ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗತ್ಮಕ ಚಿತ್ರದ ಕಡೆ ಮುಖ ಮಾಡಿದೆ, ಅದರಲ್ಲಿ ಹಳ್ಳಿ ಸೊಗಡಿನ ಚಿತ್ರಗಳ ಸಂಖ್ಯೆ ಜಾಸ್ತಿ, ಮಂಡ್ಯ, ಮಂಗಳೂರು, ಕುಂದಾಪುರ ಹೀಗೆ ಅದರ ಪಟ್ಟಿಗೆ ಈಗ ಹೊಸ ಜಾಗ ಸೇರ್ಪಡೆ ಆಗಿದೆ ಅದೇ ಉತ್ತರ ಕನ್ನಡ ಜಿಲ್ಲೆ, ಅದು “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ” ಚಿತ್ರದ ಮೂಲಕ, ಈ ಇಡೀ ಚಿತ್ರವನ್ನು ಶಿರಸಿ, ಯಲ್ಲಾಪುರ, ಹೊನ್ನಾವರ ದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅಲ್ಲಿಯ ಸ್ಥಳೀಯ ಪ್ರತಿಭೆಗಳನ್ನು ಹೆರಳವಾಗಿ ಬಳಸಿಕೊಳ್ಳಲಾಗಿದೆ,ಈ ಚಿತ್ರದ ವಿಶೇಷತೆ ಚಿತ್ರಕ್ಕೆ ಬಳಸಿರುವ ಉತ್ತರಕನ್ನಡ ಭಾಷೆ ಹಾಗೂ ರಮಣೀಯ ಸ್ಥಳಗಳು ನೋಡುಗನ ಕಣ್ಣ್ ತಂಪು ಮಾಡಿದರೆ, ಚಿತ್ರಕಥೆಯ ಹೊಸತನ,ಭಾರತ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಬಾರದ ಹೊಸ ಕಥೆ ಇದಾಗಿರುತ್ತದೆ.
ನಿರ್ದೇಶಕರ ಸಂಘದಿಂದ ಅಪರೂಪದ ಕಾರ್ಯಕ್ರಮ
ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನೆಯ ಹೋರಾಟ ಈ ಚಿತ್ರದ ಹೈಲೈಟ್,ಜೊತೆಗೆ, ಮುದ್ದಾದ ಪ್ರೇಮಿಗಳ ಕಥೆ, ಒಬ್ಬ ಇನ್ಶೂರೆನ್ಸ್ ಮಾಡಿಸುವವ ಹಾಗೂ ಅವನ ವಯಕ್ತಿಕ ಜೀವನದ ಬಗ್ಗೆ, ಒಬ್ಬ ಜಮೀನ್ದಾರ ಅವನ ಮತ್ತು ಫೋಟೋಗ್ರಾಫರ್ ನಡುವಿನ ನೆಡೆಯುವ ಸಂಘರ್ಷ ನೋಡುಗರಿಗೆ ಹೊಸ ಅನುಭವ ತರಿಸೋದು ಪಕ್ಕ ಅನ್ನುತ್ತಿದ್ದಾರೆ ಸಿನೆಮಾ ಟೀಮ್ ನಿರ್ಮಾಪರಾಗಿ ವೆಂಕಟೇಶ್ವರ ರಾವ್, ಬಳ್ಳಾರಿ ರವರು.
ನವೆಂಬರ್ 18ರಿಂದ ರಾಜ್ಯಾದ್ಯಂತ `ಅಬ್ಬರ’!
ಮೊದಲಬಾರಿಗೆ ಸೃಜನ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ಮೊದಲ ಸಿನೆಮಾ ಇದಾಗಿದ್ದು ನಿರ್ದೇಶಕರಾಗಿ ಹಾಗೂ ಮುಖ್ಯ ಪಾತ್ರದಲ್ಲಿ ಕಿರುತೆರೆಯ 6 ವರ್ಷಗಳ ಕಾಲ ಸಂಚಲನ ಮೂಡಿಸಿದ್ದ ಪ್ರಸಿದ್ಧ ಧಾರವಾಹಿ “ಅಗ್ನಿಸಾಕ್ಷಿ” ಖ್ಯಾತಿಯ ನಟ ರಾಜೇಶ್ ಧ್ರುವ ಅವರದಾಗಿದ್ದು, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಖಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, bigboss 4 ಖ್ಯಾತಿಯ ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಹಾಗೂ ಹಲವಾರು ಹೊಸ ಕಲಾವಿದರು ಈ ಸಿನೆಮಾ ಮೂಲಕ ಪಾದಾರ್ಪಣೆ ಮಾಡಲಿದ್ದಾರೆ.
“ತಿಮ್ಮಯ್ಯ & ತಿಮ್ಮಯ್ಯ” ಚಿತ್ರದಲ್ಲಿ ಅನಂತನಾಗ್ ಹಾಗೂ ದಿಗಂತ್
ಕಥೆ – ಚಿತ್ರಕಥೆ ಅಭಿಷೇಕ್ ಶಿರಸಿ, ಹಾಗೂ ಪೃಥ್ವಿಕಾಂತ ರವರದ್ದಾಗಿದ್ದರೆ, ಸಂಭಾಷಣೆ ಅಜಿತ್ ಬೊಪ್ಪನಳ್ಳಿ ರವರದ್ದು, ಮನೋಜ್ ಸಿನಿಸ್ಟುಡಿಯೋ ರವರ ಛಾಯಾಗ್ರಹಣ, ಗಣಪತಿ ಭಟ್ ರವರ ಸಂಕಲನ, ಚಿತ್ರದಲ್ಲಿ 2 ಸುಂದರ ಹಾಡುಗಳು ಇದ್ದು ಶ್ರೀರಾಮ್ ಗಂಧರ್ವ ರವರ ಸಂಗೀತ, ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ರವರ ಸಾಹಿತ್ಯ ಇದೆ, ಸ್ವಸ್ತಿಕ್ ಕಾರೆಕಾಡ್ ರವರ ಹಿನ್ನೆಲೆ ಸಂಗೀತ ಈ ಚಿತ್ರದ ಪ್ರಮುಖ ಆಕರ್ಷಣೆ