂದಿದ್ದಾನೆ. ಅವಳು ತುಂಬಾ ಚನಾಗಿ ರೆಡಿ ಆಗಿದ್ದಾಳೆ. ಅವಳಿಗೆ ಸರ್ಪ್ರೈಸ್ ನೀಡುವ ಸಲುವಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅವಳನ್ನು ಕರೆದು ತಂದಿದ್ದಾನೆ. ನಿನಗೆ ಇದೆಲ್ಲಾ ಮಾಡಕ್ ಬರುತ್ತಾ? ಅಂತ ಅವಳು ಕೇಳಿದ್ದಾಳೆ. ಹೌದು ನಾನು ಸಂತೋಷದಲ್ಲಿದ್ದರೆ ಏನು ಬೇಕಾದರೂ ಮಾಡ್ತೀನಿ ಎಂದು ತಾಂಡವ್ ಹೇಳಿದ್ದಾನೆ. ನಂತರ ಅವನು ಒಂದು ಬಾಕ್ಸ್ನಿಂದ ಬೆಳ್ಳಿ ಕಡಗ ತೆಗೆದು ಅವಳ ಮುಂದೆ ಹಿಡಿದಿದ್ದಾನೆ. ಈಗ ನಿನ್ನ ಕಣ್ಣು ಓಪನ್ ಮಾಡು ಎಂದಿದ್ದಾನೆ.
ಭಾಗ್ಯಲಕ್ಷ್ಮೀ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದೆ. ಈ ಧಾರಾವಾಹಿಯಲ್ಲಿ ತಾಂಡವ್ ಹೆಂಡತಿಯನ್ನು ಬಿಟ್ಟು ಬೇರೆ ಒಬ್ಬಳನ್ನು ಮದುವೆ ಆಗಲು ಪ್ರಯತ್ನ ಮಾಡುತ್ತಾ ಇದ್ದಾನೆ. ಆದರೆ ಅವನಿಗೆ ಈಗಾಗಲೇ ಎರಡು ಮಕ್ಕಳಿದ್ದಾರೆ. ಆದರೂ ಶ್ರೇಷ್ಠಾ ಅವನನ್ನೇ ಮದುವೆ ಆಗಬೇಕು ಎಂದು ಹಠಕ್ಕೆ ಬಿದ್ದಿದ್ದಾಳೆ.