Sandalwood Leading OnlineMedia

ಇನ್‌ಸ್ಟಾಗ್ರಾಂನಲ್ಲಿ  ಬಯಲಾಯ್ತಾ `ಟಾಕ್ಸಿಕ್’ ಅಪ್‌ಡೇಟ್ಸ್?!

 

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸಿನಿಮಾ ಮುಹೂರ್ತಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಟೀಸರ್ ಸಮೇತ ಸಿನಿಮಾ ಘೋಷಣೆ ಬಳಿಕ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.‘ಟಾಕ್ಸಿಕ್’ ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಅಂತೆಕಂತೆ ಸುದ್ದಿಗಳನ್ನು ನೋಡಿ ನೋಡಿ ಸುಮ್ಮನಾಗಿದ್ದಾರೆ. ಇದೀಗ ಸ್ವತಃ ಅಭಿಮಾನಿಗಳ ಮುಂದೆ ಪ್ರಶ್ನೆಯೊಂದನ್ನು ಇಟ್ಟು ಕುತೂಹಲ ಮೂಡಿಸಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಚಿತ್ರೀಕರಣಕ್ಕಾಗಿ ಸೆಟ್ ನಿರ್ಮಾಣವಾಗಿದೆ. ಅಲ್ಲೇ ಮುಹೂರ್ತ ನೆರವೇರಿಸುವ ಸಾಧ್ಯತೆಯಿದೆ. ಆ ಬಗ್ಗೆ ಫೋಟೊ ಸಮೇತ ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲು ಯಶ್ ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಈ ರೀತಿ ಸುಳಿವು ಕೊಟ್ಟಿದ್ದಾರೆ.

READ MORE ; `ಕೊರಗಜ್ಜ’ ಸಿನಿಮಾಗೆ “ದೈವ ಕೊರಗಜ್ಜ”  ಅಭಯ ಹಸ್ತ; ಫಸ್ಟ್ ಲುಕ್ ರಿಲೀಸ್ ಗೆ ದಿನಗಣನೆ….!

ನಟ ಯಶ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅಭಿಮಾನಿಗಳ ಮುಂದೆ ಪ್ರಶ್ನೆವೊಂದನ್ನು ಇಟ್ಟಿದ್ದಾರೆ. ಅದಕ್ಕೆ ‘ಹೌದು’ ಎಂದು ಹೆಚ್ಚು ಪ್ರತಿಕ್ರಿಯೆ ಸಿಕ್ಕರೆ. ‘ಟಾಕ್ಸಿಕ್’ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಅಪ್‌ಡೇಟ್ ಕೊಡುತ್ತಾ ಹೋಗುತ್ತಾರೆ. ಅಭಿಮಾನಿಗಳು ಈಗಾಗಲೇ ‘ಹೌದು’ ಎಂದು ಕಾಮೆಂಟ್‌ಗಳ ಸುರಿಮಳೆ ಸುರಿಸುತ್ತಿದ್ದಾರೆ. ಕೊನೆಗೂ ಅಪ್‌ಡೇಟ್ ಸಿಗುವ ಟೈಮ್ ಬಂತು ಎಂದು ಖುಷಿಯಾಗಿದ್ದಾರೆ. ಕೆವಿಎನ್‌ ಪ್ರೊಡಕ್ಷನ್ಸ್ ಜೊತೆ ಸೇರಿ ತಮ್ಮದೇ ಮಾನ್‌ಸ್ಟರ್ ಮೈಂಡ್ಸ್ ಬ್ಯಾನರ್‌ನಲ್ಲಿ ಯಶ್ ‘ಟಾಕ್ಸಿಕ್’ ಚಿತ್ರ ನಿರ್ಮಿಸುತ್ತಿದ್ದಾರೆ. ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿಯಲ್ಲಿ ಚಿತ್ರೀಕರಣಕ್ಕಾಗಿ ಅದ್ಧೂರಿ ಸೆಟ್ ನಿರ್ಮಿಸಲಾಗಿದೆ. 70ರ ದಶಕದ ಪಟ್ಟಣವೊಂದರ ಸೆಟ್ ಎನ್ನಲಾಗ್ತಿದೆ. ಗೋವಾ, ಶ್ರೀಲಂಕಾದಲ್ಲಿ ಕೂಡ ಚಿತ್ರೀಕರಣ ನಡೆಸುವ ಲೆಕ್ಕಾಚಾರದಲ್ಲಿ ಚಿತ್ರತಂಡ ಇದೆ. ‘ಟಾಕ್ಸಿಕ್’ ಸ್ಟಾರ್‌ಕಾಸ್ಟ್ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಿದೆ. ಕೈರಾ ಅದ್ವಾನಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಅಕ್ಕ-ತಮ್ಮ ಒಡನಾಟದ ಕಥೆ ಇದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹಾಗಾಗಿ ಯಶ್ ಸಹೋದರಿ ಪಾತ್ರದಲ್ಲಿ ಕರೀನಾ ಕಪೂರ್ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಆಕೆ ಡೇಟ್ಸ್ ಸಮಸ್ಯೆಯಿಂದ ಹೊರ ಬಂದಿದ್ದಾರೆ ಎನ್ನುವ ಚರ್ಚೆ ಬಾಲಿವುಡ್‌ನಲ್ಲಿ ಶುರುವಾಗಿದೆ.

Share this post:

Related Posts

To Subscribe to our News Letter.

Translate »