Sandalwood Leading OnlineMedia

“ಯೂಟರ್ನ್ -2 ‘: ಪಿಜ್ಜಾ ಹುಡುಗನ ಹಾರರ್ ಟ್ರೈಲರ್ !

U Turn 2 | Official Trailer

ಹಾರರ್, ಕಾಮಿಡಿ ಡ್ರಾಮಾ  ಕಥಾಹಂದರ  ಹೊಂದಿರುವ  “ಯೂ ಟರ್ನ್ -2 “ಚಿತ್ರದ ಟ್ರೈಲರ್ ನ್ನು  ಇತ್ತೀಚಿಗೆ ಶಾಸಕ ಸತೀಶ್ ರೆಡ್ಡಿ ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಲಕ್ಷ್ಮಿ ನಾರಾಯಣ,  ಶ್ರೀನಿವಾಸ ರೆಡ್ಡಿ, ನಟ ಮಯೂರ್ ಸೇರಿದಂತೆ ಅನೇಕರು  ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಚಿತ್ರಕ್ಕೆ ಶುಭ ಕೋರಿದರು. ನಿರ್ಮಾಪಕ ಆನಂದ್, ಚಂದ್ರು ಇಬ್ಬರೂ ನನ್ನ ಸ್ನೇಹಿತರು. ಈ ಸಿನಿಮಾ ಯಶಸ್ವಿಯಾಗಲಿ, ಕೋವಿಡ್ ಟೈಂ ನಲ್ಲಿ ಅನೇಕ ನಿರ್ಮಾಪಕರು ಸಂಕಷ್ಟ ಅನುಭವಿಸಿದರು. ಈಗ ಒಳ್ಳೆಯ ಕಾಲ ಬಂದಿದೆ ಎಂದು ಹೇಳಿದರು.

 

 `Vijayanand’ Movie Review : A story worth telling, a movie worth watching

 

     ಚಿತ್ರರಂಗದಲ್ಲಿ  ಹಲವಾರು ವರ್ಷಗಳಿಂದ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಚಂದು ಓಬಯ್ಯ‌‌  ಮೊದಲಬಾರಿಗೆ  ಆಕ್ಷನ್ ಕಟ್ ಹೇಳುವುದರೊಂದಿಗೆ ನಾಯಕನಾಗಿಯೂ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ತಿಥಿ ಪೂಜಾ, ಸ್ನೇಹಾ ಭಟ್, ಮಂಜು ಪಾವಗಡ, ಚಿಲ್ಲರ್ ಮಂಜು , ಡಿಂಗ್ರಿ ನಾಗರಾಜ್ ಸೇರಿದಂತೆ  ಅನೇಕ ಹಿರಿ ಕಿರಿಯ ಕಲಾವಿದರು ನಟಿಸಿದ್ದಾರೆ. ಪಿಜ್ಜಾ ಡಿಲವರಿ ಹುಡುಗನೊಬ್ಬನ ಸುತ್ತ ನಡೆಯುವ ಹಾರರ್ ಕಥೆಯಿದು. ನಿರ್ಮಾಪಕ  ಆನಂದ್ ಸಂಪಂಗಿ ಈ ಚಿತ್ರದಲ್ಲಿ ಖಳನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರು ಮಾತನಾಡಿ ಚಿತ್ರದಲ್ಲಿ ನನ್ನ  ಪಾತ್ರಕ್ಕೆ ೨ ಶೇಡ್ಸ್ ಇದೆ. ಸಮಾಜಸೇವಕ ಹಾಗೂ ವಿಲನ್ ಆಗಿಯೂ ಕಾಣಿಸಿಕೊಂಡಿದ್ದೇನೆ. ಹೊಸ ತಂಡವನ್ನು  ಬೆಂಬಲಿಸಿ ಎಂದರು.

 

  ನಟ, ನಿರ್ದೇಶಕ ಚಂದು ಓಬಯ್ಯ ಮಾತನಾಡಿ ವಿಶೇಷವಾಗಿ ಏನಾದರೂ ಮಾಡೋಣವೆಂದು ಒಳ್ಳೆಯ ತಂಡ ಕಟ್ಟಿಕೊಂಡು ಈ  ಸಿನಿಮಾ  ಮಾಡಿದ್ದೇವೆ. ನಾನು ಒಮ್ಮೆ ಚೆನ್ನೈಗೆ ಹೋಗಿದ್ದಾಗ ಅಲ್ಲಿ ಆದಂಥ ಅನುಭವ ಇಟ್ಟುಕೊಂಡು ಈ ಸ್ಕ್ರಿಪ್ಟ್   ಮಾಡಿದಗದೇನೆ.  ಹೊನ್ನಾವರ ,ಬೆಂಗಳೂರು ಬಿಡದಿಯಲ್ಲಿ 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ .ಹಾರರ್ ಕಥೆಯ ಜೊತೆಗೊಂದು ಸಾಮಾಜಿಕ ಸಂದೇಶ ಈ ಚಿತ್ರದಲ್ಲಿದೆ. ಕಮರ್ಷಿಯಲ್ ಅಂಶಗಳೂ ಇವೆ. ಚಿತ್ರದ ಸೌಂಡ್ ವರ್ಕ್ ತುಂಬಾ ಚೆನ್ನಾಗಿದೆ. ನಾನು  ನಾಯಕನಾಗುತ್ತೇನೆ  ಅಂತ ಅಂದುಕೊಂಡಿದ್ದಿಲ್ಲ‌, ಹಳ್ಳಿಯಿಂದ ಹೊಟ್ಟೆ ಪಾಡಿಗೆಂದು  ಬಂದವರು ನಾಯಕನಾಗಿದ್ದೇನೆ.  ಎಂದರು.  ಲಕ್ಷ್ಮಿ ನಾರಾಯಣ, ಪಾಯಲ್ ಚೆಂಗಪ್ಪ ಚಿತ್ರಕ್ಕೆ ಶುಭ ಕೋರಿದರು.

 

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ “ಗೌರಿ” ಚಿತ್ರಕ್ಕೆ ಚಾಲನೆ

ಸ್ನೇಹಾ ಭಟ್  ಮಾತನಾಡಿ  ಈ ಸಿನಿಮಾದಿಂದ ನನ್ನ ಜರ್ನಿ ಆರಂಭವಾಯಿತು. ಈಗಾಗಲೇ ನಾಲ್ಕೈದು ಚಿತ್ರದಲ್ಲಿ ನಟಿಸಿದ್ದೇನೆ. ನನ್ನ ಪಾತ್ರದ ಹೆಸರು ಚೈತ್ರಾ  ಸಮಾಜ ಸೇವಕರ  ಕಾರ್ಯದರ್ಶಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರು.  ರಘು ರಮಣಕೊಪ್ಪ, ಮಂಜು ಪಾವಗಡ,  ಚಿಲ್ಲರ್ ಮಂಜು, ಡಿಂಗ್ರಿ ನಾಗರಾಜ್  ಚಿತ್ರದ ಕುರಿತಂತೆ ಹೇಳಿಕೊಂಡರು.

Share this post:

Related Posts

To Subscribe to our News Letter.

Translate »