ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಕಾರು ಅಪಘಾತ ಮಾಡಿದ್ದು ಅಲ್ಲದೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಾಧುರಿ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ದೂರು ಕೂಡ ದಾಖಲಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 6ನೇ ತಾರೀಖು ಈ ಘಟನೆ ನಡೆದಿದೆ. ತನ್ನ ಸಹೋದರಿ ಜೊತೆಗೆ ಗಾಡಿಯಲ್ಲಿ ಹೋಗುತ್ತಿದ್ದಾಗ ಡಿಕ್ಕಿ ಹೊಡೆದಿದ್ದಾರೆ. ಜೊತೆಗೆ ಹಲ್ಲೆಮಾಡಿ, ಮೊಬೈಲ್ ಕೂಡ ಕಿತ್ತುಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಐ20 ಕಾರಿನಲ್ಲಿ ಆಕ್ಸಿಡೆಂಟ್ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
‘ಅಂದು ನಾನು ನನ್ನ ಸಿಸ್ಟರ್ ಇಬ್ಬರು ಗಾಡಿಯಲ್ಲಿ ಹೋಗುತ್ತಾ ಇದ್ದೆವು. ಆಗ ಐ20 ಕಾರಲ್ಲಿ ಹೋಗುತ್ತಿದ್ದ ಅವರು ಡಿಕ್ಕಿ ಹೊಡೆದರು. ನಾನು ಅಕ್ಕ ಕೆಳಗಡೆ ಬಿದ್ದೆವು. ಯಾಕೆ ಮೇಡಂ ಈ ಥರ ಮಾಡಿದ್ದೀರಾ ಅಂತ ಕೇಳಿದೆವು. ಆಗ ವಲ್ಗರ್ ಭಾಷೆ ಬಳಸಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್ ಮಾಡಿ, ಎತ್ತು ಗಾಡಿ ಎತ್ತು ಅಂದ್ರು. ಅದನ್ನು ಪೊಲೀಸ್ ಠಾಣೆಗೆ ಹೋಗಿ ಹೇಳಿದರೆ ಅದಕ್ಕೆಲ್ಲಾ ಏನು ಮಾಡೋಕೆ ಆಗಲ್ಲ ಅಂದ್ರು. ಪೊಲೀಸರಿಗೆ ದೂರು ಕೊಟ್ಟರೂ ಅದನ್ನು ತೆಗೆದುಕೊಳ್ಳಲಿಲ್ಲ. ಏನೇ ಕೇಳಿದರು ನಿಮ್ಮ ಹತ್ತಿರ ಅದಕ್ಕೆ ಪ್ರೂಫ್ ಇಲ್ಲ ಅಂತಾರೆ. ಮೊಬೈಲ್ ವಿಚಾರಕ್ಕೂ ಅದೇ ಹೇಳಿದರು. ಸಿಗ್ನಲ್ ನಲ್ಲಿ ಸಿಸಿ ಕ್ಯಾಮೆರಾ ಇರುತ್ತೆ ಚೆಕ್ ಮಾಡಿ ಎಂದರೆ, ಅದು ವರ್ಕ್ ಆಗ್ತಿಲ್ಲ ಅಂತಾರೆ. ಪ್ರತಿ ಸಲ ಹೋದಾಗಲೂ ನಮಗೆ ಸಮಾಧಾನ ಮಾಡಿ ಕಳುಹಿಸುತ್ತಿದ್ದಾರೆ. ಸಿಸಿಟಿವಿ ಇದೆ ಸಿಗ್ನಲ್ ನಲ್ಲಿ. ಆದರೆ ಅದು ಆ್ಯಕ್ಟಿವ್ ಇಲ್ಲ ಅಂತಾರೆ. ಸಿಗ್ನಲ್ ಇದ್ದರು ಮೊಬೈಲ್ ಅನ್ನು ಫಾಸ್ಟ್ ಆಗಿ ಕಿತ್ತುಕೊಂಡು ಹೋಗಿ ಬಿಟ್ಟರು’ ಎಂದು ದೂರು ನೀಡಿದ ಅಕ್ಕ-ತಂಗಿಯರು ಹೇಳಿದ್ದಾರೆ.
ಈ ಸಂಬಂಧ ಲಕ್ಷ್ಮೀ ಸಿದ್ದಯ್ಯ ಸ್ಪಷ್ಟನೆ ನೀಡಿದ್ದು, ನನ್ನಿಂದ ಯಾವ ಹಲ್ಲೆಯೂ ಆಗಿಲ್ಲ. ಮೈಸೂರು ರೋಡ್ ನಲ್ಲಿ ತುಂಬಾ ಟ್ರಾಫಿಕ್ ಇತ್ತು. ಬಂಪರ್ ಟು ಬಂಪರ್ ಮೂವ್ ಆಗ್ತಾ ಇತ್ತು. ಈ ಹುಡುಗಿಯರು ಎಲ್ಲಿದ್ದರು ಅಂತ ಗೊತ್ತಿಲ್ಲ. ಇದ್ದಕ್ಕಿದ್ದ ಹಾಗೇ ಬಂದು ಕಾರಿಗೆ ಬಡಿದು ಕಾಮನ್ ಸೆನ್ಸ್ ಇಲ್ವಾ ಅಂತ ಬೈಯೋದಕ್ಕೆ ಶುರು ಮಾಡಿದರು. ಗಾಡಿ ಮೂಮೆಂಟ್ ಇದ್ದ ಕಾರಣ ಅವರ ಮಿರರ್ ಹಾಗೂ ನನ್ನ ಗಾಡಿ ಮಿರರ್ ಗೆ ಟಚ್ ಆಯ್ತು. ಬಳಿಕ ನನ್ನ ಗಾಡಿ ಮುಂದೆಯೇ ಬಂದು ನಿಲ್ಲಿಸಿದರು. ನಾನು ಸಾಧ್ಯವಾದಷ್ಟು ಬ್ರೇಕ್ ಹಾಕಿದೆ. ಗ್ಯಾಪ್ ಇಲ್ಲದೆ ಇದ್ದ ಕಾರಣ ಸ್ವಲ್ಪ ಅವರ ಗಾಡಿಗೆ ಟಚ್ ಆಯ್ತು. ಆಗ ಏಕವಚನದಲ್ಲಿ ಮಾತನಾಡಿದರು. ನಾನು ಕೂಡ ಕೇಳಿದೆ. ಅದು ಮಾತಿಗೆ ಮಾತು ಜಾಸ್ತಿ ಆಯ್ತು. ತೀರಾ ಕೆಟ್ಟದಾಗಿ ಮಾತನಾಡಿ ಅಂತ ಆರೋಪ ಮಾಡಿದ್ದಾರೆ. ನಾನು ಅಲ್ಲಿಗೆ ಆ ವಿಚಾರವನ್ನು ಬಿಟ್ಟಿದ್ದೆ. ಆದರೆ ಮೂರು ತಿಂಗಳಾದ ಮೇಲೆ ಅವರು ಮೀಡಿಯಾಗೆ ಬಂದಿದ್ದಾರೆ’ ಎಂದಿದ್ದಾರೆ.