ಎ.ಎಸ್.ಬಿ ಡೆವಲಪರ್ಸ್ ಅಂಡ್ ಪ್ರಮೋಟರ್ಸ್ ವತಿಯಿಂದ ತಾವರೆಕೆರೆ ಹೋಬಳಿ ಬಸವನಪಾಳ್ಯದಲ್ಲಿ ಕಿರುತೆರೆ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನು ನೀಡಲಾಗಿತ್ತು. ಈಗ ಆ ಸ್ಥಳದಲ್ಲಿ ನಿವೇಶನದಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆಯಾಯಿತು. ನಾಯಕ ಶ್ರೀನಗರ ಕಿಟ್ಟಿ, ಸಾಹಿತಿ ದೊಡ್ಡರಂಗೇಗೌಡ, ಹಿರಿಯ ನಟ ಲೋಹಿತಾಶ್ವ, ಎ.ಎಸ್.ಬಿ ಡೆವಲಪರ್ಸ್ ಸಂಸ್ಥೆಯ ಎಸ್ ಭಗೀರಥ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕಾರ್ಮಿಕರ ಒಕ್ಕೂಟದ ರವೀಂದ್ರ ನಾಥ್, ನಟಿ ಪದ್ಮ ವಾಸಂತಿ, ರವಿ ಆರ್ ಗರಣಿ, ಶರತ್ ಲೋಹಿತಾಶ್ವ, ಎಸ್ ವಿ ಶಿವಕುಮಾರ್, ರಾಮ್ ಜಿ ಕೆ.ಎಸ್, ನಾಗತಿಹಳ್ಳಿ ಜಯಪ್ರಕಾಶ್, ಸೇರಿದಂತೆ ಅನೇಕ ಗಣ್ಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.
ಇದೇ ಸಂದರ್ಭದಲ್ಲಿ ನಿವೇಶನದಾರರ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡಕ್ಕಾಗಿ ಎ.ಎಸ್.ಬಿ ಸಂಸ್ಥೆಯ ಮುಖ್ಯಸ್ಥರಾದ ಎಸ್ ಭಗೀರಥ ಅವರು 30×40 ನಿವೇಶನ ನೀಡುತ್ತಿದ್ದಾರೆ ಹಾಗೂ ಕಟ್ಟಡ ನಿರ್ಮಾಣದ ಸಮಯದಲ್ಲೂ ಸಹ ಸಹಾಯ ಮಾಡಲಿದ್ದಾರೆ. ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಟೆಲಿವಿಷನ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಸಂಜೀವ್ ತಗಡೂರು ತಿಳಿಸಿದ್ದಾರೆ.
ಟಿ.ವಿ.ನಗರ ನಿವೇಶನದಾರರ ಸಂಘದ ಗೌರವಾಧ್ಯಕ್ಷರಾಗಿ ಶರತ್ ಲೋಹಿತಾಶ್ವ, ಅಧ್ಯಕ್ಷರಾಗಿ ಎಸ್ ಟಿ ರಾಮಸ್ವಾಮಿ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಭಾಸ್ಕರ್, ಜಂಟಿ ಕಾರ್ಯದರ್ಶಿಗಳಾಗಿ ಪುಷ್ಪ ಅನಿಲ್ ಹಾಗೂ ನಾಗಭೂಷಣ್ ಮತ್ತು ಖಜಾಂಚಿಯಾಗಿ ಕೇಶವಚಂದ್ರ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ಶರತ್ ಲೋಹಿತಾಶ್ವ ಮಾತನಾಡುತ್ತಾ, ಇಂದು ಈ ಟಿವಿ ನಗರ ಆಗಲು ಮುಖ್ಯ ಕಾರಣಕರ್ತರಾದ ಸಂಜೀವ್ ತಗಡೂರ್, ಗುರುಪ್ರಸಾದ್, ರವೀಂದ್ರ, ಉಮಾಕಾಂತ್.. ಅವರ ಶ್ರಮವನ್ನು ನೆನಪಿಸಿಕೊಂಡರು.