Sandalwood Leading OnlineMedia

ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಟೂರ್ನಿವಲ್ ಗೆ ಅದ್ದೂರಿ ಚಾಲನೆ.

 
ANYELP Entertainment ಹಾಗೂ White lotus entertainment ಸಂಸ್ಥೆ ಆಯೋಜಿಸಿರುವ ಟೂರ್ನಿವಲ್ (First indian international celebrbrity tournament and carnival) ನ ಉದ್ಘಾಟನಾ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು.ಶ್ರೀಲಂಕಾ ಪ್ರವಾಸೋದ್ಯಮ ಸಚಿವರಾದ ಡಯಾನ ಗ್ಯಾಮೇಜ್, ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರಾದ ಇಬ್ರಾಹಿಂ ರಷೀದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಟಿ ಪ್ರಿಯಾಂಕ ಉಪೇಂದ್ರ, ಜಾಕಿರ್ ಹುಸೇನ್, ನಟ ರುದ್ರ, ನಾಗತಿಹಳ್ಳಿ ಚಂದ್ರಶೇಖರ್, ನಟ ಅಜಯ್ ರಾವ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
 
 
“ಟೂರ್ನಿವಲ್” ಎಂದರೆ ಸೌತ್ ಏಷ್ಯಾ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯ. ನಮ್ಮ ರಾಜ್ಯದ ಸಿನಿತಾರೆಯರು ಹಾಗೂ ಮಾಲ್ಡೀವ್ಸ್ ನ ಸಿನಿತಾರೆಯರ ನಡುವೆ ಫುಟ್ಬಾಲ್ ಟೂರ್ನಮೆಂಟ್ ಆಯೋಜಿಸಲಾಗುವುದು. ಬರೀ ಕ್ರೀಡೆ ಅಷ್ಟೇ ಅಲ್ಲ. ಬೇರೆಬೇರೆ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರು ದೇಶಗಳಲ್ಲೂ ನಡೆಸುವ ಉದ್ದೇಶವಿದೆ.
 
 
ಇಲ್ಲಿನ ಚಿತ್ರ ಸಹ ಮಾಲ್ಡೀವ್ಸ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದ “ಟೂರ್ನಿವಲ್” ನ ಮ್ಯಾನೇಜಿಂಗ್ ಡೈರೆಕ್ಟರ್ ಪೂಜಾಶ್ರೀ, ಉದ್ಘಾಟನೆಗೆ ಆಗಮಿಸಿದ್ದ ಶ್ರೀಲಂಕಾ ಹಾಗೂ ಮಾಲ್ಡೀವ್ಸ್ ದೇಶದ ಪ್ರವಾಸೋದ್ಯಮ ಸಚಿವರಿಗೆ, ಇಲ್ಲಿನ ಗಣ್ಯರಿಗೆ ಧನ್ಯವಾದ ‌ತಿಳಿಸಿದರು.
 
 
ಈ ಸಂಸ್ಥೆಯವರು ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅವರಿಗೆ ಬೇಕಾದ ಸಹಕಾರ ನೀಡಲು ನಾವು ಸಿದ್ದ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರಾದ ಇಬ್ರಾಹಿಂ ರಷೀದ್ ಹಾಗೂ ಶ್ರೀಲಂಕಾ ಪ್ರವಾಸೋದ್ಯಮ ಸಚಿವರಾದ ಡಯನಾ ಗ್ಯಾಮೇಜ್ ತಿಳಿಸಿದರು.ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆಯಾಯಿತು. ಪ್ರಸಿದ್ದ ಕಲಾವಿದರೊಬ್ಬರ ಭರತನಾಟ್ಯ, ಖ್ಯಾತ ಶ್ರೀಲಂಕಾ ಗಾಯಕಿ ಯೋಹಾನಿ ಅವರ ಗಾಯನ ಹಾಗೂ ಫ್ಯಾಷನ್ ಶೋ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಕಣ್ಮನ ಸೆಳೆಯಿತು.ಇದೇ ಸಂದರ್ಭದಲ್ಲಿ ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ “Life of cockroach” ಚಿತ್ರದ ಶೀರ್ಷಿಕೆ ಅನಾವರಣ ಸಹ ನಡೆಯಿತು.

Share this post:

Related Posts

To Subscribe to our News Letter.

Translate »