ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ನಾಯಕಿಯ ವಿಚಾರಕ್ಕೆ ಬಂದರೆ ಮೊದಲಿಂದ ಹಲವಾರು ಹೆಸರು ಕೇಳಿ ಬರ್ತಾನೆ ಇವೆ. ಆ ಪೈಕಿ ಬಾಲಿವುಡ್‌ನ ಬೆಡಗಿ ಕಿಯಾರಾ ಅಡ್ವಾಣಿ ಹೆಸರು ಮುಂಚೂಣಿಯಲ್ಲಿದೆ. ಚಿತ್ರದ ನಾಯಕಿ ಬೇರೆ ಯಾರು ಅಲ್ಲ ಬದಲಿಗೆ ಕಿಯಾರಾ ಅನ್ನುವ ಮಾತು ಇದೆ. ಕಿಯಾರಾ ಹೊರತು ಪಡಿಸಿದರೆ, ಲೇಡಿ ಸೂಪರ್ ಸ್ಟಾರ್ ಕೂಡ.. ಟಾಕ್ಸಿಕ್‌ನಲ್ಲಿ ಟಾಫ್ ಕ್ಲಾಸ್ ರೋಲ್ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಯಶ್ ಆಗಲಿ ಅಥವಾ ಗೀತು ಮೋಹನ್ ದಾಸ್ ಆಗಲಿ ಕಿಯಾರಾ ಹಾಗೂ ನಯನತಾರ ಹೆಸರನ್ನು ಅಧಿಕೃತವಾಗಿ ಹೇಳ್ದೇ ಇದ್ರೂ ಮಾರ್ಕೆಟ್‌ನಲ್ಲಿ ಇವರ ಹೆಸರೇ ಚಾಲ್ತಿಯಲ್ಲಿದೆ. ಈ ನಡುವೆ ಬಾಲಿವುಡ್‌ನ ಮತ್ತೊಬ್ಬ ಬೋಲ್ಡ್ & ಬ್ಯೂಟಿಫುಲ್ ನಾಯಕಿ ಹುಮಾ ಖುರೇಶಿ ಟಾಕ್ಸಿಕ್ ಚಿತ್ರದಲ್ಲಿನ ಮತ್ತೊಂದು ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
READ MORE:-‘ತಾಜ್’ ಟ್ರೈಲರ್ ರಿಲೀಸ್: ಶೀಘ್ರದಲ್ಲೇ ತೆರೆ ಮೇಲೆ ನೈಜ ಹಿಂದು-ಮುಸ್ಲಿ0 ಲವ್‌ಸ್ಟೋರಿ!
ಅಂದ್ಹಾಗೇ ಹುಮಾ ಖುರೇಶಿ ಕೇವಲ ರೂಪವತಿ ಅಷ್ಟೇ ಅಲ್ಲ ಅಭಿನಯದ ವಿಚಾರದಲ್ಲಿ ಕೂಡ ಇವರದ್ದು ಎತ್ತಿದ ಕೈ. ಗ್ಯಾಂಗ್ಸ್ ಆಫ್ ವಾಸೇಪುರ್, ಏಕ್ ಥಿ ಡಾಯನ್, ಬದ್ಲಾಪುರ್ ಮತ್ತು ಮಹಾರಾಣಿ ಎಂಬ ವೆಬ್ ಸರಣಿ ಇದಕ್ಕೆ ಕೈಗನ್ನಡಿ. ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಾಲಾ ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಬಂದಿದ್ದ ಹುಮಾ ಖುರೇಶಿ ಸದ್ಯಕ್ಕೆ ಜಾಲಿ ಎಲ್ ಎಲ್ ಬಿ 3 ಮತ್ತು ಗುಲಾಬಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಂಥ ಹುಮಾ ಖುರೇಶಿ ಇದೀಗ ಟಾಕ್ಸಿಕ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಸಹಜವಾಗಿ ಸುದ್ದಿ ಕೇಳಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಉಳಿದಂತೆ ಟಾಕ್ಸಿಕ್ ಚಿತ್ರದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಲಂಡನ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಬೇಕಿತ್ತಾದರೂ ಅದಕ್ಕೆ ಕಾಲ ಇನ್ನೂ ಕೂಡಿ ಬಂದಿಲ್ಲ. ಈ ನಡುವೆ ಬೆಂಗಳೂರಿನಲ್ಲಿ ಟಾಕ್ಸಿಕ್ ಚಿತ್ರಕ್ಕೆ ಕೋಟ್ಯಂತರ ಹಣ ಖರ್ಚು ಮಾಡಿ ಸೆಟ್‌ಗಳನ್ನು ಹಾಕಲಾಗಿದೆ. ಯಶ್ ಜೊತೆ ಸೇರಿ ಕೆ.ವಿ.ಎನ್ ಪ್ರೊಡಕ್ಷನ್ಸ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುವ ಶಪಥವನ್ನು ಮಾಡಿದೆ
READ MORE:- ಸಂಜಿತ್ ಹೆಗ್ಡೆ-ಸಂಜನಾ ದಾಸ್ ರೋಮ್ಯಾಂಟಿಕ್ ಗಾನಬಜಾನ…’ನಂಗೆ ಅಲ್ಲವ’ ಎಂದು ಹಾಡಿ ಕುಣಿದ ಸ್ಟಾರ್ ಸಿಂಗರ್
ಒಟ್ನಲ್ಲಿ ಸದ್ಯಕ್ಕೆ ಹುಮಾ ಖುರೇಶಿ ಟಾಕ್ಸಿಕ್ ಚಿತ್ರಕ್ಕೆ ಮುಂಬೈನಿಂದ ಆಯ್ಕೆಯಾಗಿರುವ ಮತ್ತೊಬ್ಬ ನಾಯಕಿ ಎಂಬ ಮಾತು ಕೇಳಿ ಬರುತ್ತಿದೆ. ಸದ್ಯದಲ್ಲಿಯೇ ಯಶ್, ಗೀತು ಮೋಹನ್ ದಾಸ್ ಪಾತ್ರವರ್ಗವನ್ನ ಪರಿಚಯಿಸುವ ಸಾಧ್ಯತೆ ಇದೆ. ಶೀಘ್ರದಲ್ಲಿಯೇ ಟಾಕ್ಸಿಕ್ ಚಿತ್ರದ ಚಿತ್ರೀಕರಣ ಕೂಡ ಆರಂಭವಾಗಲಿದೆ.