Sandalwood Leading OnlineMedia

*ಟೋಬಿ ಕಥೆಯೇನು ಗೊತ್ತಾ? T k ದಯಾನಂದ್ ಬರೆದ ಕಾರವಾರದ ವಿಲಕ್ಷಣ ವ್ಯಕ್ತಿಯ ಜೀವನ ಚರಿತ್ರೆಯ ಪುಟಗಳೇ ನಿಜವಾದ ‘ಟೋಬಿ’..*

 

 ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾದ ಫಸ್ಟ್ ಲುಕ್ ಟ್ರೆಂಡಿಂಗ್ ನಲ್ಲಿದೆ. ವಿಲಕ್ಷಣವಾದ ಪೋಸ್ಟರ್ ಇದಾಗಿದ್ದು, ಸಿನಿಮಾದ ಕಥೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಪೋಸ್ಟರ್ಗೂ ಕಥೆಗೂ ಏನಾದರೂ ಸಂಬಂಧವಿದೆಯಾ ಎನ್ನುವ ಪ್ರಶ್ನೆಯೂ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.ಈ ಸಿನಿಮಾದ ಕಥೆ, ಚಿತ್ರಕಥೆ ಬರೆದಿರುವುದು ಕಥೆಗಾರ ಟಿ.ಕೆ.ದಯಾನಂದ್  ಅವರೇ ಸಿನಿಮಾದ ಕಥೆಯ ಗುಟ್ಟನ್ನೂ ರಟ್ಟು ಮಾಡಿದ್ದಾರೆ. ತಾವೇ ಸ್ವತಃ ನೋಡಿದ ಕಾರವಾರದ ವಿಲಕ್ಷಣ ವ್ಯಕ್ತಿಯ ಬದುಕನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರಂತೆ. ಆ ವ್ಯಕ್ತಿಯನ್ನು ನೋಡಿದಾಗಿಂದ, ನನ್ನಲ್ಲಿ ಆತ  ನಾನಾ ರೀತಿಯಲ್ಲಿ ಕಾಡಿದ. ಆ ಕಾಡಿದ ವ್ಯಕ್ತಿಯ ಕಥೆಯೇ ಟೋಬಿ ಸಿನಿಮಾ ಎಂದಿದ್ದಾರೆ ಟಿ.ಕೆ.ದಯಾನಂದ್.

ಇದನ್ನೂ ಓದಿ: ಸೆ.15ಕ್ಕೆ ಬಹುನಿರೀಕ್ಷಿತ `ಬೋಯಾಪಾಟಿರಾಪೋ’ ರಿಲೀಸ್

 ‘ಟೋಬಿ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಮೂಲಕ ರಾಜ್ ಧೂಳೆಬ್ಬಿಸಲು ರೆಡಿಯಾಗಿದ್ದಾರೆ. ಸದ್ಯ ‘ಟೋಬಿ’ ಸಿನಿಮಾದ ಫಸ್ಟ್ ಲುಕ್ ಮೂಲಕ ರಾಜ್ ಬಿ ಶೆಟ್ಟಿ  ಸಂಚಲನ ಮೂಡಿಸಿದ್ದಾರೆಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ನಟ ಕಮ್ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ ಅವರು ಭಿನ್ನ ಕಥೆಗಳನ್ನ ಆಯ್ಕೆ ಮಾಡಿ, ಸಿನಿಮಾ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ರಾಜ್ ಬಿ ಶೆಟ್ಟಿ, ಅವರ ಮೇಲಿನ ಕ್ರೇಜ್ ಫ್ಯಾನ್ಸ್ಗೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ‘ಟೋಬಿ’ ಚಿತ್ರದ ಸುದ್ದಿನೂ ಅದಕ್ಕೆ ಸಾಕ್ಷಿ ಆಗಿದೆ. ಸೋಷಿಯಲ್ ಮೀಡಿಯಾದ ಯಾವುದೇ ಪೇಜ್ ತೆಗೆದ್ರು ಅಷ್ಟೇನೆ, ಅಲ್ಲಿ `ಟೋಬಿ’ ಚಿತ್ರದ ಕ್ರೇಜ್ ಕಂಡು ಬರುತ್ತಿದೆ. ಅಷ್ಟರ ಮಟ್ಟಿಗೆ ಸಿನಿಮಾ ರಿಲೀಸ್ ಮುನ್ನವೇ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ:ಯಶ್ ಮುಂದಿನ ಸಿನಿಮಾ ಶೀಘ್ರದಲ್ಲೇ ಘೋಷಣೆ : ನಂಜನಗೂಡಿನಲ್ಲಿ, ಸ್ಕ್ರಿಪ್ಟ್ ರೆಡಿ ಇದೆ ಎಂದ ರಾಕಿಂಗ್ ಸ್ಟಾರ್ ಯಶ್

 

ಇತ್ತೀಚಿಗಷ್ಟೇ ಟೋಬಿ ಸಿನಿಮಾದ ಸಣ್ಣ ಝಲಕ್‌ವೊಂದು ರಿವೀಲ್ ಆಗಿತ್ತು. ಇದು ಸೋಷಿಯಲ್ ಮೀಡಿಯಾ ಶೇಕ್ ಮಾಡುವಷ್ಟು ಸಿನಿಪ್ರಿಯರ ಗಮನ ಸೆಳೆಯಿತು. ಈಗ ಟೋಬಿ ಚಿತ್ರದ ಫಸ್ಟ್ ರಿವೀಲ್ ಆಗಿದೆ. ಅದರಲ್ಲಿ ರಾಜ್ ಬಿ ಶೆಟ್ಟಿ ಅವರು ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಮೂಗಿಗೆ ರಿಂಗ್ ಧರಿಸಿದ್ದು, ಮುಖದ ಇಂಟು ಮಾರ್ಕ್ ಇದೆ. ಟೋಟಲಿ ರಾ ಲುಕ್‌ನಲ್ಲಿ ಶೆಟ್ರು ಶೈನ್ ಆಗಿದ್ದಾರೆ. ಫಸ್ಟ್‌ ಲುಕ್‌ ಟೀಸರ್‌ನಲ್ಲಿ ರಕ್ತ-ಸಿಕ್ತ ಅವತಾರದಲ್ಲಿ ನಟ ಕಾಣಿಸಿಕೊಂಡಿದ್ದಾರೆ. ‘ಟೋಬಿ’ ಸಿನಿಮಾದ ಮೂಲಕ ಶೆಟ್ರು ಏನೋ ಹೇಳೋದ್ದಕ್ಕೆ ಹೊರಟಿದ್ದಾರೆ ಏನು ಎಂಬ ಕುತೂಹಲ ಈಗಾಗಲೇ ಅಭಿಮಾನಿಗಳಲ್ಲಿ ಮೂಡಿದೆ. ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ಚೈತ್ರಾ ಆಚಾರ್ ನಟಿಸಿದ್ದಾರೆ.

‘ಟೋಬಿ’ ಸಿನಿಮಾದಲ್ಲಿ ಕಂಟೆಂಟ್ ಇದೆ. ಕಮರ್ಷಿಯಲ್ ಟಚ್ ಕೂಡ ಇದೆ. ಎರಡೂ ಇರೋ ಈ ಚಿತ್ರವನ್ನ ಕಂಟೆಂಟ್ ಬೇಸ್ ಕಮರ್ಷಿಯಲ್ ಸಿನಿಮಾ ಅಂತಲೇ ರಾಜ್ ಬಿ ಶೆಟ್ರು ಹೇಳಿಕೊಂಡಿದ್ದಾರೆ. ಜೊತೆಗೆ ಈ ಚಿತ್ರದ ರಾಜ್ ಬಿ ಶೆಟ್ರ ಚಿತ್ರ ಜೀವನದ ಮೊದಲ ಕರ್ಮಷಿಯಲ್ ಸಿನಿಮಾ ಕೂಡ ಆಗಿದೆ. ಫಸ್ಟ್ ಲುಕ್ ನೋಡಿದ್ರೆ ರಾಜ್ ಬಿ ಶೆಟ್ಟಿ ಅವರ ಕೆರಿಯರ್‌ನಲ್ಲಿ ಈ ಸಿನಿಮಾ ಮೈಲುಗಲ್ಲು ಸೃಷ್ಟಿಸೋದಂತೂ ಗ್ಯಾರಂಟಿ ಅಂತಿದ್ದಾರೆ ಸಿನಿಪಂಡಿತರು.

Share this post:

Related Posts

To Subscribe to our News Letter.

Translate »