ಇದನ್ನೂ ಓದಿ: Sapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..!
ಗೋವಿಂದಾಯನಮಃ, ಶಿವಲಿಂಗದಂಥ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ ಕೆ.ಸುರೇಶ್ ಅವರ ನಿರ್ಮಾಣದ ‘ತೋತಾಪುರಿ -2’ ಚಿತ್ರ ಈ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಇದನ್ನೂ ಓದಿ: *ಚೇತನ್ ಕುಮಾರ್ ನಿರ್ದೇಶನದಲ್ಲಿ ರಕ್ಷ್ ರಾಮ್ ನಾಯಕನಾಗಿ ನಟಿಸುತ್ತಿರುವ ‘ಬರ್ಮ’ ಚಿತ್ರ ಆರಂಭ.*
ಕಳೆದವರ್ಷ ತೆರೆಕಂಡಿದ್ದ ನವರಸನಾಯಕ ಜಗ್ಗೇಶ್, ಅದಿತಿ ಪ್ರಭುದೇವ ಅಭಿನಯದ ತೋತಾಪುರಿ ಚಿತ್ರದ ಸೀಕ್ವೇನ್ಸ್ ಇದಾಗಿದ್ದು, ನೀರ್ ದೋಸೆ ಖ್ಯಾತಿಯ ವಿಜಯಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಸುರೇಶ್ ಆರ್ಟ್ಸ್, ಮೋನ್ ಫ್ಲಿಕ್ಸ್ ಸ್ಟುಡಿಯೋಸ್ ಲಾಂಚನದಲ್ಲಿ ಕೆ.ಎ. ಸುರೇಶ್ ಅವರು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಉತ್ತಮ ಮನರಂಜನೆಯ ಜೊತೆ ಸದಭಿರುಚಿಯ ಹಾಸ್ಯ ತೋತಾಪುರಿ-2 ಚಿತ್ರದ ಹೈಲೈಟ್.
ಇದನ್ನೂ ಓದಿ: `ಅಭಿರಾಮಚಂದ್ರ’ ಟ್ರೇಲರ್ಗೆ ವ್ಯಕ್ತವಾಗುತ್ತಿದೆ ಉತ್ತಮ ಪ್ರತಿಕ್ರಿಯೆ, ಬಹುನಿರೀಕ್ಷಿತ ಚಿತ್ರ ಅಕ್ಟೋಬರ್ 6ಕ್ಕೆ ಬಿಡುಗಡೆ
ನಟ ರಾಕ್ಷಸ ಡಾಲಿ ಧನಂಜಯ್ ಚಿತ್ರದಲ್ಲಿ ಜಗ್ಗೇಶ್ ಅವರ ಜೊತೆ ಮತ್ತೊಬ್ಬ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ನಿರಂಜನ ಬಾಬು ಅವರ ಛಸಯಾಗ್ರಹಣ, ಅರುಣ್ ಆಂಡ್ರ್ಯೂ ಅವರ ಸಂಗೀತ ಸಂಯೋಜನೆಯಿದೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸುಮನ ರಂಗನಾಥ್, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿದಿವೆ.