Sandalwood Leading OnlineMedia

ಸಲಾರ್ ಸೋಲಿಸಿ ಡುಂಕಿ ಗೆಲ್ಲಿಸಲು ಶಾರುಖ್ ಫ್ಯಾನ್ಸ್ ಜೊತೆಗೂಡಿದ ದಳಪತಿ ವಿಜಯ್ ಫ್ಯಾನ್ಸ್

ಹೊಂಬಾಳೆ ಫಿಲಂಸ್ ನಿರ್ಮಾಣದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಮತ್ತು ಶಾರುಖ್ ಖಾನ್ ನಾಯಕರಾಗಿರುವ ಡುಂಕಿ ಸಿನಿಮಾ ಒಂದೇ ದಿನ ಬಿಡುಗಡೆಯಾಗುತ್ತಿದೆ.ಎರಡೂ ಸಿನಿಮಾಗಳೂ ಡಿಸೆಂಬರ್ 22 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಸಲಾರ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿ ಪ್ರಭಾಸ್ ನಾಯಕರಾಗಿ ನಟಿಸಿದ್ದಾರೆ. ಸಖತ್ ಆಕ್ಷನ್ ಸೀಕ್ವೆನ್ಸ್ ಗಳಿರುವ ಅದ್ಧೂರಿ ನಿರ್ಮಾಣದ ಸಿನಿಮಾ ಇದಾಗಿದೆ.

ಇದನ್ನೂ ಓದಿ  ಅಮಿತಾಭ್ ಮಾಡಿದ ಒಂದು ಟ್ವೀಟ್ ನಿಂದ ಮತ್ತೆ ಶುರುವಾಯ್ತು ಅಭಿ-ಐಶ್ವರ್ಯಾ ವಿಚ್ಛೇದನ ವದಂತಿ

ಕಳೆದ ಬಾರಿ ಪ್ರಶಾಂತ್ ನೀಲ್ ಕೆಜಿಎಫ್ 1 ಸಿನಿಮಾ ರಿಲೀಸ್ ದಿನವೇ ಶಾರುಖ್ ಖಾನ್ ನಾಯಕರಾಗಿದ್ದ ಜೀರೋ ಸಿನಿಮಾ ಬಿಡುಗಡೆಯಾಗಿ ಮಕಾಡೆ ಮಲಗಿತ್ತು. ಇದೀಗ ಮತ್ತೆ ಶಾರುಖ್ ಸಿನಿಮಾ ಪ್ರಶಾಂತ್ ನೀಲ್ ಸಿನಿಮಾ ಜೊತೆ ಪೈಪೋಟಿ ನಡೆಸಲಿದೆ.ಈ ಬಾರಿ ಶಾರುಖ್ ಸಿನಿಮಾ ಗೆಲ್ಲಿಸಲು ತಮಿಳು ಸ್ಟಾರ್ ನಟ ದಳಪತಿ ವಿಜಯ್ ಫ್ಯಾನ್ಸ್ ಸಾಥ್ ನೀಡುತ್ತಿದ್ದಾರೆ. ಲಿಯೋ ಸಿನಿಮಾ ಬಿಡುಗಡೆಯಾದಾಗ ಶಾರುಖ್ ಖಾನ್ ಫ್ಯಾನ್ಸ್ ತಮ್ಮನ್ನು ಬೆಂಬಲಿಸಿದ್ದರು. ಹೀಗಾಗಿ ಈಗ ಡುಂಕಿ ಗೆಲ್ಲಿಸಲು ನಾವು ಜೊತೆಯಾಗೋಣ ಎಂದು ವಿಜಯ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕರೆಕೊಟ್ಟಿದ್ದಾರೆ. ಹೀಗಾಗಿ ತಮಿಳಿನಲ್ಲಿ ಸಲಾರ್ ಗೆ ವಿಜಯ್ ಫ್ಯಾನ್ಸ್ ಗಳಿಂದಲೇ ಹಿನ್ನಡೆಯಾಗಲಿದೆಯೇ ಎಂದು ಕಾದುನೋಡಬೇಕಿದೆ.

Share this post:

Translate »