Sandalwood Leading OnlineMedia

ಬಾಲ್ಯದ ಅಪ್ಪು ರಿಯಲ್‌ ಆಗಿ ಪ್ರತ್ಯಕ್ಷ : ನೋಡಿದವರು ಒಂದು ಕ್ಷಣ ಶಾಕ್..!‌

ಅಪ್ಪು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ದೈಹಿಕವಾಗಿ ಅವರು ಬಿಟ್ಟು ಹೋದರು ಕರುನಾಡ ಮನೆಯಲ್ಲಿ ದೇವರಾಗಿದ್ದಾರೆ. ಅವರ ಹುಟ್ಟಿದ ದಿನ ಬಂದರೆ, ಅವರ ಸ್ಮರಣೆಯ ದಿನ ಬಂದರೆ ಜನರ ಕಣ್ಣಲ್ಲಿ ಈಗಲೂ ನೀರು ಬರುತ್ತೆ, ಮನದಲ್ಲಿ ನೋವು ಹೆಚ್ಚಾಗುತ್ತೆ. ಆದರೂ ಆ ನೋವಿನಲ್ಲಿಯೇ ಅಭಿಮಾನಿಗಳು ಸಮಾಜಮುಖಿ ಕೆಲಸ ಮಾಡುತ್ತಾ, ಅವರ ಒಳ್ಳೆಯ ಗುಣಗಳನ್ನು ಅನುಸರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ನೆನಪನ್ನು, ಅವರ ದೈಹಿಕವಾಗಿದ್ದಾರೆಂಬ ಫೀಲ್‌ ಅನ್ನು ಆಗಾಗ ಅವರಂತೆ ಕೊಂಚ ಹೋಲುವವರು ನೀಡುತ್ತಾರೆ.

ಒಬ್ಬರಂತೆ ಏಲು ಮಂದಿ ಇದ್ದಾರೆ ಎಂಬ ಮಾತು ಇದೆ. ಅಪ್ಪು ಚಿಕ್ಕವರಿದ್ದಾಗಲೇ ಹಲವು ಸಿನಿಮಾಗಳನ್ನು ಮಾಡಿದ್ದರು. ಅದರಲ್ಲೂ ಅಪ್ಪಾಜಿ ಜೊತೆಗೇನೆ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದರು. ಅದರಲ್ಲಿ ಬೆಟ್ಟದ ಹೂ ಸಿನಿಮಾ ಎಲ್ಲರಿಗೂ ಆಲ್‌ ಟೈಮ್‌ ಫೇವರಿಟ್.‌ ಇದೀಗ ಬೆಟ್ಟದ ಹೂ ಸಿನಿಮಾದಲ್ಲಿ ಅಪ್ಪು ಕಂಡಂತೆ ಬಾಲಕನೊಬ್ಬ ಪ್ರತ್ಯಕ್ಷನಾಗಿದ್ದಾನೆ. ಅದು ಕುಂದಾಪುರದಲ್ಲಿ.

ಹೌದು, ಅಪ್ಪು ಅನ್ನೇ ಹೋಲುವ ಈ ಬಾಲಕನ ಹೆಸರು ಮಣಿಕಂಠ. ಈತನ ಮುಖಚರ್ಯೆ, ನಗು, ನೋಟ ಎಲ್ಲದರಲ್ಲೂ ಹೆಚ್ಚಿನ ವ್ಯತ್ಯಾಸವೇನು ಇಲ್ಲ. ಈ ಬಾಲಕ ಈಗ ಸದ್ಯ ಓದುತ್ತಿದ್ದಾನೆ. ಅಭಿಷೇಕ್ ಅವರು ಮಣಿಕಂಠನ ಹತ್ತಿರ ಮಾತಾಡಿಸಿದ್ದಾರೆ. ಯಾರಾದರೂ ನೀನು ಅಪ್ಪು ಸರ್ ಕಾಣಿಸಿದಂತೆ ಕಾಣುತ್ತೀಯ ಅಂತ ಹೇಳಿದ್ದಾರಾ? ಎಂದು ಪ್ರಶ್ನೆ ಮಾಡಿದಾಗ ಹೌದು ಹೇಳಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಕೂಡ ಹಾರ್ಟ್ ಎಮೋಜಿ ಹಾಕಿ ಇಷ್ಟ ಪಟ್ಟಿದ್ದಾರೆ.ಅಪ್ಪು ಅನ್ನೇ ಹೋಲುವ ಈ ಪುಟ್ಟ ಬಾಲಕ ಅಭಿಷೇಕ್ ತೀರ್ಥಹಳ್ಳಿ ಎಂಬುವವರ ಕಣ್ಣಿಗೆ ಬಿದ್ದಿದ್ದಾರೆ. ಕಾರ್ಯಕ್ರಮವೊಂದನ್ನು ಆಯೋಜಿಸಲು ಕುಂದಾಪುರದ ರಟ್ಟಾಡಿ ಹೋಗಿದ್ದರು. ಅಲ್ಲಿ ಅವರಿಗೆ ಬಾಲ್ಯದಲ್ಲಿದ್ದ ಅಪ್ಪು ಅನ್ನೇ ಹೋಲುವ ಪುಟ್ಟ ಬಾಲಕ ಕಣ್ಣಿಗೆ ಬಿದ್ದಿದ್ದಾನೆ. ಅವನೊಂದಿಗೆ ಅಭಿಷೇಕ್ ವಿಡಿಯೋ ಮಾಡಿ, ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Share this post:

Translate »