ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ 2 ಸಿನಿಮಾ ಬಿಡುಗಡೆಗೆ ಹತ್ತಿರ ಬಂದಿದೆ. ಗಣೇಶೋತ್ಸವಕ್ಕೆ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದ್ದು, ಶೀಘ್ರದಲ್ಲಿ ಸಿನಿಮಾ ರಿಲೀಸ್ ದಿನಾಂಕವೂ ಹೊರಬೀಳಲಿದೆ. ಒಂದೇ ಸೂರಿನಡಿ ಬದುಕುತ್ತಿರುವ ನಾವೆಲ್ಲ ಒಂದೇ ಎನ್ನುವ ಭಾವೈಕ್ಯತೆಯ ಸಂದೇಶ ಹೊಂದಿದ್ದ ತೋತಾಪುರಿ ಚಿತ್ರದ ಮುಂದುವರಿದ ಭಾಗ ತೋತಾಪುರಿ -2 ಶೀಘ್ರದಲ್ಲೇ ತೆರೆಕಾಣಲು ಸಿದ್ದವಾಗಿದೆ. ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಸುರೇಶ್ ಆರ್ಟ್ಸ್, ಮೋನ್ ಫ್ಲಿಕ್ಸ್ ಸ್ಟುಡಿಯೋಸ್ ಮೂಲಕ ಕೆ.ಎ. ಸುರೇಶ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: Sapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..!
ತೋತಾಪುರಿ ಸಿನಿಮಾ ಕಳೆದ ವರ್ಷದ ಸೆ. 30ರಂದು ಬಿಡುಗಡೆ ಆಗಿತ್ತು. ಅಲ್ಲಿಂದ ಇದೀಗ ಸುದೀರ್ಘ ಒಂದು ವರ್ಷದ ಬಳಿಕ ಎರಡನೇ ಭಾಗ ಬಿಡುಗಡೆ ಮಾಡಲು ನಿರ್ಮಾಪಕರು ಪ್ಲಾನ್ ಮಾಡಿದ್ದಾರೆ. ಅದರಂತೆ ಇದೀಗ ಈ ಸಿನಿಮಾದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಸೆ.18ರ ಸೋಮವಾರ ಬೆಳಗ್ಗೆ 9.19ಕ್ಕೆ ಈ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ. ವಿಶೇಷ ಏನೆಂದರೆ, ಈ ಚಿತ್ರದ ಟ್ರೇಲರ್‌ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ. ಡಾಲಿ ಧನಂಜಯ್ ಈ ಚಿತ್ರದಲ್ಲಿ ಜಗ್ಗೇಶ್ ಅವರ ಜೊತೆ ಪೂರ್ಣಪ್ರಮಾಣದ ನಾಯಕನಾಗಿ ಅಭಿನಯಿಸಿದ್ದಾರೆ. ಧನಂಜಯ್ ಹಾಗೂ ಜಗ್ಗೇಶ್ ಅವರ ಕ್ಯಾರೆಕ್ಟರ್ ಲುಕ್ ಗುರುಪೂರ್ಣಿಮೆಯ ದಿನ ಬಿಡುಗಡೆಯಾಗಿತ್ತು. ಮೊದಲ ಭಾಗದಲ್ಲಿ ನವರಸ ನಾಯಕ ಜಗ್ಗೇಶ್, ಅದಿತಿ ಪ್ರಭುದೇವ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಶೀಘ್ರದಲ್ಲಿಯೇ ಸಿನಿಮಾ ತಂಡ ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸಲಿದೆ.

ಇದನ್ನೂ ಓದಿ: ಆರಂಭವಾಯ್ತು `ಟ್ಯೂನ್ 123′ ಅಡಿಯೋ ಸಂಸ್ಥೆ: ಚೊಚ್ಚಲಹಾಡು `ಹಾರೋ ಬಣ್ಣದ ಚಿಟ್ಟೆ’ ಹಾಡಿಗೆ ಯುವ ಪೀಳಿಗೆ ಫಿದಾ!
ನಮ್ಮ ನಿರೀಕ್ಷೆಯಂತೆಯೇ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವ ಮನರಂಜನಾತ್ಮಕ ಕಂಟೆಂಟ್ ಚಿತ್ರದಲ್ಲಿದೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ಜೊತೆ ಪರಿಶುದ್ದ ಹಾಸ್ಯದ ಹೂರಣವೂ ಇರುತ್ತದೆ ಎಂದು ನಿರ್ಮಾಪಕ ಕೆ.ಎ. ಸುರೇಶ್ ಹೇಳಿದ್ದಾರೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸುಮನಾ ರಂಗನಾಥ್, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿದಿವೆ. ನಿರಂಜನ ಬಾಬು ಛಾಯಾಗ್ರಹಣ, ಅರುಣ್ ಆಂಡ್ರ್ಯೂ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಇದನ್ನೂ ಓದಿ: ಟಗರು ಪಲ್ಯ ಸಿನಿಮಾದ ಎರಡನೇ ಹಾಡು ರಿಲೀಸ್…ಸೂರ್ಯಕಾಂತಿ ನಾನು ಎಂದು ಕುಣಿದ ಲವ್ಲಿಸ್ಟಾರ್ ಪುತ್ರಿ
`ತೋತಾಪುರಿ -2′ trailerರಿಲೀಸ್ ಮಾಡಿ ಸಿನಿಮಾ ಬಗ್ಗೆ ಶಿವಣ್ಣ ಮಾತನಾಡಿದ ವಿಡಿಯೋ ಲಿಂಕ್ ಇಲ್ಲಿದೆ..
