*ಮಂಜುನಾಥ್ ಹೂಡಲ್, ಸಾರಥ್ಯದಲ್ಲಿ `ಟ್ಯೂನ್ 123 ಆಡಿಯೋ ಕಂಪನಿ
*`ಹಾರೋ ಬಣ್ಣದ ಚಿಟ್ಟೆ’ ಹಾಡು ರಿಲೀಸ್
*ಪ್ರತಿಭಾವಂತ ಸಂಗೀತ ನಿರ್ದೇಶಕರಿಗೆ,ಗಾಯಕ ಗಾಯಕಿಯರಿಗೆ,ಬರಹಗಾರರಿಗೆ ಅವಕಾಶ
*ಉತ್ತರ ಕರ್ನಾಟಕ ಭಾಷೆಯ ಹತ್ತು ಕನ್ನಡ ಆಲ್ಬಂ ಹಾಡುಗಳು ಈಗಾಗಲೇ ಸಿದ್ಧ.
ಕಲಬುರ್ಗಿ ಮೂಲದ ಮಂಜುನಾಥ್ ಹೂಡಲ್ ರವರ ಕನಸಿನ ಪ್ರಾಜೆಕ್ಟ್ ಗೆ ಇಂದು ದೊಡ್ಡ ಮಟ್ಟದಲ್ಲಿ ಚಾಲನೆ ಸಿಕ್ಕಿದ್ದು,ತಾವು ಅಂದುಕೊಂಡ ಹಾಗೇ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದಂತಹ ಸಂಗೀತಮಯ ಕೊಡುಗೆಯನ್ನು ಕೊಡುವುದರ ಮೂಲಕ,ಸಾರ್ಥಕ ಭಾವವನ್ನು ಕಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಟ್ಯೂನ್ 123 ಅನ್ನೋ ಮ್ಯೂಸಿಕ್ ಬ್ಯಾಂಕ್ ಕಾಲಿಟ್ಟಿದೆ,ವಿಶಿಷ್ಟ ಹಾಗೂ ವಿನೂತನ ಶೈಲಿಯಲ್ಲಿ ಬಂದಿರುವಂತಹ ಈ ಮ್ಯೂಸಿಕ್ ಬ್ಯಾಂಕ್ ನಿಂದ ರೆಡಿಮೇಡ್ ಇರುವಂತಹ ಟ್ಯೂನ್ಸ್,ಸಾಂಗ್ಸ್ ಹಾಗೂ ಬಿಜಿಎಂ ಗಳನ್ನು ಎಲ್ಲರೂ ಖರೀದಿಸಬಹುದಾಗಿದೆ,
ಇದನ್ನೂ ಓದಿ: Sapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..!
ಇಂದು ಈ ಕಂಪನಿಯು ಲೋಕಾರ್ಪಣೆಗೊಂಡಿದೆ, ಇನ್ನು, ಈಗಾಗಲೇ ರಿಲೀಸ್ ಆಗಿರುವ `ಹಾರೋ ಬಣ್ಣದ ಚಿಟ್ಟೆ’ ಲಿರಿಕಲ್ ವಿಡಿಯೋ ಯುವ ಜನತೆಯ ಮನಸ್ಸು ಗೆದ್ದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಾಡಿಗೆ ಅವರ ಸಾಹಿತ್ಯವುದ್ದು, ಗೀತಾಸಾನ್ ಅಂಕೋಲಾ ಸಂಗೀತವಿದೆ. ಹಾಗೂ ಹಾಡನ್ನು ಕರಾವಳಿ ಪ್ರತಿಭೆ ಅರ್ಫಾಸ್ ಉಳ್ಳಾಲ್ ಹಾಡಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಇರುವಂತಹ ಪ್ರತಿಭಾವಂತ ಸಂಗೀತ ನಿರ್ದೇಶಕರಿಗೆ,ಗಾಯಕ ಗಾಯಕಿಯರಿಗೆ,ಬರಹಗಾರರಿಗೆ ಅವಕಾಶ ಕಲ್ಪಿಸುವ ಹಾಗೂ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಸಂಸ್ಥೆಯನ್ನು ತೆರೆಯಲಾಗಿದ್ದು,ತನ್ನ ಕಾರ್ಯವನ್ನು ಪ್ರಾರಂಭಿಸಿದೆ. ವಿಶೇಷವಾಗಿ ಟ್ಯೂನ್ 123 ಸಂಸ್ಥೆಯ ಅಡಿಯಲ್ಲಿ ಈಗಾಗಲೇ ಹತ್ತು ಕನ್ನಡ ಆಲ್ಬಂ ಹಾಡುಗಳು ಸಿದ್ಧವಿದ್ದು, ಅವೆಲ್ಲವೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಷೆಯ ಮೇಲೆ ಬರೆಯಲಾಗಿರುವ ಹಾಡುಗಳಾಗಿದ್ದು,ಮುಂದಿನ ದಿನಗಳಲ್ಲಿ ಎಲ್ಲ ಬಾಗದ,ಎಲ್ಲ ಪ್ರತಿಭಾವಂತರಿಗೆ ಈ ಸಂಸ್ಥೆಯ ಅಡಿಯಲ್ಲಿ ಅವಕಾಶ ಕೊಡುವುದಾಗಿ,ಮುಖ್ಯಸ್ಥರು ಹೇಳಿದ್ದಾರೆ. ಈ ಸದಾವಕಾಶವನ್ನು ಎಲ್ಲ ಸಂಗೀತ ಪ್ರೇಮಿಗಳು ಹಾಗೂ ಕನ್ನಡ ಚಿತ್ರ ರಂಗದ ಎಲ್ಲರೂ ಪಡೆದುಕೊಳ್ಳಬೇಕಾಗಿ ಮಂಜುನಾಥ್ ಹೂಡಲ್ ಕೇಳಿಕೊಂಡರು.