`ತುರ್ತು ನಿರ್ಗಮನ’: ಇದು ಹೊಸತನದ ಆಗಮನ
Fantasy + science fiction + time loop
ಕೆಲವೊಂದು ಚಿತ್ರಗಳು ಹೇಗಿರಬಹುದು? ಎಂದು ಟ್ರೇಲರ್ ನೋಡಿದಾಗ ತಿಳಿಯುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಹೇಮಂತ್ ಕುಮಾರ್ ನಿರ್ದೇಶಿಸಿರುವ `ತುರ್ತು ನಿರ್ಗಮನ’ ಚಿತ್ರದ ವಿಭಿನ್ನ ಹಾಗೂ ವಿಶೇಷ ಟ್ರೇಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಚಿತ್ರ ಇದೇ ಜೂನ್ 24 ರಂದು ಚಿತ್ರ ಬಿಡುಗಡೆಯಾಗಲಿದ್ದು, `ಎಕ್ಸ್ಕ್ಯೂಸ್‌ಮಿ’ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದ ನಟ ಸುನೀಲ್ ರಾವ್ 12 ವರ್ಷಗಳ ನಂತರ ಮತ್ತೆ `ತುರ್ತು ನಿರ್ಗಮನ’ದ ಮೂಲಗ ರೀಎಂಟ್ರಿ ತೆಗೆದುಕೊಳ್ಳುತ್ತಿದ್ದಾರೆ. ಟ್ರೇಲರ್ ಗಮನಿಸಿದರೆ ಸುನೀಲ್ ರಾವ್ ಅಪರೂಪದ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲಿರೋದು ಖಾತ್ರಿಯಾಗಿದೆ.
ನಿರ್ದೇಶಕ ಹೇಮಂತ್ ಕುಮಾರ್ ಅವರು ಈ ಹಿಂದೆ ಹೇಮಂತ್ ರಾವ್ ಅವರ ಬಳಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ಕೆಲಸ ಮಾಡಿದವರು. ಹೊಸ ರೀತಿಯ ಕಥೆ ಆಧರಿಸಿ ಚಿತ್ರ ಮಾಡಬೇಕೆಂಬ ಅವರ ಕನಸು `ತುರ್ತು ನಿರ್ಗಮನ’ ಚಿತ್ರದ ಮೂಲಕ ಈಡೇರಿದೆ. ಉತ್ತಮ ಚಿತ್ರತಂಡವನ್ನು ಹೊಂದಿರುವ ಹೇಮಂತ್, ಪ್ರೇಕ್ಷಕ ನೀಡುವ ದುಡ್ಡಿಗೆ ಮೋಸವಾಗದ ಸಿನಿಮಾ ಮಾಡಿದ್ದಾರೆ ಎಂಬುದು ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಕಂಟೆಂಟ್ಗಳೇ ಹೇಳುತ್ತಿವೆ.
ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಿತಾ ಚಂದ್ರಶೇಖರ್, ಸಂಯುಕ್ತ ಹೆಗಡೆ, ಸುಧಾರಾಣಿ ಮತ್ತು ಅಚ್ಯುತ್ ಕುಮಾರ್ `ತುರ್ತು ನಿರ್ಗಮನ’ ಎಂಬ ಪ್ರಯೋಗಾತ್ಮಕ ಚಿತ್ರದ ಮೂಲಕ, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಕ್ಯಾಬ್ ಡ್ರೈವರ್ ಪಾತ್ರದಲ್ಲಿ ನಟಿಸಿರುವ ರಾಜ್ ಬಿ ಶೆಟ್ಟಿ ಚಿತ್ರಕ್ಕೆ ಆಯ್ಕೆಯಾಗಿದ್ದು, ‘ಒಂದು ಮೊಟ್ಟೆಯ ಕಥೆ’ ಚಿತ್ರ ಬಿಡುಗಡೆ ಆದಾಗ ನಿರ್ದೇಶಕ ಹೇಮಂತ್ ಕುಮಾರ್ ಕಳುಹಿಸಿದ ಮೂರು ಪುಟಗಳ ಸಂಭಾಷೆಣೆಯನ್ನು ಆಡಿಷನ್‌ನಲ್ಲಿ ಹೇಳುವ ಮೂಲಕ. ಇಲ್ಲಿವರೆಗೆ ಕಾಣಿಸಿಕೊಳ್ಳದೇ ಇರುವ ಸಿರಿಯಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜ್, ಸ್ವತಃ ತಾವೇ ತಮ್ಮ ಪಾತ್ರದ ಬಗ್ಗೆ ಥ್ರಿಲ್ ಆಗಿದ್ದಾರೆ.
ಚಿತ್ರಕ್ಕೆ ಧೀರೇಂದ್ರ ದಾಸ್ ಮೂಡ್ ಸಂಗೀತ, ಪ್ರಯಾಗ್ ಛಾಯಾಗ್ರಹಣವಿದ್ದು, ಕಾರ್ಯಕಾರಿ ನಿರ್ಮಾಪಕ ಶರತ್ ಭಗವಾನ್ ದುಡಿದ್ದಿದ್ದಾರೆ. ಚಿತ್ರವನ್ನು `ಕುಮಾರ್&ಕುಮಾರ್’ ಬ್ಯಾನರ್‌ನಡಿಯಲ್ಲಿ ಭರತ್‌ಕುಮಾರ್ ಮತ್ತು ಹೇಮಂತ್ ಕುಮಾರ್ ನಿರ್ಮಿಸಿದ್ದಾರೆ. `ತುರ್ತು ನಿರ್ಗಮನ’ ಚಿತ್ರ ಬಿಡುಗಡೆಯಾಗಿ ನಟ ಸುನೀಲ್ ರಾವ್ ನಟನನೆಗೆ ಪ್ರೇಕ್ಷಕರು `ವಾವ್’ ಅನ್ನುತ್ತಾರಾ ಕಾದು ನೋಡಬೇಕಿದೆ.
ವಯಸ್ಸಿನ ಭೇದವಿಲ್ಲದೆ ಈ ಸಿನಿಮಾ ಎಲ್ಲರನ್ನೂ ತಲುಪುತ್ತದೆ
“ಹನ್ನೆರಡು ವರ್ಷಗಳ ನಂತರ ಒಂದು ವಿಶೇಷ ಚಿತ್ರದ ಮೂಲಕ ರೀಎಂಟ್ರಿ ಕೊಡ್ತಿರೋದ್ದಕ್ಕೆ ಸಂತೋಷವಿದೆ. ನನ್ನ ಪಾತ್ರ ಎಲ್ಲರಿಗೂ ಒಂದು ಅಚ್ಚರಿಯನ್ನು ನೀಡುವ ಪಾತ್ರವಾಗಿದೆ. ಹೇಮಂತ್ ಕಥೆಯನ್ನು ನನಗೆ ಹೇಳಿದಾಗ, ನಾನು ಪಾತ್ರ ಪರಿಚಯದ ಬಗ್ಗೆ ಕೇಳಿ ಬೆಚ್ಚಿಬಿದ್ದೆ. ಈ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದಾಗ ನನಗೆ ಇನ್ನಷ್ಟು ಆಶ್ಚರ್ಯವಾಯಿತು. ತುರ್ತು ನಿರ್ಗಮನ ಚಿತ್ರವು ವಿಷಯಾಧಾರಿತ ಚಿತ್ರ. ಹೀಗಾಗಿ ಇದು ಸ್ಯಾಂಡಲ್‌ವುಡ್‌ನಲ್ಲಿ ಒಂದು ಮನಮುಟ್ಟುವ ಕಥೆಯಾಗಿದೆ. ವೀಕ್ಷಕರು ನನ್ನ ಈ ಹೊಸ ಪಾತ್ರಕ್ಕೆ ಮೆಚ್ಚುಗೆ ನೀಡುತ್ತಾರೆ ಅಂತಾ ಭಾವಿಸಿದ್ದೇನೆ. ಹೇಮಂತ್ ತಮ್ಮ ಕೆಲಸವನ್ನು ತಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ ಮತ್ತು ಅವರ ಯೋಜನೆಯು ತುಂಬಾ ಅಚ್ಚುಕಟ್ಟಾಗಿದೆ. ಜನರ ಮನ ಮಿಡಿಯವ ವಿಚಾರವನ್ನು ಕಥೆಯ ರೂಪದಲ್ಲಿ ತಂದಿದ್ದಾರೆ. ಇದು ಫ್ಯಾಂಟಸಿ, ವಿಜ್ಞಾನ ವಿಷಯಗಳನ್ನು ಮತ್ತು ಟೈಮ್ ಲೂಪ್ ಅಂಶಗಳನ್ನು ಹೊಂದಿರುವ ಸವಾಲಿನ ಚಿತ್ರ. ಉತ್ಸಾಹಭರಿತ ಮತ್ತು ಹೊಸ ತಂಡದೊAದಿಗೆ ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಯಿತು. ವಯಸ್ಸಿನ ಭೇದವಿಲ್ಲದೆ ಈ ಸಿನಿಮಾ ಎಲ್ಲರನ್ನೂ ತಲುಪುತ್ತದೆ ಎಂಬ ನಂಬಿಕೆ ನನಗಿದೆ’’
– ಸುನಿಲ್ ರಾವ್, ನಟ