ಎರಡು ವರ್ಷಗಳ ಹಿಂದೆ ತೆಲುಗಿನಲ್ಲಿ ತೆರೆಕಂಡ ನಂದಮೂರಿ ಬಾಲಕೃಷ್ಣ ನಟನೆಯ ‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ ‘ದುನಿಯಾ’ ವಿಜಯ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಆ ಮೂಲಕ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ವಿಜಯ್ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದು, ಈ ಬಾರಿಯೂ ವಿಲನ್ ಆಗಿಯೇ ಮಿಂಚಲಿದ್ದಾರೆ. ಹೌದು, ನಯನತಾರಾ ನಟನೆಯ ‘ಮೂಕುತಿ ಅಮ್ಮನ್ 2’ ಸಿನಿಮಾದಲ್ಲಿ ‘ದುನಿಯಾ’ ವಿಜಯ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಗುರುವಾರ (ಮಾ.6) ಈ ಸಿನಿಮಾಗೆ ಮುಹೂರ್ತ ನೆರವೇರಿದೆ.
ನಯನತಾರ ಅಭಿನಯದ ಮೂಕುತಿ ಅಮ್ಮನ್ 2 ಚಿತ್ರದಲ್ಲಿ ಸಲಗ ವಿಜಯ್ ಕುಮಾರ್ ತಮಿಳಿನ ಲೇಡಿ ಸೂಪರ್ ಸ್ಟಾರ್ ಚಿತ್ರದಲ್ಲಿ ವಿಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಟಾಲಿವುಡ್ ಅಂಗಳದಲ್ಲಿ ಬಾಲಯ್ಯನ ಎದುರು ವಿಲನ್ ಆಗಿ ಅಬ್ಬರಿಸಿ ಸೈಮಾ ಮುಡಿಗೇರಿಸಿಕೊಂಡಿದ್ದ ವಿಜಯ್ ಕುಮಾರ್ ಗೆ ಈಮೂಲಕ ಮತ್ತೊಂದು ದೊಡ್ಡ ಅವಕಾಶ ಬಂದಿದೆ. ಸದ್ಯ ಕನ್ನಡದಲ್ಲಿ ಲ್ಯಾಂಡ್ ಲಾರ್ಡ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರೋ ವಿಜಯ್ ಕುಮಾರ್ ಜೊತೆಗೆ ತಮ್ಮದೇ ನಿರ್ದೇಶನದ ಸಿಟಿ ಲೈಟ್ಸ್ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಮೂಕುತಿ ಅಮ್ಮನ್ 2 ಚಿತ್ರದಲ್ಲಿ ಅಭಿನಯಿಸ್ತಿದ್ದಾರೆ.