`ತುರ್ತುನಿರ್ಗಮ’ ಚಿತ್ರದ ಆರಂಭವೇ ವಿಚಿತ್ರ.. ವಿಭಿನ್ನ.. ವಿಕ್ಷಿಪ್ತ. ನಾಯಕ ಸತ್ತು ಶವಾಗಾರದಲ್ಲಿರುತ್ತಾನೆ.. ಅವನು ತನ್ನ ಕೊನೆಯ ಮೂರು ದಿನಗಳನ್ನು ಟೈಮ್ ಲೂಪ್‌ನಲ್ಲಿ ಮರುಕಳಿಸುವ ಅವಕಾಶವನ್ನು ಪಡೆದಾಗ, ಅವನು ಹೇಗೆ ಬದುಕಬಲ್ಲ ಅನ್ನೊಂದಕ್ಕೆ ಇನ್ನೊಂದು ಪಾತ್ರ ಸಾಕ್ಷಿಯಾಗುತ್ತದೆ. ಹೀಗೆ ವಿಭಿನ್ನವಾಗಿ ಆರಂಭವಾಗುವ ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲು ಸ್ಟಾರ್‌ಡಮ್‌ಗೂ, ಮಿಗಿಲಾಗಿ ಒಳ್ಳೆ ಕಂಟೆAಟೆ ಇದ್ದರೆ ಸಾಕು ಎಂಬುದನ್ನು ಪ್ರೂವ್ ಮಾಡಿದೆ. ೧೨ ವರ್ಷಗಳ ನಂತರ ನಟ ಸುನೀಲ್ ರಾವ್ ವಿಕ್ರಮ್ ಪಾತ್ರದಲ್ಲಿ ಅಮೋಘ ಅಭಿನಯದ ಮೂಲಕÀ ಕಮ್‌ಬ್ಯಾಕ್ ಮಾಡಿ `ಎಕ್ಸಕ್ಯೂಸ್ ಮೀ..’ ಎಂದು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.
ಹೆಚ್ಚಿನ ಓದಿಗಾಗಿ;- ‘777 ಚಾರ್ಲಿ’ಯಲ್ಲಿ ತಲೈವಾ ಮೆಚ್ಚಿದ್ದೇನು ಗೊತ್ತಾ?
ಛಾಯಾಗ್ರಾಹಕ ಪ್ರಯಾಗ್ ಮುಕುಂದನ್ ಮತ್ತು ನಿರ್ದೇಶಕ ಹೇಮಂತ್ ಕುಮಾರ್ ಅವರು ಅದ್ಭುತವಾದ ಕೆಲಸ ಮಾಡಿದ್ದಾರೆ. ಹೇಮಂತ್ ಸಾಮಾನ್ಯ ಮಾಂಟೇಜ್ ಶಾಟ್‌ಗಳನ್ನು ಆಯ್ಕೆ ಮಾಡುವ ಬದಲು ಮೂರು ದಿನಗಳಲ್ಲಿ ಎಷ್ಟು ದೂರ ಮತ್ತು ಎಷ್ಟು ವೇಗವಾಗಿ ಹೋಗಬಹುದು ಎಂಬುದನ್ನು ತೋರಿಸಲು ೩೬೦-ಡಿಗ್ರಿ ಹೈಪರ್-ಲ್ಯಾಪ್ಸ್ ಶಾಟ್ ತಂತ್ರವನ್ನು ಬಳಸಿದ್ದು ಚಿತ್ರದ ಕಥೆಗೆ ಪ್ಲಸ್ ಆಗಿದೆ.
ಸಾಮಾನ್ಯವಾಗಿ ಹಾಡುಗಳು, ಆಕ್ಷನ್ ಮತ್ತು ಸೆಂಟಿಮೆAಟ್ ಪ್ರಧಾನವಾಗಿರುವ ಕನ್ನಡದ ಸಾಮಾನ್ಯ ಕಮರ್ಶಿಯಲ್ ಚಿತ್ರಕ್ಕಿಂತ `ತುರ್ತುನಿರ್ಗಮನ’ ವಿಭಿನ್ನವಾಗಿದೆ. ಅದರ ಶಕ್ತಿಯು ಅದರ ವಿಶಿಷ್ಟ ನಿರೂಪಣೆಯಲ್ಲಿದೆ. ಆದರೆ ಟೈಮ್ ಲೂಪ್ ಪರಿಕಲ್ಪನೆಯು ಕನ್ನಡ ಚಿತ್ರರಂಗಕ್ಕೆ ಹೊಸದಾದರೂ, ಕೆಲವು ಸೀಕ್ವೆನ್ಸ್ಗಳು ರಿಪೀಟ್ ಅಗೀದ್ರಿಂದ ಸ್ವಲ್ಪ ಟ್ರಿಮ್ ಮಾಡಲು ಅವಕಾಶವಿತ್ತು.
ಅಭಿನಯಕ್ಕೆ ಬಂದಾಗ, ಸುನೀಲ್ ರಾವ್ ವಿಕ್ರಂ ಆಗಿ ಮಿಂಚಿದ್ದಾರೆ, ಇದು ಇಂದಿನ ಮಧ್ಯಮ ವರ್ಗದ ಸಮಾಜಕ್ಕೆ ಕನ್ನಡಿ ಹಿಡಿದ ಅವರದ್ದಾಗಿದೆ. ವಿ ಶಿವು ಎಂಬ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕೂಡ ಅಸಾಧಾರಣವಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಚಿಕ್ಕದಾದರೂ, ಅವರು ತಮ್ಮ ಸಿಗ್ನೇಚರ್ ಡೈಲಾಗ್ ಡೆಲಿವರಿ ಮತ್ತು ಮ್ಯಾನರಿಸಂನಿAದ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಚ್ಯುತ್ ಕುಮಾರ್ ಕೂಡ ಕಾಮಿಡಿ ಕಚಗುಳಿ ಇಡುವಲ್ಲಿ ಯಶಸ್ವಿಯಾದರೆ, ಸುಧಾರಾಣಿ, ಸಂಯುಕ್ತಾ ಹೆಗ್ಡೆ ಮತ್ತು ಹಿತಾ ಚಂದ್ರಶೇಖರ್‌ನಲ್ಲಿ ಉಳಿದ ಪಾತ್ರವರ್ಗದವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಸಮರ್ಪಕವಾಗಿ ನಿರ್ವಹಿಸಿದ್ದಾರೆ.
ತುರ್ತು ನಿರ್ಗಮನವು ನಾರ್ಮಲ್ ಫಾರ್ಮುಲಾ ಚಿತ್ರಗಳಿಂದ ಬೇಸತ್ತ ಪ್ರೇಕ್ಷಕರಿಗೆ ಹೆಚ್ಚು ಆಪ್ತವಾಗಬಹದು. `ಓ.ಟಿ.ಟಿ’ಯಲ್ಲಿ ಬಂದಮೇಲೆ ನೋಡೋಣ.. ಎಂದು ಸುಮ್ಮನಾದರೆ, ನೀವು ಬಿಗ್‌ಸ್ಕಿçÃನ್‌ನಲ್ಲಿ `ತುರ್ತು ನಿರ್ಗಮನ’ ನೀಡುವ ಬೆಸ್ಟ್ ಅನುಭವ ಮಿಸ್ ಮಾಡ್ಕೋತ್ತೀರಿ.