ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಭಾರತೀಯ ಚಿತ್ರರಂಗದಲ್ಲೇ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾದಲ್ಲಿ ನಟಿಸಲು ನಿಮಗೆ ಆಸಕ್ತಿ ಇದ್ದರೆ, ಇಲ್ಲಿದೆ ಅವಕಾಶ.
ನಟನೆಯಲ್ಲಿ ಆಸಕ್ತಿ ಇರುವವರಿಗೆ ಟಾಕ್ಸಿಕ್ ಸಿನಿಮಾದಲ್ಲಿ ಸುವರ್ಣ ಅವಕಾಶ ಸಿಕ್ಕಿದೆ. ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ನಟಿಸುವ ಅವಕಾಶ ಸಿಗಲಿದೆ. ನೀವೇನಾದ್ರು ನಟನೆಯಲ್ಲಿ ಆಸಕ್ತಿ ಹೊಂದಿದ್ದರೆ ಒಂದು ನಿಮಿಷದ ನಟನೆಯ ವಿಡಿಯೋವನ್ನು ವಾಟ್ಸಾಪ್ ಸಂಖ್ಯೆಗೆ ಕಳುಹಿಸುವಂತೆ ಕೇಳಲಾಗಿದೆ.
ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದೆ. 25 ರಿಂದ 75 ವರ್ಷ ವಯಸ್ಸಿನ ಪುರುಷರು, 12-16 ವರ್ಷದ ವಯೋಮಾನದ ಮಕ್ಕಳು ಮತ್ತು 23 ರಿಂದ 65 ವರ್ಷದೊಳಗಿನ ಮಹಿಳೆಯರು ಟಾಕ್ಸಿಕ್ ಚಿತ್ರದಲ್ಲಿ ನಟಿಸಬಹುದಾಗಿದೆ. ಈ ಸಂಖ್ಯೆಗೆ 8618706590 ವಾಟ್ಸಾಪ್ ಸಂಖ್ಯೆಗೆ ನಿಮ್ಮ ನಟನೆಯ ಒಂದು ನಿಮಿಷದ ವಿಡಿಯೋವನ್ನು ಕಳಿಸಬೇಕಾಗುತ್ತದೆ. ಮಾರ್ಚ್ 25 ನಿಮ್ಮ ವಿಡಿಯೋ ಕಳುಹಿಸಲು ಕೊನೆಯ ದಿನವಾಗಿದೆ. ಆಯ್ಕೆಯಾದವರಿಗೆ ಯಶ್ ಜೊತೆ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುವ ಸುವರ್ಣಾವಕಾಶ ಸಿಗಲಿದೆ.
CASTING CALL!!!#Toxic #ToxicTheMovie pic.twitter.com/ism6TYWkQs
— KVN Productions (@KvnProductions) March 22, 2024
ಚಿತ್ರೀಕರಣ ಯಾವಾಗ? ಡಿಸೆಂಬರ್ ತಿಂಗಳಿನಲ್ಲಿ ಚಿತ್ರದ ಹೆಸರನ್ನು ಘೋಷಣೆ ಮಾಡಿದ್ದರೂ, ಚಿತ್ರದ ಬಗ್ಗೆ ಇನ್ನೂ ಯಾವುದೇ ಮಹತ್ವದ ಅಪ್‌ಡೇಟ್ ಸಿಕ್ಕಿಲ್ಲ. ಆದರೂ 2025ರ ಏಪ್ರಿಲ್ 10ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕೆಜಿಎಫ್ 2 ಸಿನಿಮಾದ ಭಾರಿ ಯಶಸ್ಸಿನ ಬಳಿಕ ನಟ ಯಶ್ ಅಳೆದು ತೂಗಿ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಒಂದೂವರೆ ವರ್ಷದ ಸುದೀರ್ಘ ಗ್ಯಾಪ್ ಬಳಿಕ ಸಿನಿಮಾ ಹೆಸರು ಘೋಷಣೆ ಮಾಡಿದ್ದರು. ದೊಡ್ಡ ದೊಡ್ಡ ನಿರ್ದೇಶಕರ ಸಿನಿಮಾಗಳ ಆಫರ್ ಬಂದರೂ, ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕಥೆಗೆ ಓಕೆ ಹೇಳಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಸದ್ದಿಲ್ಲದೇ ಗೋವಾದಲ್ಲಿ ನಡೆಯುತ್ತಿದೆ ಎನ್ನುವ ಸುದ್ದಿ ಇದೆ. ಇತ್ತೀಚೆಗೆ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಕರೀನಾ ಕಪೂರ್ ಈ ಚಿತ್ರದಲ್ಲಿ ನಟಿಸುವುದು ಬಹುತೇಕ ಪಕ್ಕಾ ಆಗಿದೆ. ಶೃತಿ ಹಾಸನ್ ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟಾಕ್ಸಿಕ್ ಆಕ್ಷನ್, ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗಿದ್ದು, ಗೋವಾದ ಡ್ರಗ್ಸ್ ವ್ಯವಹಾರದ ಕತೆಯನ್ನು ಒಳಗೊಂಡಿದೆ ಎನ್ನಲಾಗಿದೆ.