Sandalwood Leading OnlineMedia

ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿದೆ ಕಿರುತೆರೆ ಕಲಾವಿದರ ಕ್ರಿಕೆಟ್

ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್-ಟಿಪಿಎಲ್ ಶುರುವಾಗ್ತಿದ್ದು, ಇದೇ ತಿಂಗಳ 18, 19 ಹಾಗೂ 20 ಈ ಮೂರು ದಿನಗಳ ಕಾಲ ಪಂದ್ಯಾವಳಿ ನಡೆಯುತ್ತಿದೆ. ಈ ಹಿನ್ನೆಲೆ ನಿನ್ನೆ ಖಾಸಗಿ ಹೋಟೆಲ್ ವೊಂದ್ರಲ್ಲಿ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ ಮಾಡಲಾಯಿತು. ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರು ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ.ಆಯೋಜಕರಾದ ಬಿ.ಆರ್.ಸುನಿಲ್ ಕುಮಾರ್ ಮಾತನಾಡಿ, ಮೊದಲ ಬಾರಿಗೆ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಐಪಿಎಲ್ ರೇಂಜ್ ಗೆ ಮಾಡಬೇಕೆಂಬ ಕನಸು ಇತ್ತು. ಇದು ಮೊದಲ ಹೆಜ್ಜೆಯಷ್ಟೇ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗಿ ಮಾಡುವ ಕನಸಿದೆ ಎಂದರು.

 

ನಾಯಕ ನಟ `ಬಿಗ್‌ಬಾಸ್’ ಮನೆಯಲ್ಲಿ, ಸಿನಿಮಾ ಥೀಯೇಟರ್‌ನಲ್ಲಿ!

ಬೆಂಗಳೂರಿನ ಪೆಸೆಟ್ ಕಾಲೇಜು ಗ್ರೌಂಡ್ ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ, ದಿ ಬುಲ್ ಸ್ಕ್ವಾಡ್, ಭಜರಂಗಿ ಲಯನ್ಸ್, ಎಂಜೆಲ್ XI, ವಿನ್ ಟೈಮ್ ರಾಕರ್ಸ್, ಅಶ್ವ ಸೂರ್ಯ ರೈಡರ್ಸ್, ಸ್ಯಾಂಡಲ್ ವುಡ್ ಕಿಂಗ್ಸ್ ಎಂಬ ಆರು ತಂಡಗಳು ಭಾಗಿಯಾಗಲಿದ್ದು, ಒಟ್ಟು 102 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ ಆರು ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್ ಗಳಿರಲಿದ್ದಾರೆ. ಟಿಪಿಎಲ್ ಪಂದ್ಯಾವಳಿ ಆರಂಭವಾಗಲಿದೆ.

 

ಡಾಲಿಯಿಂದ ಬಿಡುಗಡೆಯಾಯ್ತು `ಮಾಯಾನಗರಿ’ ಹಾಡು

 

ದಿ ಬುಲ್ ಸ್ಕ್ವಾಡ್ ಟೀಂಗೆ ಶರತ್ ಪದ್ಮನಾಭ್ ನಾಯಕನಾಗಿದ್ದು, ಈ ತಂಡದ ಒಡೆತನವನ್ನು ಮೋನಿಶ್ ಹೊತ್ತುಕೊಂಡಿದ್ರೆ, ಭಜರಂಗಿ ಲಯನ್ಸ್ ಗೆ ರಂಜಿತ್ ಕುಮಾರ್ ನಾಯಕ- ಮಹೇಶ್ ಗೌಡ ಓನರ್, ಎಂಜಲ್ XI ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ-ಜಗದೀಶ್ ಬಾಬು ಆರ್ ಓನರ್, ವಿನ್ ಟೈಮ್ ರಾಕರ್ಸ್ ತಂಡಕ್ಕೆ ಅರ್ಜುನ್ ಯೋಗಿ ನಾಯಕ-ಅನಿಲ್ ಬಿಆರ್ ಮತ್ತು ದೇವನಾಥ್ ಓನರ್, ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಮಂಜು ಪಾವಗಡ ನಾಯಕ-ರಂಜಿತ್ ಕುಮಾರ್ ಓನರ್, ಸ್ಯಾಂಡಲ್ ವುಡ್ ಕಿಂಗ್ಸ್ ತಂಡಕ್ಕೆ ವಿವಾನ್ ನಾಯಕ-ದೀಪಶ್ರೀ ಮಿಸ್ಟ್ರೀ ಒಡೆತನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

 

Share this post:

Related Posts

To Subscribe to our News Letter.

Translate »