Left Ad
Totapuri-2 review; ಮಾನವೀಯ ಮೌಲ್ಯಗಳ ಬಗ್ಗೆ ಕಾ`ಮಿಡಿ'ಯಾಗಿ ಹೇಳುವ `ಗಂಭೀರ' ಪ್ರಯತ್ನ! - Chittara news
# Tags

Totapuri-2 review; ಮಾನವೀಯ ಮೌಲ್ಯಗಳ ಬಗ್ಗೆ ಕಾ`ಮಿಡಿ’ಯಾಗಿ ಹೇಳುವ `ಗಂಭೀರ’ ಪ್ರಯತ್ನ!

ನಿರ್ದೇಶನ : ವಿಜಯ ಪ್ರಸಾದ್
ನಿರ್ಮಾಣ: ಸುರೇಶ್ ಆರ್ಟ್ಸ್
ತಾರಾಗಣ:  ಜಗ್ಗೇಶ್ , ಧನಂಜಯ್ , ಅದಿತಿ, ಸುಮನ್, ವೀಣಾ ಸುಂದರ್, ದತ್ತಣ್ಣ, ಹೇಮಾದತ್

ವಿಭಿನ್ನ ಪೋಸ್ಟರ್‌ಗಳಿಂದ, ಹಾಡಿನಿಂದ, trailerನಿಂದ, ತಾರಾಗಣದಿಂದ ಸಾಕಷ್ಟು ನಿರೀಕ್ಷೆ ಹುಟ್ಟಿದಿದ್ದ `ತೋತಾಪುರಿ-2′ ಚಿತ್ರಕ್ಕೆ ಪ್ರೇಕ್ಷಕ ಉಘೇ ಅಂದಿದ್ದಾನೆ, ಹಾಗಿದ್ದರೆ ಚಿತ್ರದ ವಿಶೇಷತೆ ಏನು?ಭಾರತೀಯ ಸಂವಿಧಾನಕ್ಕೆ ತನ್ನದೇ ಆದ ಸ್ಥಾನವಿದೆ, ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೂ ಮಹತ್ತರವಾದ ಸ್ಥಾನವಿದೆ ಎಂಬುದನ್ನು ನಿರ್ದೇಶಕರು ಕಟ್ಟಿಕೊಟ್ಟ ಈರೇಗೌಡ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ದೇವರೆಂದು ಪೂಜಿಸುವ ಒಂದು ಸಾರ್ಥಕ್ಯದ ದೃಶ್ಯವೊಂದು ಸಾಕು `ತೋತಾಪುರಿ-2’ ಚಿತ್ರ ಈಗಿನ ಸಮಾಜಕ್ಕೆ ಹಿಡಿದ ಕನ್ನಡಿ ಎಂಬುದನ್ನು ಅರ್ಥಮಾಡಿಕೊಳ್ಳಲು.

ಇದನ್ನೂ ಓದಿ:  Sapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..!

`ತೋತಾಪುರಿ’ ಮೊದಲ ಭಾಗ ನೋಡಿ, `ಸಿನಿಮಾ ಡಬಲ್ ಮೀನಿಂಗ್ ದಾಟಿ ತ್ರಿಬಲ್ ಮೀನಿಂಗ್ ಪ್ರಮೋಶನ್ ತೆಗೆದುಕೊಂಡಿದೆ’ ಎಂದು ಹುಬ್ಬೇರಿಸಿದವರಿಗೆ `ತೋತಾಪುರಿ-2’ ಕೊಂಚ ಮಟ್ಟಿಗೆ ಸಮಾಧಾನ ನೀಡುತ್ತದೆ. ಹಾಗಂತ ಈ ಚಿತ್ರದಲ್ಲಿ ಡಬಲ್ ಮೀನಿಂಗ್, ತ್ರಿಬಲ್ ಮೀನಿಂಗ್ ಇಲ್ಲವೇ ಇಲ್ಲ ಎಂದಲ್ಲ, ನಿರ್ದೇಶಕ ವಿಜಯ್ ಪ್ರಸಾದ್ ಬದುಕಿನ ಗಂಭೀರ ವಿಷಯಗಲನ್ನು ಅಲ್ಲಲ್ಲಿ ತ್ರಿಬಲ್ ಮೀನಿಂಗ್ ಹೇಳುತ್ತಾ `ಹೌದಲ್ಲಾ..’ ಎಂದು ಪ್ರೇಕ್ಷಕ ಯೋಚಿಸುವಂತೆ ಮಾಡಿದ್ದಾರೆ.  ಯುವ ಪೀಳಿಗೆಯನ್ನು ದಾರಿ ತಪ್ಪದ ಹಾಗೆ ಖುಷಿಪಡಿಸಲು, ಬಿಸಿಬೇಳೆ ಜೊತೆ ಕೊಡುವ `ಖಾರ’ ಬೂಂದಿ ತರ ಅಲ್ಲಲ್ಲಿ `ಖಾರ ಖಾರ’ ಸಂಭಾಷಣೆಗಳಿವೆ. ಭಾಗ-2ರಲ್ಲಿ ಕೇವಲ ಸಂಭಾಷಣೆಗಷ್ಟೇ ನೇತು ಹಾಕಿಕೊಳ್ಳದ ನಿರ್ದೇಶಕರು, ಕೆಲವೊಂದು ಪಾತ್ರಗಳ ಮೌನದ ಮೂಲಕವೂ ಕಥೆ ಹೇಳಿದ್ದಾರೆ.

ಇದನ್ನೂ ಓದಿKarnataka Bandh: ಕಾವೇರಿ ಕಿಚ್ಚು: ಶಿವಣ್ಣನ ನೇತೃತ್ವದಲ್ಲಿ ಚಿತ್ರರಂಗ ಪ್ರತಿಭಟನೆ; ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನಟರು ಭಾಗಿ

ಮೊದಲ ಭಾಗದ  ಕ್ಲೆöÊಮಾಕ್ಸ್ ಹಂತದಲ್ಲಿ ಎಂಟ್ರಿ ಕೊಟ್ಟಿದ್ದ ನಟ ಧನಂಜಯ್ ಭಾಗ-2ನ್ನು ಸಾರಥಿಯಾಗಿ ನಿಂತು ಮುಂದುವರಿಸಿದ್ದಾರೆ. ಧನಂಜಯ್ ಪ್ರೇಮ-ಪ್ರಣಯ-ವಿರಹ ಅಂತ ಸುತ್ತಾಡಿಕೊಂಡಿದ್ದಾರೆ, ನಟ ಜಗ್ಗೇಶ್ ಪಂಚ್ ಮೇಲೆ ಪಂಚ್ ಕೊಡುತ್ತಾ ತರೆಮೇಲೆ `ಪಂಚೇಶ್ವರ’ನಾಗಿ ಮೆರೆಯುಯ್ಯಾರೆ. ಈ ರೀತಿಯಲ್ಲಿ `ತೋತಾಪುರಿ-2’ ಡಬಲ್ ಒಂದೇ ಸಿನಿಮಾದಲ್ಲಿ ಎರಡು ಸಿನಿಮಾ ನೋಡಿದ ಅನುಭವ ನೀಡುತ್ತದೆ. ಮಾಸ್-ಕ್ಲಾಸ್ ಎರಡನ್ನೂ ಬ್ಯಾಲೆನ್ಸ್ ಮಾಡಿರುವ ನಿರ್ದೇಶಕರು, `ಮರ್ಮವಿಲ್ಲದ ಜಾತಿ-ಧರ್ಮಕ್ಕಿಂತ, ಮಾನವಿತಯೇ ಶ್ರೇಷ್ಠ’ ಎಂಬುವುದನ್ನು ಸಮರ್ಥ ಪಾತ್ರಗಳ ಮೂಲಕ ಹೇಳಿದ್ದಾರೆ.

ಇದನ್ನೂ ಓದಿಆರ್‌ಎಕ್ಸ್‌ 100 ನಿರ್ದೇಶಕ ಅಜಯ್ ಭೂಪತಿ ಪ್ಯಾನ್ ಇಂಡಿಯಾ ಸಿನಿಮಾ ಮಂಗಳವಾರಂ ಎಂಟ್ರಿಗೆ ಮುಹೂರ್ತ ಫಿಕ್ಸ್…ನವೆಂಬರ್ 17ಕ್ಕೆ ಚಿತ್ರ ರಿಲೀಸ್

ಚಿತ್ರದಲ್ಲಿ ಡಬಲ್ ಧಮಾಕವಿದೆ, ಎಂದರೆ ಬೇರೆ ಹಿನ್ನೆಲೆಗಳಿರುವ ಎರಡು ಪ್ರೇಮ ಕಥೆಗಳಿವೆ. ಎರಡೂ ಪ್ರೇಮ ಕಥೆಗಳೂ ಕಾಡುತ್ತವೆ, ಕಾಮಿಡಿ ಜೊತೆ ಜೊತೆಗೆ ಗಂಭೀರ ಮಾನವೀಯ ಮೌಲ್ಯಗಳ ಕುಸಿತಗಳ ಬಗ್ಗೆ ಮಾತನಾಡುತ್ತಾ ಸಾಗುವ ಸಿನಿಮಾ `ತೋತಾಪುರಿ’, ಒಂದು ಹಂತದಲ್ಲಿ ಪ್ರೇಕ್ಷಕನ ಕಣ್ಣೀರಿಗೂ ಕಾರಣವಾಗುತ್ತದೆ. ನಟ ಜಗ್ಗೇಶ್ ಹಾಗೂ ಧನಂಜಯ್ ಇಬ್ಬರೂ ತಮ್ಮ ಪಾತ್ರದ ಆಳ-ಅಗಲವನ್ನು ಸಮರ್ಥವಾಗಿ ಅರ್ಥೈಸಿಕೊಂಡು, ನಿರ್ದೇಶಕರಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಉಳಿದಂತೆ ಅದಿತಿ, ಸುಮನ್, ವೀಣಾ ಸುಂದರ್, ದತ್ತಣ್ಣ, ಹೇಮಾದತ್ ಸೇರಿದಂತೆ ಎಲ್ಲಾ ನಟರು ವಿಜಯ್ ಪ್ರಸಾದ್ ಗರಡಿಯಲ್ಲಿ `ಪಂಚ್’ ಕಲಾವಿದರಾಗಿ ಇಷ್ಟವಾಗುತ್ತಾರೆ. ತೋತಾಪುರಿಗೆ ಉಪ್ಪು-ಖಾರದ ಪುಡಿ ಬರೆಸಿ ತಿಂದಾಗ ಆಗುವ ಖುಷಿಯಷ್ಟೇ ಸಿನಿಮಾ ನೋಡಿದಾಗಲೂ ಆಗುತ್ತದಾ? ಸಿನಿಮಾ ನೋಡಿ!

 

Spread the love
Translate »
Right Ad