ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ‘ತ್ರಿವಿಕ್ರಮ’ ಜೂನ್ 24ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸೋಮವಾರ ಸೆನ್ದಾರ್ ಪ್ರಕ್ರಿಯೆ ಮುಗಿಸಿರುವ ಚಿತ್ರತಂಡಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರ ದೊರಕಿದೆ. ಅದಕ್ಕೂ ಮುನ್ನ ಜರುಗಿದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಚಂದನವನದ ತಾರೆಯರ ಹಿಂಡು ಸಾಕ್ಷಿಯಾಗಿತ್ತು.
ಹೆಚ್ಚಿನ ಓದಿಗಾಗಿ;- ಮತ್ತೆ ಒಂದಾದ ಶಿವಣ್ಣ,ಡಾಲಿ & ಚಿಟ್ಟೆ..!
ಕ್ರೇಜಿ಼ಸ್ಟಾರ್ ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ‘ಡಾಲಿ’ ಧನಂಜಯ್, ಸುಮನ್, ಶೃತಿ, ನಿಶ್ವಿಕಾ ನಾಯ್ಡು ಹಾಗೂ ಮನುರಂಜನ್ ಸೇರಿದಂತೆ ಇನ್ನೂ ಅನೇಕರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಾವಿರಾರು ಪ್ರೇಕ್ಷಕರು ಹಾಗೂ ಅಭಿಮಾನಿಗಳು ಹಾಜರಾಗಿದ್ದರು. ರವಿಚಂದ್ರನ್ ಹಾಗೂ ಶಿವರಾಜ್‌ಕುಮಾರ್ ‘ತ್ರಿವಿಕ್ರಮ’ ನೋಡಿ ಹರಸುವಂತೆ ಕೇಳಿಕೊಂಡರು. ಕಲರ್’ಫುಲ್ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಸಂಗೀತ ಸಂಜೆಯೂ ಹೈಲೈಟ್ ಆಗಿತ್ತು.
ಸಹನಾ ಮೂರ್ತಿ ‘ತ್ರಿವಿಕ್ರಮ’ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಪ್ಲೀಸ್ ಮಮ್ಮಿ’, ‘ಹನಿ ಬನಿ ಫೀಲ್ ಮೈ ಲವ್’ ಹಾಗೂ ‘ಶಕುಂತಲಾ ಶೇಕ್ ಯುವರ್ ಬಾಡಿ ಪ್ಲೀಸ್…’ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್’ಗಟ್ಟಲೆ ಹಿಟ್ಸ್ ದಾಖಲಿಸಿರುವುದು ‘ತ್ರಿವಿಕ್ರಮ’ನ ಹೆಚ್ಚುಗಾರಿಕೆ.